ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cloudbursts: ಕಿನ್ನೌರ್‌ನಲ್ಲಿ ಮೇಘಸ್ಪೋಟ: 400ಕ್ಕೂ ಹೆಚ್ಚು ಕೈಲಾಸ ಚಾರಣಿಗರ ರಕ್ಷಣೆ

ಹಿಮಾಚಲ ಪ್ರದೇಶ ಕಿನ್ನೌರ್‌ನಲ್ಲಿ ಮೇಘಸ್ಫೋಟ ಉಂಟಾಗಿ ಭಾರೀ ಮಳೆಯಿಂದ ಬುಧವಾರ ಬೆಳಗ್ಗೆ ಟ್ಯಾಂಗ್ಲಿಂಗ್ ಡ್ರೈನ್ ಮೇಲಿನ ಎರಡು ತಾತ್ಕಾಲಿಕ ಸೇತುವೆಗಳು ಕೊಚ್ಚಿ ಹೋಗಿವೆ. ಇದರಿಂದಾಗಿ 400ಕ್ಕೂ ಹೆಚ್ಚು ಚಾರಣಿಗರು ದಾರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವರ ರಕ್ಷಣೆಗೆ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸರು ಧಾವಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆಗಳು

ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಕಿನ್ನೌರ್‌ (Kinnaur) ಜಿಲ್ಲೆಯಲ್ಲಿ ಉಂಟಾದ ಮೇಘಸ್ಫೋಟ (Cloudbursts) ಮತ್ತು ಭಾರಿ ಮಳೆಯಿಂದಾಗಿ (Heavy rain) ಸಿಲುಕಿಕೊಂಡಿದ್ದ ಕೈಲಾಸ ಚಾರಣಕ್ಕೆ (Kailash trek) ತೆರಳುತ್ತಿದ್ದ 400ಕ್ಕೂ ಹೆಚ್ಚು ಯಾತ್ರಿಕರನ್ನು ರಕ್ಷಿಸಲಾಗಿದೆ. ಚಾರಣ ಮಾರ್ಗದಲ್ಲಿದ್ದ ಎರಡು ತಾತ್ಕಾಲಿಕ ಸೇತುವೆಗಳು ಬುಧವಾರ ಬೆಳಗ್ಗೆ ಕೊಚ್ಚಿ ಹೋಗಿದ್ದರಿಂದ ಹಲವು ಪ್ರವಾಸಿಗರು ಸಿಲುಕಿಕೊಂಡಿದ್ದರು. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್)ಯೊಂದಿಗೆ ಇಂಡೋ-ಟಿಬೆಟಿಯನ್ ಗಡಿ ಪೊಲೀಸರು (ಐಟಿಬಿಪಿ) ಕೂಡ ಇಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

ಕಿನ್ನೌರ್‌ನಲ್ಲಿ ಮೇಘಸ್ಫೋಟ ಉಂಟಾಗಿ ಭಾರೀ ಮಳೆಯಿಂದ ಬುಧವಾರ ಬೆಳಗ್ಗೆ ಟ್ಯಾಂಗ್ಲಿಂಗ್ ಡ್ರೈನ್ ಮೇಲಿನ ಸೇತುವೆ ಕೊಚ್ಚಿ ಹೋಗಿದೆ. ಇದರಿಂದಾಗಿ ಹಲವು ಚಾರಣಿಗರು ದಾರಿಯಲ್ಲಿ ಸಿಕ್ಕಿಹಾಕಿಕೊಂಡರು. ಕಿನ್ನೌರ್ ಜಿಲ್ಲಾಡಳಿತವು ಚಾರಣ ಮಾರ್ಗದಲ್ಲಿ ಸಿಲುಕಿರುವ ಯಾತ್ರಿಕರ ಬಗ್ಗೆ ಸಂಕಷ್ಟದ ಕರೆಯನ್ನು ಸ್ವೀಕರಿಸಿದ್ದು, ಬಳಿಕ ಅವರು ಐಟಿಬಿಪಿಗೆ ಮಾಹಿತಿ ನೀಡಿದರು. ತಕ್ಷಣವೇ ಅವರು ರಕ್ಷಣಾ ತಂಡವನ್ನು ನಿಯೋಜಿಸಿದರು.



ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಐಟಿಬಿಪಿ ಚಿತ್ರಗಳನ್ನು ಹಂಚಿಕೊಂಡಿದೆ. ಇದರಲ್ಲಿ ಯಾತ್ರಿಕರನ್ನು ಜಿಪ್‌ಲೈನ್‌ನಲ್ಲಿ ಇರಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದನ್ನು ಕಾಣಬಹುದು. ಚಾರಣಿಗರ ರಕ್ಷಣೆಗೆ ಐಟಿಬಿಪಿ ಪರ್ವತಾರೋಹಣಕ್ಕೆ ಬಳಸುವ ಸಾಮಗ್ರಿಗಳನ್ನು ಬಳಸಿಕೊಂಡಿದೆ. ಒಟ್ಟು 413 ಯಾತ್ರಿಕರನ್ನು ರಕ್ಷಿಸಲಾಗಿದೆ.

ಇದನ್ನೂ ಓದಿ: Physical Abuse Case: ಮಸೀದಿಯಲ್ಲಿ 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮೌಲ್ವಿ ಬಂಧನ

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (SDMA) ವರದಿ ಪ್ರಕಾರ ಈ ವರ್ಷದ ಜೂನ್ 20 ಮತ್ತು ಆಗಸ್ಟ್ 5ರವರೆಗೆ ಹಿಮಾಚಲ ಪ್ರದೇಶದಲ್ಲಿ 194 ಸಾವುಗಳು ಸಂಭವಿಸಿದೆ. ಇನ್ನೊಂದು ವರದಿ ಪ್ರಕಾರ 446 ರಸ್ತೆಗಳು, 360 ವಿತರಣಾ ಪರಿವರ್ತಕಗಳು (DTR) ಮತ್ತು 257 ನೀರು ಸರಬರಾಜು ಯೋಜನೆಗಳು ಅಸ್ತವ್ಯಸ್ತಗೊಂಡಿದ್ದು, ಮೂರು ರಾಷ್ಟ್ರೀಯ ಹೆದ್ದಾರಿಗಳಾದ 305, 003, 05 ಅನ್ನು ನಿರ್ಬಂಧಿಸಲಾಗಿದೆ.