ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sidhu Moosewala: ಸಿದ್ದು ಮೂಸೆವಾಲಾ ಪ್ರತಿಮೆ ಮೇಲೆ ಗುಂಡಿನ ದಾಳಿ: ತಾಯಿಯಿಂದ ಭಾವುಕ ಸಂದೇಶ

ಹರಿಯಾಣದ ಸಾವಂತ್‌ಖೇಡಾ ಗ್ರಾಮದಲ್ಲಿ ದಿವಂಗತ ಪಂಜಾಬಿ ಗಾಯಕ ಸಿದ್ಧು ಮೂಸೆವಾಲಾ ಅವರ ಪ್ರತಿಮೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸ್ಥಳೀಯರಲ್ಲಿ ಭೀತಿ ಹಾಗೂ ಆಕ್ರೋಶವನ್ನೂ ಉಂಟು ಮಾಡಿದೆ. ಈ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರ ತಾಯಿ ಚರಣ್ ಕೌರ್, ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ

ಸಿದ್ದು ಮೂಸೆವಾಲಾ ಪ್ರತಿಮೆ ಮೇಲೆ ದಾಳಿ

ಸಿದ್ಧು ಮೂಸೆವಾಲಾ

Profile Sushmitha Jain Aug 6, 2025 9:08 PM

ಚಂಢೀಗಡ: ಹರಿಯಾಣದ (Haryana) ದಬ್ವಾಲಿಯ (Dabwali) ಸಾವಂತ್‌ಖೇಡಾ ಗ್ರಾಮದಲ್ಲಿರುವ ದಿವಂಗತ ಗಾಯಕ ಸಿದ್ದು ಮೂಸೆವಾಲಾ (Sidhu Moosewala) ಅವರ ಪ್ರತಿಮೆಯ ಮೇಲೆ ಗುಂಡಿನ ದಾಳಿ ನಡೆದ ಘಟನೆಯು ಸ್ಥಳೀಯ ಸಮುದಾಯದಲ್ಲಿ ಆಘಾತ ಉಂಟು ಮಾಡಿದೆ. ಈ ಘಟನೆಯ ನಂತರ, ಸಿದ್ದು ಅವರ ತಾಯಿ ಚರಣ್ ಕೌರ್ (Charan Kaur) ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಸಂದೇಶವೊಂದನ್ನು ಪಂಜಾಬಿಯಲ್ಲಿ ಹಂಚಿಕೊಂಡಿದ್ದಾರೆ.

“ನಮ್ಮ ಮಗನ ಪ್ರತಿಮೆಯ ಮೇಲಿನ ದಾಳಿಯು ನಮ್ಮ ಆತ್ಮಕ್ಕೆ ತಗುಲಿದ ಗಾಯ. ಕೆಲ ದಿನಗಳ ಹಿಂದೆ ನನ್ನ ಮಗನ ಸ್ಮಾರಕದ ಮೇಲೆ ಗುಂಡು ಹಾರಿಸಲಾಯಿತು. ಅದು ಕೇವಲ ಕಲ್ಲಿನ ಪ್ರತಿಮೆಯಲ್ಲ, ಜನರಿಗೆ ಆತನ ಮೇಲಿನ ಪ್ರೀತಿ ಮತ್ತು ಗೌರವದ ಸಂಕೇತ. ನನ್ನ ಮಗ ಜನರ ಹಕ್ಕುಗಳಿಗೆ ಧ್ವನಿಯಾಗಿದ್ದ. ಆದರೆ ದೇವರ ಬಳಿಗೆ ಹೋದ ನಂತರವೂ ಆತನ ಧ್ವನಿಯನ್ನು ಮೌನಗೊಳಿಸಲು ಯತ್ನಗಳು ನಡೆಯುತ್ತಿವೆ” ಎಂದು ಚರಣ್ ಕೌರ್ ಬರೆದಿದ್ದಾರೆ.

“ಈ ದಾಳಿಯು ನಮ್ಮ ಆತ್ಮಕ್ಕೆ ಹೊಡೆದಂತಿದೆ. ಆತನ ಜೀವ ತೆಗೆದ ಶತ್ರುಗಳು, ಸಾವಿನ ನಂತರವೂ ಆವನನ್ನು ಬಿಡುತ್ತಿಲ್ಲ. ಆದರೆ ಅವನ ದಂಗೆಯನ್ನು ವಿರೋಧಿಸಬಹುದಾದರೂ, ಅವನನ್ನು ಅಳಿಸಿ ಹಾಕಲಾಗದು. ಅವನು ಒಂದು ತರಂಗ, ಎಂದೆಂದಿಗೂ ಹರಿಯುವ ತರಂಗ. ಎಲ್ಲರಿಗೂ ಒಂದೇ ಮಾತು, ಒಂದಲ್ಲ ಒಂದು ದಿನ ಎಲ್ಲರೂ ತಮ್ಮ ಕರ್ಮದ ಫಲವನ್ನು ಎದುರಿಸುತ್ತಾರೆ. ನಮ್ಮ ಮೌನ ನಮ್ಮ ಸೋಲಲ್ಲ” ಎಂದು ಚರಣ್ ಕೌರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Physical Assault: ಮಹಿಳೆಗೆ ಕಿರುಕುಳ: ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

ಪ್ರತಿಮೆ ಸ್ಥಾಪನೆ ಮತ್ತು ದಾಳಿ

ಈ ಪ್ರತಿಮೆಯನ್ನು 2024ರಲ್ಲಿ ಜನನಾಯಕ ಜನತಾ ಪಕ್ಷದ (ಜೆಜೆಪಿ) ರಾಜ್ಯಾಧ್ಯಕ್ಷ ದಿಗ್ವಿಜಯ್ ಚೌಟಾಲ ಸ್ಥಾಪಿಸಿದ್ದರು. ವರದಿಯ ಪ್ರಕಾರ, ದಾಳಿಕೋರರು ಜುಲೈ 29ರಂದು ಅಂತಾರಾಷ್ಟ್ರೀಯ ಸಂಖ್ಯೆಯಿಂದ ಚೌಟಾಲ ಅವರಿಗೆ ಗುಂಡಿನ ದಾಳಿಯ ವಿಡಿಯೊವನ್ನು ಕಳುಹಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ದಾಳಿಯ ಜವಾಬ್ದಾರಿಯನ್ನು ಹೊತ್ತಿದೆ ಎಂದು ವರದಿಯಾಗಿದೆ.

2022ರ ಮೇ 29ರಂದು 28 ವರ್ಷದ ಸಿದ್ದು ಮೂಸೆವಾಲಾ ಅವರನ್ನು ಮಾನ್ಸಾದ ಜವಾಹರ್ಕೆ ಗ್ರಾಮದಲ್ಲಿ ಅಪರಿಚಿತ ದಾಳಿಕೋರರು ಕಾರಿನಲ್ಲಿ ಗುಂಡಿಟ್ಟು ಕೊಂದಿದ್ದರು. ಈ ಘಟನೆಯು ದೇಶಾದ್ಯಂತ ಆಘಾತವನ್ನುಂಟು ಮಾಡಿತ್ತು.