Murder Case: ಫುಲ್ ಟೈಮ್ ಸುಪಾರಿ ಕಿಲ್ಲರ್; ಪಾರ್ಟ್ ಟೈಮ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ಕೊಲೆ ಆರೋಪಿ ಕಹಾನಿ ಏನು?
ಬಿಹಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ ಚಂದನ್ ಕುಮಾರ್ ಅಲಿಯಾಸ್ ಚಂದನ್ ಮಿಶ್ರಾ ಕೊಲೆಗೆ ಇದೀಗ ಮಹತ್ವದ ತಿರುವೊಂದು ಸಿಕ್ಕಿದೆ. ಕೊಲೆ ಮಾಡಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು 26 ವರ್ಷದ ತೌಸೀಫ್ ಬಾದ್‌ಶಾ ಎಂದು ಗುರುತಿಸಲಾಗಿದೆ.


ಪಾಟ್ನಾ: ಬಿಹಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ ಚಂದನ್ ಕುಮಾರ್ ಅಲಿಯಾಸ್ ಚಂದನ್ ಮಿಶ್ರಾ (Murder Case) ಕೊಲೆಗೆ ಇದೀಗ ಮಹತ್ವದ ತಿರುವೊಂದು ಸಿಕ್ಕಿದೆ. ಕೊಲೆ ಮಾಡಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು 26 ವರ್ಷದ ತೌಸೀಫ್ ಬಾದ್‌ಶಾ ಎಂದು ಗುರುತಿಸಲಾಗಿದ್ದು, ಈತ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದ ಎಂಬ ಬೆಳಕಿಗೆ ಬಂದಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಚಂದನ್ ಬಕ್ಸಾರ್‌ನನ್ನು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಗೆ ನುಗ್ಗಿದ ದಾಳಿಕೋರರು ಗುಂಡು ಹಾರಿಸಿ ಕೊಂದಿದ್ದರು.
ಕೊಲೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಆಧಾರಿಸಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದರು. ಇದೀಗ ಆರೋಪಿ ತೌಸೀಫ್ ಬಾದ್‌ಶಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಾರು ಚಲಾಯಿಸುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದ. ಆತನ ಯೂಟ್ಯೂಬ್ ಚಾನೆಲ್‌ನಲ್ಲಿ 129 ಕಿರು ವೀಡಿಯೊಗಳಿವೆ. ಹೆಚ್ಚಿನವು ದರೋಡೆಕೋರರ ಪ್ರಮುಖ ಟ್ರೋಪ್‌ಗಳಾದ - ಥಂಪಿಂಗ್ ಮ್ಯೂಸಿಕ್, ಫಾಸ್ಟ್ ಕಟ್‌ಗಳು ಮತ್ತು ಓವರ್-ದಿ-ಟಾಪ್ ಡೈಲಾಗ್‌ಗಳನ್ನು ಆಧರಿಸಿವೆ. ಒಂದು ಕ್ಲಿಪ್‌ನಲ್ಲಿ, ತೌಸೀಫ್ ಮಗುವನ್ನು ತನ್ನ ಮಡಿಲಲ್ಲಿಟ್ಟುಕೊಂಡು ಕಾರು ಚಾಲನೆ ಮಾಡುತ್ತಿರುವುದನ್ನು ಕಾಣಬಹುದು. ಮಗು ಅವನಿಗೆ ಸಂಬಂಧಿಯೇ ಎಂಬುದು ಸ್ಪಷ್ಟವಾಗಿಲ್ಲ. ಇತರ ವೀಡಿಯೊಗಳು ಅವರು ಹಿಂದಿಯಲ್ಲಿದೆ.
ಏನಿದು ಘಟನೆ?
ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿ ಚಂದನ್ ಕುಮಾರ್ ಅಲಿಯಾಸ್ ಚಂದನ್ ಮಿಶ್ರಾ ಎಂಬಾತನನ್ನು ಗುರುವಾರ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಮೃತರನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾದ ಬೇವೂರ್ ಕೇಂದ್ರ ಜೈಲಿನಲ್ಲಿ ಇರಿಸಲಾಗಿತ್ತು. ಜೈಲಿನಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಪೆರೋಲ್ ಮೇಲೆ ಬಿಡುಗಡೆ ಮಾಡಿ, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗ್ಯಾಂಗ್‌ಗಳ ನಡುವಿನ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Triple Murder Case: ಕೊಲೆಯಾದ ರೌಡಿಶೀಟರ್ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ
ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) (ಪ್ರಧಾನ ಕಚೇರಿ) ಕುಂದನ್ ಕೃಷ್ಣನ್, 'ಕೆಲವು ಯುವಕರು ಹಣಕ್ಕಾಗಿ ಗುತ್ತಿಗೆ ಕೊಲೆಗಳಲ್ಲಿ ಭಾಗಿಯಾಗುತ್ತಿರುವುದು ಕಂಡುಬಂದಿದೆ. ಗುತ್ತಿಗೆ ಹಂತಕರ ಮೇಲೆ ನಿಗಾ ಇಡಲು ಹೊಸ ಕೋಶವನ್ನು ರಚಿಸಲಾಗಿದೆ. ಭವಿಷ್ಯದಲ್ಲಿ ಅವರ ಚಟುವಟಿಕೆಗಳನ್ನು ಪರಿಶೀಲಿಸಲು ಈ ಗುತ್ತಿಗೆ ಹಂತಕರ ಡೇಟಾ ಬ್ಯಾಂಕ್ ಅನ್ನು ನಿರ್ವಹಿಸಲಾಗುವುದು' ಎಂದು ಹೇಳಿದ್ದರು.