ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಮೋದಿ ನನ್ನ ಉತ್ತಮ ಸ್ನೇಹಿತ; ಟ್ರಂಪ್‌ ಹೇಳಿಕೆಗೆ ಪ್ರಧಾನಿ ರಿಯಾಕ್ಷನ್‌ ಏನು ಗೊತ್ತಾ?

ಅಮೆರಿಕ ಹಾಗೂ ಭಾರತದ ನಡುವೆ ತೆರಿಗೆ ಯುದ್ಧ (Narendra Modi) ನಡೆಯುತ್ತಿರುವಾಗಲೇ ಡೊನಾಲ್ಡ್‌ ಟ್ರಂಪ್‌ ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ ಎಂದು ಹೇಳಿಕೆ ನೀಡಿದ್ದರು. ಇದೀಗ ಮೋದಿ ಆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿ ನನ್ನ ಉತ್ತಮ ಸ್ನೇಹಿತ ಹೇಳಿಕೆಗೆ ಪ್ರಧಾನಿ ಹೇಳಿದ್ದೇನು?

-

Vishakha Bhat Vishakha Bhat Sep 6, 2025 12:25 PM

ನವದೆಹಲಿ: ಅಮೆರಿಕ ಹಾಗೂ ಭಾರತದ ನಡುವೆ ತೆರಿಗೆ ಯುದ್ಧ (Narendra Modi) ನಡೆಯುತ್ತಿರುವಾಗಲೇ ಡೊನಾಲ್ಡ್‌ ಟ್ರಂಪ್‌ ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ ಎಂದು ಹೇಳಿಕೆ ನೀಡಿದ್ದರು. ಇದೀಗ ಮೋದಿ ಆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿ ಮೋದಿ, ಅಧ್ಯಕ್ಷ ಟ್ರಂಪ್ ಅವರ ಭಾವನೆಗಳನ್ನು ಮತ್ತು ನಮ್ಮ ದ್ವಿಪಕ್ಷೀಯ ಸಂಬಂಧಗಳ ಸಕಾರಾತ್ಮಕ ಮೌಲ್ಯಮಾಪನವನ್ನು ನಾನು ಆಳವಾಗಿ ಗೌರವಿಸುತ್ತೇನೆ ಮತ್ತು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಭಾರತ ಮತ್ತು ಯುಎಸ್‌ನ ನಡುವೆ ತುಂಬಾ ಸಕಾರಾತ್ಮಕ ಮತ್ತು ಭವಿಷ್ಯದೃಷ್ಟಿಯ ವ್ಯಾಪಕ ಮತ್ತು ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವಿದೆ," ಎಂದು ಬರೆದಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ಯಾರಿಫ್ ಯುದ್ಧದ ನಂತರ ಭಾರತವು ರಷ್ಯಾ ಮತ್ತು ಚೀನಾದ ಬೆಂಬಲಕ್ಕೆ ನೀಡುತ್ತಿದೆ ಎಂದು ಆರೋಪಿಸಿದ್ದರು. ಚೀನಾದಲ್ಲಿ ನಡೆದ ಶೃಂಗಸಭೆಯಲ್ಲಿ ಮೂವರು ನಾಯಕರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಕುರಿತು ಪೋಸ್ಟ್‌ ಮಾಡಿದ್ದ ಟ್ರಂಪ್‌ ಚೀನಾದ ಮೇಲಿನ ದ್ವೇಷದಿಂದ ನಾನು ಭಾರತ ಹಾಗೂ ರಷ್ಯಾವನ್ನು ಕಳೆದುಕೊಂಡೆ ಎಂದು ಹೇಳಿದ್ದರು. ನಂತರ ಟ್ರಂಪ್‌ ಮತ್ತೆ ಯೂ ಟರ್ನ್‌ ಹೊಡೆದಿದ್ದರು.

ಇಂದು ಮತ್ತೆ ಪೋಸ್ಟ್‌ ಮಾಡಿದ ಟ್ರಂಪ್‌ ಮೋದಿ ಜೀ ಒಬ್ಬ ಶ್ರೇಷ್ಠ ಪ್ರಧಾನಮಂತ್ರಿಯಾಗಿದ್ದಾರೆ, ನನ್ನ ಸ್ನೇಹ ಯಾವಾಗಲೂ ಅವರೊಂದಿಗೆ ಇರುತ್ತದೆ," ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಮೋದಿ ಅವರು ಒಂದು ಹೆಜ್ಜೆ ಮುಂದಿಟ್ಟು, ಟ್ರಂಪ್ ಅವರ ಭಾವನೆಗಳನ್ನು ಮತ್ತು ದ್ವಿಪಕ್ಷೀಯ ಸಂಬಂಧಗಳ ಸಕಾರಾತ್ಮಕ ಮೌಲ್ಯಮಾಪನವನ್ನು ತಾವು ಹೃದಯಪೂರ್ವಕವಾಗಿ ಗೌರವಿಸುವುದಾಗಿ ತಿಳಿಸಿದ್ದಾರೆ. ನಾನು ಯಾವಾಗಲೂ ಮೋದಿಯವರ ಸ್ನೇಹಿತನಾಗಿರುತ್ತೇನೆ. ಅವರು ಅದ್ಭುತ ಪ್ರಧಾನಮಂತ್ರಿಯಾಗಿದ್ದಾರೆ. ಭಾರತ ಮತ್ತು ಅಮೆರಿಕದ ನಡುವೆ ವಿಶೇಷ ಸಂಬಂಧವಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Modi-Putin: ತೈಲ ಒಪ್ಪಂದದ ಮಾತುಕತೆ; ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್‌

ಭಾರತ ರಷ್ಯಾದಿಂದ ಇಷ್ಟೊಂದು ತೈಲ ಖರೀದಿಸುತ್ತಿದೆ ಎಂದು ತಿಳಿದು ನನಗೆ ತುಂಬಾ ನಿರಾಶೆಯಾಗಿದೆ. ನಾನು ಅದನ್ನು ಅವರಿಗೆ ತಿಳಿಸಿದೆ. ನಾವು ಭಾರತದ ಮೇಲೆ ಬಹಳ ದೊಡ್ಡ ಸುಂಕವನ್ನು ವಿಧಿಸಿದ್ದೇವೆ - ಶೇಕಡಾ 50, ತುಂಬಾ ಹೆಚ್ಚಿನ ಸುಂಕ. ಆದರೆ ವಯಕ್ತಿಕವಾಗಿ ನಾನು ಹಾಗೂ ಮೋದಿ ಉತ್ತಮವಾಗಿದ್ದೇವೆ. ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹವಿದೆ ಎಂದು ಅವರು ಹೇಳಿದರು.