Rohit Sharma: ಗಣೇಶ ಮಂದಿರದಲ್ಲಿ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ರೋಹಿತ್
Mumbai cha Raja: ದೇವಾಲಯದಲ್ಲಿ ರೋಹಿತ್ ಅವರನ್ನು ನೋಡಿದ ಉತ್ಸಾಹಭರಿತ ಜನಸಮೂಹವು ಅವರ ಹೆಸರನ್ನು ಜಪಿಸುತ್ತಾ, ಅವರನ್ನು 'ಮುಂಬೈ ಚಾ ರಾಜ (ಮುಂಬೈನ ರಾಜ)' ಎಂದು ತಮ್ಮ ಎಂದಿನ ಶೈಲಿಯಲ್ಲಿ ಕೂಗಲು ಆರಂಭಿಸಿದರು. ತಕ್ಷಣವೇ ರೋಹಿತ್ ಇದು ದೇವಸ್ಥಾನ ಇಲ್ಲಿ ಈ ರೀತಿ ಮಾಡದಂತೆ ಕಕೈ ಸನ್ನೆಯ ಮೂಲಕ ತಿಳಿಸಿದರು. ತಕ್ಷಣ ಅಭಿಮಾನಿಗಳು ಕೂಡ ಇದಕ್ಕೆ ಸ್ಫಂದಿಸಿದ್ದಾರೆ.

-

ಮುಂಬಯಿ: ಭಾರತದ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ, ಮುಂಬೈಯ ಸ್ಥಳೀಯ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಹೆಸರನ್ನು ಜಪಿಸುವುದನ್ನು ನಿಲ್ಲಿಸುವಂತೆ ಅಭಿಮಾನಿಗಳನ್ನು ಮನವಿ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ನಂತರ ರೋಹಿತ್ ದೀರ್ಘ ವಿರಾಮದಲ್ಲಿದ್ದಾರೆ. ಮತ್ತು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮತ್ತೆ ಆಟಕ್ಕೆ ಮರಳಲಿದ್ದಾರೆ.
ದೇವಾಲಯದಲ್ಲಿ ರೋಹಿತ್ ಅವರನ್ನು ನೋಡಿದ ಉತ್ಸಾಹಭರಿತ ಜನಸಮೂಹವು ಅವರ ಹೆಸರನ್ನು ಜಪಿಸುತ್ತಾ, ಅವರನ್ನು 'ಮುಂಬೈ ಚಾ ರಾಜ (ಮುಂಬೈನ ರಾಜ)' ಎಂದು ತಮ್ಮ ಎಂದಿನ ಶೈಲಿಯಲ್ಲಿ ಕೂಗಲು ಆರಂಭಿಸಿದರು. ತಕ್ಷಣವೇ ರೋಹಿತ್ ಇದು ದೇವಸ್ಥಾನ ಇಲ್ಲಿ ಈ ರೀತಿ ಮಾಡದಂತೆ ಕಕೈ ಸನ್ನೆಯ ಮೂಲಕ ತಿಳಿಸಿದರು. ತಕ್ಷಣ ಅಭಿಮಾನಿಗಳು ಕೂಡ ಇದಕ್ಕೆ ಸ್ಫಂದಿಸಿದ್ದಾರೆ.
ಏತನ್ಮಧ್ಯೆ, ರೋಹಿತ್ ಅವರ ಹೊಸ ಲುಕ್ ಕೂಡ ಗಮನಸೆಳೆದಿದೆ. ಕರ್ಲಿ ಹೇರ್ಸ್ಟೈಲ್ನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. 38 ವರ್ಷದ ರೋಹಿತ್ ತುಂಬಾ ತೆಳ್ಳಗೆ ಕಾಣುತ್ತಿದ್ದಾರೆ.
ಇತ್ತೀಚೆಗೆ, ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನಲ್ಲಿ ನಡೆಸಲಾದ ಪೂರ್ವ-ಋತುವಿನ ಫಿಟ್ನೆಸ್ ಪರೀಕ್ಷೆಯಲ್ಲಿ ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ ಮತ್ತು ಜಿತೇಶ್ ಶರ್ಮಾ ಅವರೊಂದಿಗೆ ರೋಹಿತ್ ಕೂಡ ಫಿಟ್ನೆಸ್ ಪರೀಕ್ಷೆ ನಡೆಸಿ ಉತ್ತೀರ್ಣರಾಗಿದ್ದರು.
ಇದನ್ನೂ ಓದಿ ರೋಹಿತ್ ಶರ್ಮಾರ ಏಕದಿನ ವಿಶ್ವಕಪ್ ಟೂರ್ನಿಯ ಭವಿಷ್ಯವನ್ನು ನುಡಿದ ಇರ್ಫಾನ್ ಪಠಾಣ್!