ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Narendra Modi: ಹೇ..ನರೇಂದರ್‌! ಪ್ರಧಾನಿ ಮೋದಿಗೆ ಇಂದಿರಾ ಗಾಂಧಿ ಬೋಧನೆ-ಏನಿದು ವೈರಲ್‌ ವಿಡಿಯೊ?

India Gandhi Teaches Modi: ಇಷ್ಟು ದಿನ ಇದು ಪ್ರಧಾನಿ ಮೋದಿಯನ್ನು ಒಂದಿಲ್ಲೊಂದು ಹೇಳಿಕೆ ಮೂಲಕ ಟೀಕಿಸುತ್ತಿದ್ದ ಕಾಂಗ್ರೆಸ್‌ ಇದೀಗ ವಿಡಿಯೊವೊಂದನ್ನು ಹರಿ ಬಿಟ್ಟು ಪರೋಕ್ಷವಾಗಿ ಕುಟುಕಿದೆ. ಗ್ರಾಫಿಕ್‌ ಮೂಲಕ ಕ್ರಿಯೇಟ್‌ ಮಾಡಿರುವ ಈ ವಿಡಿಯೊದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮೋದಿಗೆ ನೀತಿ ಪಾಠ ಹೇಳುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

ಮೋದಿಗೆ ಇಂದಿರಾ ಗಾಂಧಿ ಬೋಧನೆ- ಇಲ್ಲಿದೆ ವಿಡಿಯೊ

Profile Rakshita Karkera May 23, 2025 6:26 PM

ನವದೆಹಲಿ: ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು(Pahalgam Terror Attack) ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಅಪರೇಷನ್‌ ಸಿಂದೂರ್‌(Operation Sindoor), ಅದಾದ ಬಳಿಕ ಪಾಕ್‌ ಜೊತೆ ಕದನ ವಿರಾಮ ಒಪ್ಪಂದದ ಬಗ್ಗೆ ಕಾಂಗ್ರೆಸ್‌ ತೀವ್ರ ಅಸಮಾಧಾನ ಹೊಂದಿದೆ. ಇಷ್ಟು ದಿನ ಇದು ಪ್ರಧಾನಿ ಮೋದಿಯನ್ನು(PM Narendra Modi) ಒಂದಿಲ್ಲೊಂದು ಹೇಳಿಕೆ ಮೂಲಕ ಟೀಕಿಸುತ್ತಿದ್ದ ಕಾಂಗ್ರೆಸ್‌ ಇದೀಗ ವಿಡಿಯೊವೊಂದನ್ನು ಹರಿ ಬಿಟ್ಟು ಪರೋಕ್ಷವಾಗಿ ಕುಟುಕಿದೆ. ಗ್ರಾಫಿಕ್‌ ಮೂಲಕ ಕ್ರಿಯೇಟ್‌ ಮಾಡಿರುವ ಈ ವಿಡಿಯೊದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಅವರು ಮೋದಿಗೆ ನೀತಿ ಪಾಠ ಹೇಳುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಅಲ್ಲದೇ ಮೋದಿ ಸರ್ಕಾರ ಪಾಕ್‌ ಜೊತೆ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವ ನಿರ್ಧಾರ ಸರಿಯಿಲ್ಲ. ಇದೇ ಸ್ಥಾನದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಇದ್ದಾಗ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳನ್ನು ನೆನಪಿಸಿ ಮೋದಿಗೆ ಕಾಂಗ್ರೆಸ್‌ ಚಿವುಟಿದ್ದಾರೆ.

ವೈರಲ್‌ ಆಗ್ತಿರುವ ವಿಡಿಯೊ ಇಲ್ಲಿದೆ



ಅಷ್ಟಕ್ಕೂ ವಿಡಿಯೊದಲ್ಲಿ ಏನಿದೆ?

ವೈರಲಾಗ್ತಿರುವ ವಿಡಿಯೊದಲ್ಲಿ ಪ್ರಧಾನಿ ಮೋದಿಗೆ ಇಂದಿರಾ ಗಾಂಧಿಯವರು ನೀತಿ ಪಾಠ ಹೇಳುತ್ತಿದ್ದಾರೆ. ಹೇ.. ನರೇಂದರ್‌ ನೀನು ತಲೆ ಬಾಗಬಾರದಿತ್ತು. ಎಲ್ಲಾ ವಿಪಕ್ಷಗಳನ್ನು ವಿಶ್ವಾಸಕ್ಕೆ ಪಡೆದಿರುವಾಗ, ಸೇನೆ ಮುನ್ನುಗ್ಗುತ್ತಿರುವಾಗ, ವಿಜಯದ ಹೊಸ್ತಿಲಲ್ಲಿರುವಾಗ ಅಮೆರಿಕದ ಮಾತನ್ನು ಕೇಳಿ ಕದನ ವಿರಾಮಕ್ಕೆ ಒಪ್ಪಬಾರದಿತ್ತು. ತಲೆ ಬಾಗಬಾರದಿತ್ತು. ಪಾಕಿಸ್ತಾನವನ್ನು ಎರಡು ಭಾಗ ಮಾಡಲಾಗಿತ್ತು. ನನ್ನನ್ನು ಅಮೆರಿಕ ಹೆದರಿಸುವ ಪ್ರಯತ್ನ ಮಾಡಿತ್ತು. ಹೆದರಿ ಸಮರ ನಿಲ್ಲಿಸುವ ಪ್ರಯತ್ನ ನಾನೆಂದೂ ಮಾಡಿಲ್ಲ. ನಾನೆಂದೂ ತಲೆ ಬಾಗಿಲ್ಲ. ಕದನ ವಿರಾಮ ಘೋಷಿಸಲು ಅಮೆರಿಕ ಯಾರು? ಅಮೆರಿಕದ ವಿರುದ್ಧ ತಲೆಬಾಗುವವರು ಹೇಡಿಗಳು. ಡೊನಾಲ್ಡ್‌ ನಿನ್ನ ಮಿತ್ರ.. ನೀನು ಅವನೆದುರು ನೀನು ತಲೆಬಾಗಬಾರದಿತ್ತು ಎಂದು ಇಂದಿರಾಜೀ ಹೇಳುತ್ತಿರುವುದು ಕಾಣಬಹುದಾಗಿದೆ.