Kumar Sanu: ಮುಗಿಯದ ಮಾಜಿ ಪತಿ-ಪತ್ನಿಯರ ಕಿತ್ತಾಟ; ರೀಟಾ ಭಟ್ಟಾಚಾರ್ಯಗೆ ಕೌಂಟರ್ ನೀಡಿದ ಗಾಯಕ ಕುಮಾರ್ ಸಾನು
ಕೆಲ ದಿನಗಳ ಹಿಂದೆಯಷ್ಟೇ ರೀಟಾ ಭಟ್ಟಾಚಾರ್ಯ ತಮ್ಮ ಮಾಜಿ ಪತಿ, ಗಾಯಕ ಕುಮಾರ ಸಾನುವನ್ನು ಮದುವೆಯಾಗಿ ಬಹಳ ಹಿಂಸೆಯನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದರು. ತಮ್ಮ ಮೂರನೇ ಮಗು ಜಾನ್ ಕುಮಾರ್ ಸಾನು ಗರ್ಭದಲ್ಲಿದ್ದಾಗ ಕುಮಾರ್ ಸಾನು ಅವರಿಂದ ಚಿತ್ರಹಿಂಸೆಗೆ ಒಳಗಾಗಿದ್ದಾಗಿ ಆರೋಪಿಸಿದ್ದರು. ಆದರೀಗ ಈ ಎಲ್ಲ ಆರೋಪಗಳಿಗೆ ಕುಮಾರ್ ಸಾನು ಕಾನೂನು ಮೂಲಕ ಉತ್ತರ ನೀಡಿದ್ದು, ರೀಟಾಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಕುಮಾರ್ ಸಾನು - ರೀಟಾ ಭಟ್ಟಾಚಾರ್ಯ -

ಮುಂಬೈ: ಬಾಲಿವುಡ್‌ನ (Bollywood) ಖ್ಯಾತ ಗಾಯಕ ಕುಮಾರ್ ಸಾನು (Kumar Saanu) ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. 80ರ ದಶಕದಲ್ಲೇ ಸಿನಿಮಾಗಳಿಗೆ ಹಾಡಲು ಪ್ರಾರಂಭಿಸಿದ್ದ ಅವರು ಸಂಗೀತ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಆದರೆ ತಮ್ಮ ಸಂಗೀತ ಕಲೆಯಿಂದ ಹೆಚ್ಚು ಸದ್ದು ಮಾಡುತ್ತಿದ್ದ ಕುಮಾರ್ ಸಾನು ಇತ್ತೀಚೆಗೆ ವೈಯಕ್ತಿಕ ವಿಷಯಕ್ಕೆ ಸುದ್ದಿಯಾಗುತ್ತಿದ್ದು, ಅವರ ಮಾಜಿ ಪತ್ನಿ ರೀಟಾ ಭಟ್ಟಾಚಾರ್ಯ(Rita Bhattacharya) ಕುಮಾರ್ ಸಾನು ವಿರುದ್ಧ ಗಂಭೀರ ಆರೋಪ(Controversy) ಮಾಡಿದ್ದಾರೆ.
ಇದೀಗ ಅದಕ್ಕೆ ಪ್ರತಿಯಾಗಿ ಕುಮಾರ್ ಸಾನು ಕಾನೂನಾತ್ಮಕವಾಗಿ ಉತ್ತರ ನೀಡಲು ಮುಂದಾಗಿದ್ದು, ತಮ್ಮ ಮಾಜಿ ಪತ್ನಿ ಮಾಡಿದ್ದ ಆರೋಪಗಳಿಗೆ ಕೌಂಟರ್ ಕೊಟ್ಟಿದ್ದಾರೆ.
ಹೌದು, ತಮ್ಮ ಸೊಗಸಾದ ಕಂಠದಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಕುಮಾರ್ ಯಶಸ್ವಿ ಗಾಯಕ ಆಗುವುದರ ಜತೆಗೆ ಭಾರಿ ಬೇಡಿಕೆಯ ಗಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ಆದರೆ ಸದ್ಯ ಅವರು ತಮ್ಮ ಖಾಸಗಿ ಜೀವನ ವಿಷಯವಾಗಿ ಹೆಚ್ಚು ಸುದ್ದಿಯಲ್ಲಿದ್ದು, ಕೆಲ ದಿನಗಳ ಹಿಂದೆಯಷ್ಟೇ ಅವರ ಮಾಜಿ ಪತ್ನಿ ರೀಟಾ ಕುಮಾರ್ ಬಗ್ಗೆ ಆಘಾತಕಾರಿ ವಿಚಾರಗಳನ್ನು ಬಹಿರಂಗಗೊಳಿಸಿದ್ದರು. ತಮ್ಮ ಮಾಜಿ ಪತಿ ಕುಮಾರ್ ಸಾನು ವಿರುದ್ಧ ಆಕ್ರೋಶ ಹೊರ ಹಾಕಿದ್ದ ರೀಟಾ ನಾನು ಗರ್ಭಿಣಿಯಾಗಿದ್ದಾಗ ಗಾಯಕ ಕುಮಾರ್ ಸಾನು ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎಂದು ತಿಳಿಸಿದ್ದರು. ಅಷ್ಟೇ ಅಲ್ಲದೇ ಆ ವೇಳೆ ನಾನು ತೀವ್ರವಾಗಿ ಮಾನಸಿಕ ಹಿಂಸೆ ಅನುಭವಿಸಿದ್ದೆ. ಕುಮಾರ್ ಸಾನು ಕುಟುಂಬಸ್ಥರಿಂದಲೂ ನೋವು, ಕಿರುಕುಳಕ್ಕೆ ಒಳಗಾದೆ. ನನ್ನ ಕಣ್ಣ ಎದುರೇ ಕುಮಾರ್ ಸಾನು ಅಕ್ರಮ ಸಂಬಂಧ ಹೊಂದಿದ್ದರು. ನನಗೆ ಆ ಸಂಗತಿ ತಿಳಿದ ಮೇಲೆ ಅವರು ಕುಟುಂಬ ಸದಸ್ಯರು ಎಲ್ಲರೂ ಸೇರಿ ಕಿರುಕುಳ ನೀಡಲು ಶುರು ಮಾಡಿದ್ದರು ಎಂದು ರಿಟಾ ಭಟ್ಟಾಚಾರ್ಯ ಆರೋಪಗಳ ಸುರಿಮಳೆಗೈದಿದ್ದರು.
ಆದರೀಗ ಇದೇ ಮೊದಲ ಬಾರಿಗೆ ರೀಟಾ ಮಾಡಿದ್ದ ಆರೋಪಗಳ ಬಗ್ಗೆ ಕುಮಾರ್ ಸಾನು ಪ್ರತಿಕ್ರಿಯೆ ನೀಡಿದ್ದಾರೆ. ರೀಟಾ ಭಟ್ಟಾಚಾರ್ಯ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿರುವ ಕುಮಾರ್ ಸಾನು ಮಾಜಿ ಪತ್ನಿ ಮಾಡಿದ್ದ ಆರೋಪಗಳನ್ನೆಲ್ಲಾ ನಿರಾಕರಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಗರ್ಭ ನಿರೋಧಕ ಕಾಪರ್ ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಜನಿಸಿದ ಶಿಶು; ಅಚ್ಚರಿಗೆ ಒಳಗಾದ ವೈದ್ಯರು
ಈ ಬಗ್ಗೆ ಮಾತನಾಡಿರುವ ಕುಮಾರ್ ಸಾನು ವಕೀಲರಾದ ಸನಾ ರಯೀಸ್ ಖಾನ್, ʼʼರೀಟಾ ಭಟ್ಟಾಚಾರ್ಯ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿದೆ. ರೀಟಾ ಅವರು ಕುಮಾರ್ ಅವರ ಮಾನಹಾನಿ ಮಾಡುತ್ತಿದ್ದು, ಅವರ ಹೇಳಿಕೆಗಳು ಅಪಮಾನ ಎಸಗುವಂತಿದೆʼʼ ಎಂದು ನೋಟಿಸ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ʼʼಸಂಗೀತ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ಕಲಾ ಸೇವೆ ಸಲ್ಲಿಸಿರುವ ಕುಮಾರ್ ಸಾನು ತಮ್ಮ ಜೀವನವನ್ನೇ ಸಂಗೀತಕ್ಕೆ ಮುಡಿಪಾಗಿಟ್ಟಿದ್ದಾರೆ. ಲಕ್ಷಾಂತರ ಜನರನ್ನು ತಮ್ಮ ಗಾಯನದ ಮೂಲಕ ರಂಜಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಅವರು, ಪ್ರಪಂಚದೆಲ್ಲೆಡೆ ಪ್ರೀತಿ ಮತ್ತು ಗೌರವ ಗಳಿಸಿದ್ದಾರೆʼʼ ಎಂದು ವಕೀಲರು ಹೇಳಿದ್ದಾರೆ.
"ಹಾನಿಕಾರಕ ಹೇಳಿಕೆಗಳು, ಸುಳ್ಳು ಆರೋಪಗಳು ಈ ಕ್ಷಣಕ್ಕೆ ಸದ್ದು ಮಾಡಬಹುದು. ಆದರೆ ಕಳೆದ ನಾಲ್ಕೈದು ದಶಕಗಳಿಂದ ಸಂಗೀತ ಮತ್ತು ನೆನಪುಗಳನ್ನು ನೀಡಿರುವ ಕಲಾವಿದನ ಛಾಪನ್ನು ಎಂದಿಗೂ ನಾಶ ಮಾಡಲು ಸಾಧ್ಯವಿಲ್ಲ" ಎಂದು ಸನಾ ಖಾನ್ ರೀಟಾಗೆ ತಿರುಗೇಟು ನೀಡಿದ್ದಾರೆ.
ಅಲ್ಲದೇ ಕುಮಾರ್ ಸಾನು ಅವರ ಘನತೆಗೆ ಧಕ್ಕೆ ಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಹೋರಾಟ ಮಾಡಲು ಸಿದ್ಧ ಎಂದು ವಕೀಲರು ಹೇಳಿದ್ದಾರೆ. "ಅವರ ಘನತೆ, ಪರಂಪರೆ ಮತ್ತು ಕುಟುಂಬದ ಗೌರವವನ್ನು ಕಾಪಾಡಿಕೊಳ್ಳಲು, ಅವರ ವಿರುದ್ಧ ಉದ್ದೇಶ ಪೂರ್ವಕವಾಗಿ ಮಾನಹಾನಿ ಹೇಳಿಕೆಗಳನ್ನು ನೀಡುವ ಪ್ರಯತ್ನಗಳನ್ನು ಕಾನೂನಿನ ಸಹಾಯದಿಂದ ಎದುರಿಸುತ್ತೇವೆʼʼ ಎಂದಿದ್ದಾರೆ.
ಕುಮಾರ್ ಸಾನು ಮತ್ತು ರೀಟಾ ಭಟ್ಟಾಚಾರ್ಯ ಅವರದ್ದು ಲವ್ ಮ್ಯಾರೇಜ್. ಕೋಲ್ಕತಾದಲ್ಲಿ ಪರಿಚಯವಾದ ಇಬ್ಬರು ಆ ನಂತರ ಪ್ರೀತಿಯಲ್ಲಿ ಬಿದ್ದರು. 1986ರಲ್ಲಿ ಮನೆಯವರ ವಿರೋಧದ ನಡುವೆ ಮದುವೆ ಕೂಡ ಆದರು. 1990ರಲ್ಲಿ ಕುಮಾರ್ ಸಾನು ಅದೃಷ್ಟ ಖುಲಾಯಿಸಿತು. ಇಲ್ಲಿಂದ ಅವರಲ್ಲಿನ ವರ್ತನೆ ಕೂಡ ಬದಲಾಯ್ತು ಎನ್ನುವ ಆರೋಪವನ್ನು ಕೂಡ ಮಾಡಿರುವ ರೀಟಾ 1994ರಲ್ಲಿ ಕುಮಾರ್ ಸಾನು ಅವರಿಂದ ವಿಚ್ಛೇದನ ಪಡೆದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಇವರಿಬ್ಬರಿಗೆ ಜೀಕೋ, ಜೆಸ್ಸಿ ಮತ್ತು ಜಾನ್ ಎಂಬ ಮೂವರು ಮಕ್ಕಳಿದ್ದಾರೆ.