Lal Bahadur Shastri: ಲಾಲ್ ಬಹದ್ಧೂರ್ ಶಾಸ್ತ್ರಿ ಬಗ್ಗೆ ನಿಮಗೆ ಗೊತ್ತಿರದ ಕುತೂಹಲ ಸಂಗತಿಗಳಿವು
ಗಾಂಧಿ ಜಯಂತಿ ದಿನದಂದೆ ಶಾಸ್ತ್ರಿಯವರ ಜನ್ಮ ದಿನಾಚರಣೆ ಆಚರಿಸಲಾಗುತ್ತದೆ. ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿ ಕಾರ್ಯಚರಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಗಾಂಧೀಜಿಯವರು ಪ್ರಾರಂಭಿಸಿದ ಅಹಿಂಸಾತ್ಮಕ ಸ್ವಾತಂತ್ಯ ಚಳವಳಿಯಲ್ಲಿ ಭಾಗವಹಿಸಿ. ನಮ್ಮ ದೇಶದ ಸ್ವಾತಂತ್ಯಕ್ಕಾಗಿ ಶ್ರಮಿಸಿದರು.

ಲಾಲ್ ಬಹದ್ದೂರ್ ಶಾಸ್ತ್ರಿ -

ಬೆಂಗಳೂರು: ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನವನ್ನು ಪ್ರತಿವರ್ಷ ಅಕ್ಟೋಬರ್ 2ರಂದು ದೇಶಾದ್ಯಂತ ಆಚರಿಸಲಾಗುತ್ತದೆ. ಶಾಸ್ತ್ರಿಯವರು ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯ ಮೊಘಲ್‌ಸರಾಯ್‌ನಲ್ಲಿ 1904 ಅಕ್ಟೋಬರ್ 2ರಂದು ಜನಿಸಿದರು. ಗಾಂಧಿ ಜಯಂತಿ ದಿನದಂದೆ ಶಾಸ್ತ್ರಿಯವರ ಜನ್ಮ ದಿನಾಚರಣೆ ಆಚರಿಸಲಾಗುತ್ತದೆ. ಅವರ ತಂದೆ ಶಾರದಾ ಪ್ರಸಾದ್ ಮತ್ತು ತಾಯಿ ರಾಮದುಲಾರಿ ದೇವಿ. ಶಾಸ್ತ್ರಿಯವರು ಶಾಲೆಯನ್ನು ತೊರೆದು 1920ರಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಅಹಿಂಸಾತ್ಮಕ ಸ್ವಾತಂತ್ಯ ಚಳವಳಿಯಲ್ಲಿ ಭಾಗವಹಿಸಿ. ನಮ್ಮ ದೇಶದ ಸ್ವಾತಂತ್ಯಕ್ಕಾಗಿ ಶ್ರಮಿಸಿದರು. ಅವರ ಜನ್ಮ ವಾರ್ಷಿಕೋತ್ಸವದಂದು ಶಾಸ್ತ್ರಿಯವರ ಜೀವನ, ರಾಜಕೀಯ ಜೀವನದ ಬಗ್ಗೆ ಇಲ್ಲಿದೆ ಮಾಹಿತಿ.
ರಾಜಕೀಯ ಜೀವನ ಆರಂಭ
ಪಂಡಿತ್ ಜವಾಹರಲಾಲ್ ನೆಹರು ಅವರ ಮರಣದ ನಂತರ, ದೇಶದ ಎರಡನೇ ಪ್ರಧಾನಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೂನ್ 09ರಂದು 1964 ರಂದು ಪ್ರಮಾಣವಚನ ಸ್ವೀಕರಿಸಿದರು. ಆದರೆ ದುರದೃಷ್ಟವಶಾತ್ ಅಧಿಕಾರ ಚುಕ್ಕಾಣಿ ಹಿಡಿದು ಕೇವಲ ಒಂದೂವರೆ ವರ್ಷಕ್ಕೆ ನಿಧಾನವಾದರು. 11 ಜನವರಿ 1966 ರಂದು ನಿಧನರಾದ ಶಾಸ್ತ್ರಿಯವರ ಅವರ ಸಾವಿಗೆ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲ್ಲಾದರೂ, ವಿಷ ಕುಡಿಸಿ ಹತ್ಯೆ ಮಾಡಲಾಗಿದೆ ಎಂಬ ಅನುಮಾನವನ್ನು ಹಲವಾರು ಜನ ವ್ಯಕ್ತ ಪಡಿಸುತ್ತಾರೆ.
ಪ್ರಾಮಾಣಿಕ ರಾಜಕಾರಣಿ
ಗಾಂಧಿ ತತ್ವಗಳನ್ನು ಅನುಸರಿಸುತ್ತಿದ್ದ ಶಾಸ್ತ್ರಿಯವರು ಸ್ವಾತಂತ್ರ್ಯ ಸೇನಾನಿಯಾಗಿದ್ದರು. ಈ ದೇಶ ಕಂಡ ಸರಳ ಹಾಗೂ ಸಜ್ಜನ ಅತ್ಯುತ್ತಮ ಪ್ರಧಾನಿ ಎಂಬ ಬಿರುದು ಅವರ ಪಾಲಿಗೆ ಇತ್ತು. ಪ್ರಾಮಾಣಿಕತೆಗೆ ಬದ್ಧರಾಗಿದ್ದ ಅವರು ತನ್ನ ಅಚಲ ನಿರ್ಧಾರ, ಅದಮ್ಯ ಸಮಯ ಪ್ರಜ್ಞೆ, ಆಗಾಧ ಅರಿವು ಇವುಗಳಿಂದ ಅಧಿಕಾರದುದ್ದಕ್ಕೂ ಎದುರಾದ ಎಲ್ಲ ರಾಷ್ಟ್ರೀಯ, ರಾಜಕೀಯ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದರು. ದೇಶದ ಆರ್ಥಿಕ ಹಾಗೂ ಸಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದರು.
ಘೋಷ ವಾಕ್ಯ
'ಭಾರತದ ಸಮಗ್ರತೆ ಹಾಗೂ ರಾಷ್ಟ್ರ ಧ್ವಜದ ಗೌರವ ಕಾಪಾಡಲು ನಮ್ಮ ಬದುಕಿನ ಕೊನೆ ಕ್ಷ ಣದ ವರೆಗೂ ಹೋರಾಡುತ್ತೇವೆ. ಈ ವಿಷಯದಲ್ಲಿ ನಾವೂ ಸಾವಿಗೂ ಅಂಜುವುದಿಲ್ಲ' ಹಾಗೂ 'ಜೈವಾನ್ ಜೈ ಕಿಸಾನ್' ಎಂಬುದು ಅವರ ಪ್ರಮುಖ ಪ್ರಸಿದ್ಧ ಘೋಷವಾಕ್ಯವಾಗಿದೆ. ಅವರು ಕೊನೆವರೆಗೂ ಸರಳ ಖಾದಿಧಾರಿಯಾಗಿದ್ದು ಸ್ವತಃ ನೂಲುತ್ತಿದ್ದರು. ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ಜನವರಿ 11, 1966ರಲ್ಲಿ ಶಾಸ್ತ್ರೀಜಿ ಅಕಾಲಿಕವಾಗಿ ಸಾವನ್ನಪ್ಪಿದರು. ಚಿಕ್ಕ ದೇಹ ದೊಡ್ಡ ಆದರ್ಶ, ಮೆದು ದನಿ, ಉಗ್ರ ರಾಷ್ಟ್ರ ಭಕ್ತಿ, ದೇಶದ ಪ್ರಧಾನಿಯಾದರೂ ಸರಳತೆ ಬಿಡದ ವ್ಯಕಿತ್ವ, ಪ್ರಾಮಾಣಿಕತೆಯನ್ನೇ ಜೀವಾಳವಾಗಿಸಿಕೊಂಡು ಬದುಕಿದ ಶಾಸ್ತ್ರೀಜಿಯವರ ಆದರ್ಶ ಸರ್ವರಿಗೂ ಅನುಕರಣೀಯ.
ಈ ಸುದ್ದಿಯನ್ನು ಓದಿ:
ಶಾಸ್ತ್ರಿಯವರ ಪ್ರಮುಖ ಹೆಜ್ಜೆಗಳು
- 1921ರಲ್ಲಿ ಅಸಹಕಾರ ಚಳುವಳಿಗೆ ಕೈ ಜೋಡಿಸುವಂತೆ ಗಾಂಧಿ ಶಾಲಾ ಕಾಲೇಜುಗಳಿಗೆ ಕರೆ ನೀಡಿದಾಗ, ಶಾಸ್ತ್ರೀ ಆ ಆಂದೋಲನಕ್ಕೆ ಕೈ ಜೋಡಿಸಿದ್ದರು. ಈ ಮೂಲಕ ಶಾಸ್ತ್ರಿ ಮೊದಲನೇ ಬಾರಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದರು.
- ಅಸಹಕಾರ ಚಳುವಳಿಗೆ ಧುಮುಕಿದ ಶಾಸ್ತ್ರಿಯವರವನ್ನು ಜೈಲಿಗಟ್ಟಲಾಗಿತ್ತು. ಆಗ ಅವರ ವಯಸ್ಸು 17. ಅಪ್ರಾಪ್ತ ಎಂಬ ಕಾರಣಕ್ಕೆ ಅವರನ್ನು ಜೈಲಿನಿಂದ ಮುಕ್ತ ಗೊಳಿಸಲಾಗಿತ್ತು.
1930ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಶಾಸ್ತ್ರಿ ಎರಡೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿ ಸಿದರು. - ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಅಂದರೆ 190, 1941 ರಿಂದ 1946 ರಲ್ಲಿ ಒಟ್ಟು 9 ವರ್ಷಗಳ ಕಾಲ ಶಾಸ್ತ್ರಿ ಜೈಲುವಾಸ ಅನುಭವಿಸಿದ್ದರು.
- ಶಾಸ್ತ್ರಿಯವರು ವರದಕ್ಷಿಣೆಯ ವಿರುದ್ಧ ನಿಲುವು ಹೊಂದಿದ್ದರೂ. ಆದರೂ ವರದಕ್ಷಿಣೆ ಸ್ವೀಕರಿಸಲೇ ಬೇಕು ಎಂದು ಮಾವ ಒತ್ತಾಯಿಸಿದಾಗ, ಅವರ ಒತ್ತಾಯಕ್ಕೆ ಮಣಿದು ಖಾದಿ ಬಟ್ಟೆಯನ್ನು ಸ್ವೀಕರಿಸಿದ್ದರು.
- ಪುಸ್ತಕ ಪ್ರಿಯರಾಗಿದ್ದ ಶಾಸ್ತ್ರಿ ಮೇಡಂ ಕ್ಯೂರಿ ಅವರ ಆತ್ಮಕತೆಯನ್ನು ಹಿಂದೀ ಭಾಷೆಗೆ ಅನುವಾದ ಮಾಡಿದ್ದಾರೆ.
- ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಮಹಿಳಾ ಕಂಡೆಕ್ಟರ್ ನ್ನು ನೇಮಕ ಮಾಡಿದ್ದೇ ಶಾಸ್ತ್ರಿಯವರು. ಶಾಸ್ತ್ರಿಯವರು ಸಾರಿಗೆ ಸಚಿವರಾಗಿದ್ದಾಗ ಅವರು ಮಾಡಿದ ಮೊದಲ ಕೆಲಸ ಇದಾಗಿತ್ತು.
- ಪೊಲೀಸ್ ಇಲಾಖೆಯ ಸಚಿವರಾಗಿದ್ದಾಗ ಶಾಸ್ತ್ರಿಯವರು ಲಾಠಿ ಚಾರ್ಜ್ ಮಾಡುವ ಬದಲು ಜಲ ಫಿರಂಗಿ ಬಳಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದರು.
- 1956ರಲ್ಲಿ ಮೆಹಬೂಬ್ ನಗರ್ ನಲ್ಲಿ ರೈಲ್ವೇ ಅಪಘಾತ ನಡೆದಾಗ ರೈಲ್ವೇ ಸಚಿವರಾಗಿದ್ದ ಶಾಸ್ತ್ರಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.
- ಭ್ರಷ್ಟಾಚಾರ ತಡೆಗಾಗಿ ಸಮಿತಿಯೊಂದನ್ನು ಮೊದಲ ಬಾರಿಗೆ ರೂಪಿಸಿದ ಕೀರ್ತಿ ಶಾಸ್ತ್ರಿಯವರಿಗೆ ಸಲ್ಲುತ್ತದೆ.