Mahadev Betting Scam: ಬೆಟ್ಟಿಂಗ್ ದಂಧೆ ಕೇಸ್‌ನಲ್ಲಿ ಮಾಜಿ ರಾ ಅಧಿಕಾರಿಗೂ ಲಿಂಕ್!
ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಯೊಂದಿಗೆ ಸಂಬಂಧ ಹೊಂದಿರುವ ಆರೋಪದಲ್ಲಿ 2023ರ ಡಿಸೆಂಬರ್ 18ರಂದು ದೆಹಲಿ ಪೊಲೀಸ್ ವಿಶೇಷ ದಳವು ಮಾಜಿ ರಾ ಅಧಿಕಾರಿ ವಿಕಾಸ್ ಯಾದವ್ ಅವರನ್ನು ಬಂಧಿಸಿತು. ಪನ್ನುನ್ ಪ್ರಕರಣಕ್ಕೆ ಸಂಬಂಧಿಸಿ ಯುಎಸ್ ಸಲ್ಲಿಸಿದ ದೋಷಾರೋಪಣೆ ಪಟ್ಟಿಯಲ್ಲಿ ಇವರ ಹೆಸರು ಕೇಳಿ ಬಂದ ಬಳಿಕ ಇವರ ಬಂಧನವಾಗಿತ್ತು. ಇದೀಗ ಇವರ ವಿರುದ್ಧ ಬೆಟ್ಟಿಂಗ್ ದಂಧೆ ಆರೋಪ ಕೇಳಿ ಬಂದಿದೆ.


ನವದೆಹಲಿ: ಅಪಹರಣ, ಹತ್ಯೆ ಯತ್ನ, ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಸುಮಾರು ಒಂದೂವರೆ ವರ್ಷಗಳ ಹಿಂದೆ ಬಂಧಿಸಲಾಗಿರುವ ಮಾಜಿ ರಾ ಅಧಿಕಾರಿ (Ex-RA Officer), ರೋಹಿಣಿ ನಿವಾಸಿ ವಿಕಾಸ್ ಯಾದವ್ (Vikas Yadav) ಬೆಟ್ಟಿಂಗ್ ದಂಧೆಯ (Mahadev Betting Scam) ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು (Delhi Police Special Cell) ತಿಳಿಸಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ (Khalistani terrorist) ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಹತ್ಯೆ ಸಂಚು ರೂಪಿಸಿದವರಲ್ಲಿ ಒಬ್ಬ ಎಂದು ಅಮೆರಿಕ ಅಧಿಕಾರಿಗಳು ವಿಕಾಶ್ ಯಾದವ್ ಅವರನ್ನು ಈ ಹಿಂದೆ ಗುರುತಿಸಿತ್ತು. ಇದೀಗ ಇವರು ಮಹಾದೇವ್ ಆನ್‌ಲೈನ್ ಬುಕ್ ಬೆಟ್ಟಿಂಗ್ ದಂಧೆಯ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಯೊಂದಿಗೆ ಸಂಬಂಧ ಹೊಂದಿರುವ ಆರೋಪದಲ್ಲಿ 2023ರ ಡಿಸೆಂಬರ್ 18ರಂದು ದೆಹಲಿ ಪೊಲೀಸ್ ವಿಶೇಷ ದಳವು ಯಾದವ್ ವಿಕಾಸ್ ಯಾದವ್ ಅವರನ್ನು ಬಂಧಿಸಿತು. ಪನ್ನುನ್ ಪ್ರಕರಣಕ್ಕೆ ಸಂಬಂಧಿಸಿ ಯುಎಸ್ ಸಲ್ಲಿಸಿದ ದೋಷಾರೋಪಣೆ ಪಟ್ಟಿಯಲ್ಲಿ ಇವರ ಹೆಸರು ಕೇಳಿ ಬಂದ ಬಳಿಕ ಇವರ ಬಂಧನವಾಗಿತ್ತು.
ರೋಹಿಣಿ ಪ್ರಕರಣಕ್ಕೆ ಸಂಬಂಧಿಸಿ ಚಾಣಕ್ಯಪುರಿಯಲ್ಲಿ ಜಲಾಲುದ್ದೀನ್ ಅಲಿಯಾಸ್ ಸಮೀರ್ ಎಂಬಾತನನ್ನು ಬಂಧಿಸಲಾಗಿದೆ. ಈತ ದುಬೈನಲ್ಲಿ ಆನ್‌ಲೈನ್ ಬುಕ್ ಆ್ಯಪ್‌ನಲ್ಲಿ ಕೆಲಸ ಮಾಡುತ್ತಿದ್ದ, ದೂರುದಾರನನ್ನು ಅಪಹರಿಸಿ ತಾನು ಪಾವತಿಸಬೇಕಾದ ಹಣವನ್ನು ಪಾವತಿಸದ ಕಾರಣ ಬೆದರಿಕೆ ಹಾಕಲು ವಿಕಾಸ್ ಯಾದವ್ ನನ್ನು ಸಂಪರ್ಕಿಸಿದ್ದಾನೆ ಎನ್ನಲಾಗಿದೆ.
ಕಾರು ವ್ಯಾಪಾರಿಯಾಗಿ ಕೆಲಸ ಮಾಡುವ ತನ್ನ ಸಹಚರ ಖಾನ್‌ನನ್ನು ಸಂಪರ್ಕಿಸಿದ ಯಾದವ್ ಅವರು ಇದಕ್ಕಾಗಿ ಜಲಾಲುದ್ದೀನ್‌ನಿಂದ ಹವಾಲಾ ಮೂಲಕ 16 ಲಕ್ಷ ರೂ.ಗಳನ್ನು ಪಡೆದಿದ್ದ ಎನ್ನಲಾಗಿದೆ.
ಮಹಾದೇವ್ ಹಗರಣದ ತನಿಖೆ ನಡೆಸಲಾಗುತ್ತಿದ್ದು, ಇದರಲ್ಲಿ ಜಲಾಲುದ್ದೀನ್ ಪಾತ್ರದ ಬಗ್ಗೆ ತನಿಖಾಧಿಕಾರಿಗಳು ಜಾರಿ ನಿರ್ದೇಶನಾಲಯಕ್ಕೆ ಈಗಾಗಲೇ ಮಾಹಿತಿ ನೀಡಿರುವ ಸಾಧ್ಯತೆ ಇದೆ.
ಆರೋಪವೇನು?
ವಿಕಾಸ್ ಯಾದವ್ ಅವರು ಜಲಾಲುದ್ದೀನ್ ಅವರ ಆದೇಶದ ಮೇರೆಗೆ ಬಿಷ್ಣೋಯ್ ಅವರಿಂದ ಸುಪಾರಿ ಪಡೆದಿದ್ದರು. ಅಬ್ದುಲ್ಲಾ ಖಾನ್ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಯಾದವ್ ಅವರು ಜಲಾಲುದ್ದೀನ್ ಅವರಿಂದ ಕರೆ ಸ್ವೀಕರಿಸಿದ ಮೇಲೆ ತನಗೆ ಮೊದಲ ಡೋಸ್ ಇಂಜೆಕ್ಷನ್ ನೀಡಲಾಗಿದೆ. ಖಾನ್ ನನ್ನ ತಲೆಗೆ ಹೊಡೆದು, ಚಿನ್ನಾಭರಣಗಳನ್ನು ದೋಚಿ, ಅನಂತರ ನನ್ನ ಕೆಫೆಯಿಂದ ಹಣವನ್ನು ಕದ್ದಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂದಿಸಿದ ಮೂವರು ಆರೋಪಿಗಳಾದ ವಿಕಾಸ್ ಯಾದವ್, ಅಬ್ದುಲ್ಲಾ ಖಾನ್ ಮತ್ತು ಜಲಾಲುದ್ದೀನ್ಪ್ರ ಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಇವರ ವಿರುದ್ಧ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇವರಿಗೆ ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ಬಿಟ್ಟು ಹೋಗಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಜುಲೈ 23ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೌರಭ್ ಪ್ರತಾಪ್ ಸಿಂಗ್ ಲಾಲರ್ ಆದೇಶಿಸಿದ್ದಾರೆ. ಆದರೆ ಇವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ದೂರುದಾರರ ವಕೀಲ ರಾಹುಲ್ ತುಕ್ರಾಲ್ ಹೇಳಿದ್ದಾರೆ. ಆರೋಪಿಗಳು ದೂರುದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ದೂರುದಾರರು ಭಯಭೀತರಾಗಿದ್ದಾರೆ ಎಂದು ತುಕ್ರಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: India vs Pak: ಬಿದ್ದರೂ ಬುದ್ಧಿ ಕಲಿಯದ ಪಾಕ್; ಭಾರತೀಯ ರಾಜತಾಂತ್ರಿಕರಿಗೆ ನೀರು, ಗ್ಯಾಸ್, ಪೇಪರ್ ನಿರ್ಬಂಧ
ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳ ಮೂಲಕ ಸುಮಾರು 6,000 ಕೋಟಿ ರೂ. ಅಕ್ರಮ ವರ್ಗಾವಣೆಯಾಗಿರುವ ಆರೋಪವಿದೆ. ಇದಕ್ಕೆ ಸಂಬಂಧಿಸಿ ಇಡಿ ಹಲವಾರು ಕಡೆಗಳಲ್ಲಿ ದಾಳಿ ನಡೆಸಿದ್ದು, ಛತ್ತೀಸ್‌ಗಢ ನ್ಯಾಯಾಲಯದಲ್ಲಿ ಎರಡು ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ.