ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶದ ಜನತೆಗೆ ನವರಾತ್ರಿ ಶುಭಾಶಯ ಕೋರಿದ ಪ್ರಧಾನಿ ಮೋದಿ

ದೇಶದ ಜನತೆಗೆ ನವರಾತ್ರಿ ಶುಭಾಶಯ ಕೋರಿದ ಪ್ರಧಾನಿ ಮೋದಿ

ದೇಶದ ಜನತೆಗೆ ನವರಾತ್ರಿ ಶುಭಾಶಯ ಕೋರಿದ ಪ್ರಧಾನಿ ಮೋದಿ

-

Profile Vishwavani News Oct 7, 2021 10:24 AM
image-eb604a28-5569-40c9-9864-3cc8f6febea2.jpg
ನವದೆಹಲಿ: ನವರಾತ್ರಿ ಸಂಭ್ರಮ ಗುರುವಾರದಿಂದ ಆರಂಭಗೊಂಡ ಹಿನ್ನಲೆಯಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ತಿಳಿಸಿ ದ್ದಾರೆ. ದುರ್ಗಾ ಮಾತೆಯ ವಿವಿಧ ಅವತಾರಗಳನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಗುವ ನವರಾತ್ರಿ ಇಂದಿನಿಂದ ಆರಂಭಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿಯವರು, ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯ ಗಳು. ಮುಂಬರುವ ದಿನಗಳು ಜಗತ್ ಜನನಿ ಮಾ ಪೂಜೆಗೆ ನಮ್ಮನ್ನು ಅರ್ಪಿಸಿಕೊಳ್ಳುವ ಬಗ್ಗೆಯಾಗಿದೆ. ನವರಾತ್ರಿ ಪ್ರತಿಯೊಬ್ಬರ ಜೀವನದಲ್ಲಿ ಶಕ್ತಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಹೇಳಿದ್ದಾರೆ. ಜನತೆಗೆ ಶುಭಾಶಯ ಕೋರಿರುವ ಜೊತೆಗೆ ಫೋಟೋವೊಂದನ್ನೂ ಮೋದಿಯವರು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮೋದಿಯವರು ದುರ್ಗಾ ಮಾತೆಗೆ ಪೂಜೆ ಮಾಡು ತ್ತಿರುವುದು ಕಂಡು ಬಂದಿದೆ. ಇದಷ್ಟೇ ಅಲ್ಲದೆ, ವಿಡಿಯೋವೊಂದನ್ನೂ ಮೋದಿಯವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಶೈಲಪುತ್ರಿ ದೇವತೆಯ ಸ್ತುತಿ ಇರುವುದು ಕಂಡು ಬಂದಿದೆ. ನವರಾತ್ರಿ ಉತ್ಸವ 9 ದಿನಗಳ ಕಾಲ ನಡೆಯಲಿದ್ದು, ದುರ್ಗೆಯ 9 ಅವತಾರಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.