Nepal Unrest: ನೇಪಾಳದಲ್ಲಿ ಪಾಕ್‌ನ ಐಎಸ್‌ಐ ಪ್ರಾಬಲ್ಯ ಇದ್ಯಾ? ಏನಿದು ಸ್ಫೋಟಕ ಸಂಗತಿ?
ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ನೇಪಾಳದಲ್ಲಿ ಪ್ರಬಲವಾಗಿದೆ ಎಂದು ಭಾರತದ ಮಾಜಿ ಗೂಢಚಾರ ಲಕ್ಕಿ ಬಿಶ್ತ್ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ನಿರ್ದೇಶನದ ಮೇರೆಗೆ ಇದು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

-

ನವದೆಹಲಿ: ನೇಪಾಳದಲ್ಲಿ (Nepal) ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (Pakistan ISI) ಹೆಚ್ಚು ಪ್ರಬಲವಾಗಿದೆ. ಇದು ಕೇಂದ್ರ ಗುಪ್ತಚರ ಸಂಸ್ಥೆಯ ಮಾಸ್ಟರ್ ಪ್ಲಾನ್ ನಂತೆ ಕಾರ್ಯನಿರ್ವಹಿಸುತ್ತದೆ ಎಂದು ಭಾರತದ ಮಾಜಿ ಗೂಢಚಾರ ಲಕ್ಕಿ ಬಿಶ್ತ್ (Ex India Spy Lucky Bisht) ತಿಳಿಸಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯಿಂದ ಪ್ರಭಾವಿತವಾಗಿ ಪಾಕಿಸ್ತಾನದ ಐಎಸ್‌ಐ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತದೆ. ನೇಪಾಳದಲ್ಲಿ ನಡೆಯುತ್ತಿರುವ ಚಳುವಳಿ ಕೇವಲ ಇದರ ಒಂದು ಮುಖ ಮಾತ್ರ ಎಂದು ತಿಳಿಸಿದ್ದಾರೆ.
ನೇಪಾಳದಲ್ಲಿ ಇತ್ತೀಚಿನ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಜೆನ್ ಝಡ್ ಚಳುವಳಿಗೆ ಕೇವಲ ಒಂದು ಮುಖವಾಗಿದೆ. ಆದರೆ ಇದರ ಹಿಂದೆ ಒಂದು ದೊಡ್ಡ ಶಕ್ತಿಯಿದೆ ಎಂದು ತಿಳಿಸಿದರು. ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ನೇಪಾಳದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದೆ. ಇದು ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತದೆ. ಐಎಸ್ಐ ನೇಪಾಳದಲ್ಲಿ ಆಳವಾಗಿ ಬೇರೂರಿದೆ. ಅದು ಸಿಐಎ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು.
#Exclusive | 'Spy' Who Foretold Nepal's Doom
— TIMES NOW (@TimesNow) September 12, 2025
The CIA has toppled governments in more than 60 countries across the world. In our neighborhood, it has allegedly influenced events in Sri Lanka, then Bangladesh, and most recently Nepal. Pakistan is already in a dire situation:… pic.twitter.com/Fyb1cUuGrh
ಚೀನಾ ರಾಷ್ಟ್ರವು ನೇಪಾಳ ಸರ್ಕಾರದ ನೆರಳಿನಲ್ಲಿ ಆಳ್ವಿಕೆ ನಡೆಸುತ್ತಿದೆ ಎಂದು ಲಕ್ಕಿ ಬಿಶ್ತ್, ನೇಪಾಳದಲ್ಲಿ ಈಗ ಪದಚ್ಯುತಗೊಂಡ ಕೆ.ಪಿ. ಶರ್ಮಾ ಒಲಿ ನೇತೃತ್ವದ ಸರ್ಕಾರವು ಚೀನಾ ಬೆಂಬಲಿತ ಆಡಳಿತದಂತಿದೆ ಎಂದು ತಿಳಿಸಿದರು.
ಇದನ್ನೂ ಓದಿ: 39 ಎಸೆತಗಳಲ್ಲಿ ಶತಕ ಬಾರಿಸಿ ಸೂರ್ಯಕುಮಾರ್ ಯಾದವ್‌ರ ದಾಖಲೆ ಸರಿಗಟ್ಟಿದ ಫಿಲ್ ಸಾಲ್ಟ್!
ಇದು ನೇಪಾಳದ ಸರ್ಕಾರವಾಗಿರಲಿಲ್ಲ. ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾ ಬೆಂಬಲಿತ ಆಡಳಿತದಂತಿತ್ತು. ಈ ಸರ್ಕಾರ ಅಧಿಕಾರದಲ್ಲಿ ಉಳಿಯುವುದನ್ನು ಬಯಸದ ಪ್ರಬಲ ಶಕ್ತಿಗಳು ಪಶ್ಚಿಮದಲ್ಲಿವೆ. ನೇಪಾಳದಲ್ಲಿ ಅಮೆರಿಕ ಒಪ್ಪಂದದ ಸರ್ಕಾರ ರಚನೆಯಾಗುತ್ತದೆ ಎಂದು ಜನರು ಈಗ ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು. ಕಳೆದ ಡಿಸೆಂಬರ್ ತಿಂಗಳಲ್ಲೇ ಭಾರತೀಯ ಗೂಢಚಾರರು ನೇಪಾಳದ ಅಶಾಂತಿ ಉಂಟಾಗುವ ಸಾಧ್ಯತೆ ಬಗ್ಗೆ ಹೇಳಿದ್ದರು. ಈಗ ಅದು ನಿಜವಾಗಿದೆ.