ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

39 ಎಸೆತಗಳಲ್ಲಿ ಶತಕ ಬಾರಿಸಿ ಸೂರ್ಯಕುಮಾರ್‌ ಯಾದವ್‌ರ ದಾಖಲೆ ಸರಿಗಟ್ಟಿದ ಫಿಲ್‌ ಸಾಲ್ಟ್‌!

ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಫಿಲ್‌ಸಾಲ್ಟ್‌ ಅವರು ಕೇವಲ 39 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್‌ ಪರ ವೇಗವಾಗಿ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಅಲ್ಲದೆ ಸೂರ್ಯಕುಮಾರ್‌ ಯಾದವ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇಂಗ್ಲೆಂಡ್‌ ಪರ ವೇಗದ ಟಿ20ಐ ಶತಕ ಬಾರಿಸಿದ ಫಿಲ್‌ ಸಾಲ್ಟ್‌!

39 ಎಸೆತಗಳಲ್ಲಿ ಶತಕವನ್ನು ಸಿಡಿಸಿದ ಫಿಲ್‌ ಸಾಲ್ಟ್‌. -

Profile Ramesh Kote Sep 13, 2025 4:45 PM

ಮ್ಯಾಂಚೆಸ್ಟರ್‌: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ (ENG vs SA) ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಫಿಲ್‌ ಸಾಲ್ಟ್‌ (Phil Salt) ಅವರು ಸ್ಪೋಟಕ ಶತಕವನ್ನು ಬಾರಿಸಿದ್ದಾರೆ. ಇವರು ಆಡಿದ ಕೇವಲ 39 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್‌ ಪರ ಟಿ20ಐ ಕ್ರಿಕೆಟ್‌ನಲ್ಲಿ ವೇಗದ ಶತಕವನ್ನು ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಅಲ್ಲದೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಂದ ಹಾಗೆ ಫಿಲ್‌ ಸಾಲ್ಟ್‌ ಅವರ ಶತಕದ ನೆರವಿನಿಂದ ಇಂಗ್ಲೆಂಡ್‌ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 304 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಟಿ20ಐ ಕ್ರಿಕೆಟ್‌ನಲ್ಲಿ ಅತ್ಯಂತ ದೊಡ್ಡ ಮೊತ್ತವನ್ನು ಕಲೆ ಹಾಕಿದ ಐಸಿಸಿ ಪೂರ್ಣ ಪ್ರಮಾಣದ ಸದಸ್ಯತ್ವ ತಂಡ ಎಂಬ ದಾಖಲೆಯನ್ನು ಇಂಗ್ಲೆಂಡ್‌ ಬರೆದಿದೆ.

ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಇಂಗ್ಲೆಂಡ್‌ ತಂಡದ ಇನಿಂಗ್ಸ್‌ನ ಮೊದಲನೇ ಓವರ್‌ನಲ್ಲಿಯೇ ಫಿಲ್‌ ಸಾಲ್ಟ್‌ 18 ರನ್‌ಗಳನ್ನು ಬಾರಿಸಿದ್ದರು. ನಂತರ ಇವರ ಜೊತೆಗಾರ ಜೋಸ್‌ ಬಟ್ಲರ್‌ ಅವರು ಕೇವಲ 18 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದರು. ನಂತರ 30 ಎಸೆತಗಳಲ್ಲಿ 83 ರನ್‌ಗಳನ್ನು ಬಾರಿಸಿದ್ದ ಜೋಸ್‌ ಬಟ್ಲರ್‌ ಕೂಡ ಶತಕದಂಚಿನಲ್ಲಿದ್ದರು. ಆದರೆ, ಬಿಜೋರ್ನ್‌ ಫಾರ್ಚೂನ್‌ ಅವರ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.

ENG vs SA: ದಕ್ಷಿಣ ಆಫ್ರಿಕಾ ವಿರುದ್ಧ 304 ರನ್‌ ಗಳಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್‌!

ನಂತರ ಸ್ಪೋಟಕ ಬ್ಯಾಟಿಂಗ್‌ ಮುಂದುವರಿಸಿದ ಫಿಲ್‌ ಸಾಲ್ಟ್‌ ಹರಿಣ ಪಡೆಯ ಬೌಲಿಂಗ್‌ ದಾಳಿಯನ್ನು ಧ್ವಂಸ ಮಾಡಿದರು. ಅವರು 39 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕವನ್ನು ಸಿಡಿಸಿದರು. ಆ ಮೂಲಕ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಭಾರತದ ಸೂರ್ಯಕುಮಾರ್‌ ಯಾದವ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಂದ ಹಾಗೆ ಫಿಲ್‌ ಸಾಲ್ಟ್‌ ಅವರು ಹ್ಯಾರಿ ಬ್ರೂಕ್‌ ಅವರ ಜೊತೆ 60 ಎಸೆತಗಳಲ್ಲಿ ಅಜೇಯ 141 ರನ್‌ಗಳನ್ನು ಕಲೆ ಹಾಕಿದರು.

ಅತಿ ಹೆಚ್ಚು ಟಿ20ಐ ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು

ಗ್ಲೆನ್‌ ಮ್ಯಾಕ್ಸ್‌ವೆಲ್‌ (ಆಸ್ಟ್ರೇಲಿಯಾ): 5 ಶತಕಗಳು (114 ಇನಿಂಗ್ಸ್‌ಗಳು)

ರೋಹಿತ್‌ ಶರ್ಮಾ (ಭಾರತ): 5 ಶತಕಗಳು (151 ಇನಿಂಗ್ಸ್‌ಗಳು)

ಫಿಲ್‌ ಸಾಲ್ಟ್‌ (ಇಂಗ್ಲೆಂಡ್‌): 4 ಶತಕಗಳು (42 ಇನಿಂಗ್ಸ್‌ಗಳು)

ಸೂರ್ಯಕುಮಾರ್‌ ಯಾದವ್‌ (ಭಾರತ): 4 ಶತಕಗಳು (80 ಇನಿಂಗ್ಸ್‌ಗಳು)



ಇಂಗ್ಲೆಂಡ್‌ ಪರ ವೇಗದ ಶತಕವನ್ನು ಸಿಡಿಸಿಸ ಬ್ಯಾಟ್ಸ್‌ಮನ್‌ಗಳು

9 - ಫಿಲ್ ಸಾಲ್ಟ್ (ದಕ್ಷಿಣ ಆಫ್ರಿಕಾ ವಿರುದ್ಧ) - ಮ್ಯಾಂಚೆಸ್ಟರ್, 2025

42 - ಲಿಯಾಮ್ ಲಿವಿಂಗ್‌ಸ್ಟೋನ್‌ (ಪಾಕಿಸ್ತಾನ ವಿರುದ್ಧ) - ನಾಟಿಂಗ್ಹ್ಯಾಮ್, 2021

48 - ಡೇವಿಡ್ ಮಲಾನ್ (ನ್ಯೂಜಿಲೆಂಡ್‌ ವಿರುದ್ಧ) - ನೇಪಿಯರ್, 2019

48 - ಫಿಲ್ ಸಾಲ್ಟ್ (ವೆಸ್ಟ್‌ ಇಂಡೀಸ್‌ ವಿರುದ್ಧ) - ತರೌಬಾ, 2023



ಅಜೇಯ 141 ರನ್‌ ಕಲೆ ಹಾಕಿದ ಫಿಲ್‌ ಸಾಲ್ಟ್‌

ಈ ಪಂದ್ಯದಲ್ಲಿ ಫಿಲ್‌ ಸಾಲ್ಟ್‌ ಆಡಿದ 60 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ ಅಜೇಯ 141 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಇಂಗ್ಲೆಂಡ್‌ ಪರ ಟಿ20ಐ ಪಂದ್ಯದಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ 146 ರನ್‌ಗಳಿಂದ ಗೆಲುವು ಪಡೆದಿತ್ತು.