ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

NEET Results 2025: ನೀಟ್‌ ಫಲಿತಾಂಶ ಪ್ರಕಟ; ರಿಸಲ್ಟ್‌ ಚೆಕ್‌ ಮಾಡುವ ವಿಧಾನ ಇಲ್ಲಿದೆ

NEET UG: ಬಹುನಿರೀಕ್ಷಿತ ಈ ಸಾಲಿನ ನೀಟ್‌ ಪರೀಕ್ಷೆಯ ಪಲಿತಾಂಶ ಪ್ರಕಟಗೊಂಡಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿರುವ ಈ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ ಫಲಿತಾಂಶವನ್ನು ಜೂ. 14ರಂದು ಪ್ರಕಟಿಸಲಾಗಿದೆ. ರಿಸಲ್ಟ್‌ ಚೆಕ್‌ ಮಾಡುವ ವಿಧಾನ ಇಲ್ಲಿದೆ.

ನೀಟ್‌ ಫಲಿತಾಂಶ ಪ್ರಕಟ; ರಿಸಲ್ಟ್‌ ಚೆಕ್‌ ಮಾಡುವ ವಿಧಾನ ಇಲ್ಲಿದೆ

ಸಾಂದರ್ಭಿಕ ಚಿತ್ರ.

Profile Ramesh B Jun 14, 2025 2:06 PM

ಹೊಸದಿಲ್ಲಿ: ಬಹುನಿರೀಕ್ಷಿತ ಈ ಸಾಲಿನ ನೀಟ್‌ ಪರೀಕ್ಷೆಯ ಪಲಿತಾಂಶ ಪ್ರಕಟಗೊಂಡಿದೆ (NEET UG 2025). ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿರುವ ಈ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (NEET UG) ಫಲಿತಾಂಶವನ್ನು ಜೂ. 14ರಂದು ಪ್ರಕಟಿಸಲಾಗಿದೆ (NEET Results 2025). ಮೇ 4ರಂದು ದೇಶಾದ್ಯಂತ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ದೇಶಾದ್ಯಂತ 20 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇಂದು ಬೆಳಗ್ಗೆ ಅಂತಿಮ ಉತ್ತರ ಕೀಯನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ neet.nta.nic.inಗೆ ಭೇಟಿ ನೀಡುವ ಮೂಲಕ ಫಲಿತಾಂಶ ಪರಿಶೀಲಿಸಬಹುದು. ಟಾಪರ್‌ಗಳ ಪಟ್ಟಿ ಶೀಘ್ರದಲ್ಲೇ ಹೊರಬರಲಿದೆ.

ಫಲಿತಾಂಶ ಪರಿಶೀಲನೆಗೆ ಅಭ್ಯರ್ಥಿಗಳು ಅಪ್ಲಿಕೇಷನ್‌ ನಂಬರ್‌ ಮತ್ತು ಪಾಸ್‌ವರ್ಡ್‌ ನಮೂದಿಸಬೇಕಾಗುತ್ತದೆ.



ಫಲಿತಾಂಶ ಹೀಗೆ ಪರಿಶೀಲಿಸಿ

  • ಮೊದಲು NEET ಅಧಿಕೃತ ವೆಬ್‌ಸೈಟ್ neet.nta.nic.inಗೆ ಭೇಟಿ ನೀಡಿ.
  • ನಂತರ ಕಂಡುಬರುವ NEET UG 2025 ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಲಾಗಿನ್ ಆಗಲು ದಾಖಲೆಗಳನ್ನು (ಅಪ್ಲಿಕೇಷನ್‌ ನಂಬರ್‌, ಪಾಸ್‌ವರ್ಡ್‌, ಕ್ಯಾಪ್ಚಾ ಇತ್ಯಾದಿ) ನಮೂದಿಸಿ.
  • ಈಗ ನಿಮ್ಮ ಫಲಿತಾಂಶವನ್ನು ಪರಿಶೀಲಿಸಿ ಮತ್ತು ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಿ.

ಈ ಸುದ್ದಿಯನ್ನೂ ಓದಿ: NEET Exam: ಸಿಇಟಿ ಬಳಿಕ ನೀಟ್‌ ಪರೀಕ್ಷೆ ವೇಳೆಯೂ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳು; ಕಲಬುರಗಿಯಲ್ಲಿ ಎಡವಟ್ಟು

ಜೂ. 15ರಂದು ನಿಗದಿಯಾಗಿದ್ದ ನೀಟ್‌ ಪಿಜಿ ಪರೀಕ್ಷೆ ಮುಂದೂಡಿಕೆ

ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ (NBEMS) ಕೆಲವು ದಿನಗಳ ಹಿಂದೆ ಮಹತ್ವದ ಪ್ರಕಟಣೆ ಹೊರಡಿಸಿ, ನೀಟ್‌ ಪಿಜಿ 2025 (NEET PG 2025) ಪರೀಕ್ಷೆಯನ್ನು ಮುಂದೂಡಿತ್ತು. ಈ ಮೊದಲು ಪರೀಕ್ಷೆಯನ್ನು ಜೂ. 15ಕ್ಕೆ ನಿಗದಿಪಡಿಸಲಾಗಿತ್ತು. ಪಾರದರ್ಶಕತೆ ಮತ್ತು ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಬೇಕೆಂದು ಸುಪ್ರೀಂ ಕೋರ್ಟ್ (Supreme Court) ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

2 ಪಾಳಿಯಲ್ಲಿ (ಶಿಫ್ಟ್‌) ನಡೆಸುವ ಪರೀಕ್ಷಾ ಸ್ವರೂಪವನ್ನು ಪ್ರಶ್ನಿಸಿ ಅಭ್ಯರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಯ ವಾದ-ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ಪರೀಕ್ಷೆ ಒಂದೇ ಪಾಳಿಯಲ್ಲಿ ನಡೆಸಬೇಕೆಂದು ನಿರ್ದೇಶನ ನೀಡಿತ್ತು. ನೀಟ್‌ ಪಿಜಿ 2025 ಪರೀಕ್ಷೆಯನ್ನು ಸುರಕ್ಷಿತ ಮತ್ತು ಪಾರದರ್ಶಕ ಪರೀಕ್ಷಾ ಕೇಂದ್ರಗಳಲ್ಲಿ ಒಂದೇ ಶಿಫ್ಟ್‌ನಲ್ಲಿ ನಡೆಸುವಂತೆ ನ್ಯಾಯಾಲಯ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿಗೆ ಈಗಾಗಲೇ ಸೂಚಿಸಿತ್ತು

ಪರೀಕ್ಷಾ ವಿಧಾನ

ಸುಪ್ರೀಂ ಕೋರ್ಟ್ ಆದೇಶದಂತೆ ಇನ್ನು ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಲಾಗುತ್ತದೆ. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer-Based Test -CBT) ಆಗಿದ್ದು, ಇಂಗ್ಲಿಷ್‌ನಲ್ಲಿ 200 ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಒಳಗೊಂಡಿರುತ್ತದೆ. ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಪೂರ್ಣಗೊಳಿಸಲು 3 ಗಂಟೆ 30 ನಿಮಿಷಗಳ ಕಾಲಾವಕಾಶವಿರುತ್ತದೆ.