ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Modi China Visit: 7 ವರ್ಷ ಬಳಿಕ ಮೋದಿ ಚೀನಾಕ್ಕೆ; ಇಂದು ಕ್ಸಿ ಜಿನ್‌ಪಿಂಗ್‌ ಭೇಟಿ

ಮೋದಿ ಕೊನೆಯ ಬಾರಿಗೆ ಜೂನ್ 2018 ರಲ್ಲಿ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ಭೇಟಿ ನೀಡಿದ್ದರು. ನಂತರ 2020ರ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಸಂಘರ್ಷ ಏರ್ಪಟ್ಟು ಭಾರತದ 20 ಸೈನಿಕರು ಚೀನಾ ದಾಳಿಗೆ ಬಲಿಯಾಗಿದ್ದರು. ಆಗ ಉಭಯ ದೇಶಗಳ ಸಂಬಂಧ ಹಳಸಿತ್ತು ಮತ್ತು ಮೋದಿ ಚೀನಾಗೆ ಹೋಗಿರಲಿಲ್ಲ.

7 ವರ್ಷ ಬಳಿಕ ಮೋದಿ ಚೀನಾಕ್ಕೆ; ಇಂದು ಕ್ಸಿ ಜಿನ್‌ಪಿಂಗ್‌ ಭೇಟಿ

-

Abhilash BC Abhilash BC Aug 31, 2025 8:28 AM

ಟಿಯಾನ್‌ಜಿನ್‌ (ಚೀನಾ): ಆ.31 ಹಾಗೂ ಸೆ.1ರಂದು ನಡೆಯಲಿರುವ ಶಾಂಘೈ ಕೋಆಪರೇಷನ್‌ ಆರ್ಗನೈಸೇಷನ್‌ (ಎಸ್‌ಸಿಒ) ಶೃಂಗದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಶನಿವಾರ ಚೀನಾದ ತಿಯಾನ್‌ಜಿನ್‌ಗೆ ತಲುಪಿದ್ದು, 7 ವರ್ಷದ ಬಳಿಕ ಹಾಗೂ 2020ರ ಗಲ್ವಾನ್‌ ಗಡಿ ಸಂಘರ್ಷದ ಬಳಿಕ ಮೋದಿ ಅವರು ಇದೇ ಮೊದಲ ಬಾರಿಗೆ ಚೀನಾಗೆ(Modi China Visit) ನೀಡಿದ ಭೇಟಿಯಾಗಿದೆ. ಹೀಗಾಗಿ ಈ ಪ್ರವಾಸ ವಿಶ್ವಮಟ್ಟದಲ್ಲಿ ತೀವ್ರ ಗಮನಸೆಳೆದಿದೆ.

ಇಂದು(ಭಾನುವಾರ) ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌(Xi Jinping) ಅವರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು, ಈ ವೇಳೆ ಭಾರತ ಮತ್ತು ಚೀನಾದ ಆರ್ಥಿಕ ಸಂಬಂಧಗಳು ಹಾಗೂ ಗಲ್ವಾನ್‌ ಗಡಿ ಸಂಘರ್ಷದ ಬಳಿಕ ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಣೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.

ಈ ಶೃಂಗದ ಸಂದರ್ಭದಲ್ಲೇ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಸೇರಿ ವಿಶ್ವದ ಹಲವು ನಾಯಕರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಉಕ್ರೇನ್‌-ರಷ್ಯಾ ಯುದ್ಧ ತಣಿಸುವುದು ಹಾಗೂ ಭಾರತ-ರಷ್ಯಾ ನಡುವಿನ ಆರ್ಥಿಕ, ವ್ಯಾಪಾರ ಸಂಬಂಧ ಬಲಪಡಿಸುವ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ Narendra Modi: ಮೋದಿ-ವ್ಯಾನ್ಸ್ ದ್ವಿಪಕ್ಷೀಯ ಮಾತುಕತೆ; ವ್ಯಾಪಾರ ಒಪ್ಪಂದಕ್ಕೆ ಆದ್ಯತೆ

ಮೋದಿ ಕೊನೆಯ ಬಾರಿಗೆ ಜೂನ್ 2018 ರಲ್ಲಿ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ಭೇಟಿ ನೀಡಿದ್ದರು. ನಂತರ 2020ರ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಸಂಘರ್ಷ ಏರ್ಪಟ್ಟು ಭಾರತದ 20 ಸೈನಿಕರು ಚೀನಾ ದಾಳಿಗೆ ಬಲಿಯಾಗಿದ್ದರು. ಆಗ ಉಭಯ ದೇಶಗಳ ಸಂಬಂಧ ಹಳಸಿತ್ತು ಮತ್ತು ಮೋದಿ ಚೀನಾಗೆ ಹೋಗಿರಲಿಲ್ಲ. 2019ರ ಗಲ್ವಾನ್‌ ಸಂಘರ್ಷದ ಬಳಿಕ ಭಾರತ- ಚೀನಾ ಸಂಬಂಧ ಪೂರ್ಣ ಹಳಸಿತ್ತು. ಪರಿಸ್ಥಿತಿ ಯುದ್ಧದವರೆಗೂ ತಲುಪಿತ್ತು. ಬಳಿಕ ಉಭಯ ದೇಶಗಳು ನೇರ ವಿಮಾನ, ಪ್ರವಾಸಿ ವೀಸಾ ವಿತರಣೆ ಸ್ಥಗಿತಗೊಳಿಸಿದ್ದವು. ಅಗತ್ಯ ವಸ್ತು ಪೂರೈಕೆ ರದ್ದಾಗಿತ್ತು.