Bhagya Lakshmi Serial: ಭಾಗ್ಯ ಅರೆಸ್ಟ್: ಪೊಲೀಸ್ ಸ್ಟೇಷನ್ಗೆ ಓಡೋಡಿ ಬಂದ ಆದೀಶ್ವರ್
Bhagya Lakshmi: ಕಳ್ಳತನದ ಆರೋಪದ ಮೇಲೆ ಆದೀಶ್ವರ್ನನ್ನು ಹುಡುಕಿಕೊಂಡು ಬಂದ ಪೊಲೀಸರು ಅವನು ಸಿಗದ ಕಾರಣ ಭಾಗ್ಯಾಳನ್ನು ಅರೆಸ್ಟ್ ಮಾಡಿ ಸ್ಟೇಷನ್ಗೆ ಕರೆದುಕೊಂಡು ಹೋಗಿದ್ದಾರೆ. ವಿಷಯ ತಿಳಿದ ಕೂಡಲೇ ಆದೀಶ್ವರ್ ಸ್ಟೇಷನ್ಗೆ ಓಡೋಡಿ ಬಂದಿದ್ದಾನೆ.

Bhagya Lakshmi Serial -

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಲಾಗುತ್ತಿದೆ. ಆದೀಶ್ವರ್ ಕಾಮತ್, ಭಾಗ್ಯಾಗೆ ಚಾಲೆಂಜ್ ಮಾಡಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದು, ಈ ಚಾಲೆಂಜ್ ಈಗ ಕೊನೆಯ ದಿನಕ್ಕೆ ತಲುಪಿದೆ. ಆದರೆ, ಈ ಕೊನೇ ದಿನವೇ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್ ನೀಡಲಾಗಿದೆ. ಕಳ್ಳತನದ ಆರೋಪದ ಮೇಲೆ ಆದೀಶ್ವರ್ನನ್ನು ಹುಡುಕಿಕೊಂಡು ಬಂದ ಪೊಲೀಸರು ಅವನು ಸಿಗದ ಕಾರಣ ಭಾಗ್ಯಾಳನ್ನು ಅರೆಸ್ಟ್ ಮಾಡಿ ಸ್ಟೇಷನ್ಗೆ ಕರೆದುಕೊಂಡು ಹೋಗಿದ್ದಾರೆ. ವಿಷಯ ತಿಳಿದ ಕೂಡಲೇ ಆದೀಶ್ವರ್ ಸ್ಟೇಷನ್ಗೆ ಓಡೋಡಿ ಬಂದಿದ್ದಾನೆ.
ಅಸಲಿಗೆ ನಡೆದಿದ್ದೇನೆಂದರೆ, ಕೊನೆಯ ದಿನ ಆದೀ ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಓರ್ವ ಶ್ರೀಮಂತ ಮಹಿಳೆ ತನ್ನ ಕಾರಿಗೆ ಹತ್ತುವಾಗ ಬೆಲೆ ಬಾಳುವ ವಸ್ತು ಕೈಯಿಂದ ಜಾರಿ ಕೆಳ ಬಿದ್ದಿದೆ. ಇದನ್ನು ಆದೀ ಗಮನಿಸುತ್ತಾನೆ. ಅವರ ಬಳಿ ಹೇಳೋಣ ಎನ್ನುವಷ್ಟರಲ್ಲಿ ಆ ಮಹಿಳೆ ಕಾರಿನಲ್ಲಿ ತೆರಳಿ ಆಗಿದೆ. ಆಗ ಆದೀ ಆ ವಸ್ತುವನ್ನು ತೆಗೆದುಕೊಂಡು ಕಾರಿನ ಹಿಂದೆ ನಿಲ್ಲಿಸಿ.. ನಿಲ್ಲಿಸಿ.. ಎಂದು ಓಡಿದ್ದಾನೆ. ಕೊಂಚ ದೂರ ಹೋದ ಬಳಿಕ ಯಾರೋ ಓಡಿ ಬರುತ್ತಿರುವುದು ಆ ಮಹಿಳೆಗೆ ಗೊತ್ತಾಗಿದೆ.
ಕಾರು ನಿಲ್ಲಿಸಿ ಆ ಮಹಿಳೆ ಕೇಳಿದಾಗ ಆದೀ ಆ ವಸ್ತುವನ್ನು ಕೊಡುತ್ತಾನೆ. ಇದರಿಂದ ಆ ಮಹಿಳೆ ತುಂಬಾ ಖುಷಿಯಾಗಿ ನೀವು ದೊಡ್ಡ ಸಹಾಯ ಮಾಡಿದ್ದೀರಿ ಎಂದು 10 ಸಾವಿರ ರೂಪಾಯಿಯನ್ನು ನೀಡುತ್ತಾಳೆ. ಅದಕ್ಕೆ ಆದೀ ಇದೆಲ್ಲ ಬೇಡ ನಾಣು ಅಷ್ಟುದೊಡ್ಡ ಸಹಾಯ ಏನು ಮಾಡಿಲ್ಲ.. ಜಸ್ಟ್ ಈ ವಸ್ತು ಬಿದ್ದಿತ್ತು ಅದನ್ನು ತಂದುಕೊಟ್ಟೆ ಅಷ್ಟೆ ಎಂದಿದ್ದಾನೆ. ಆದರೆ, ಆ ಮಹಿಳೆ ಬಿಡದೆ ಇದನ್ನು ನೀವು ತೆಗೆದುಕೊಳ್ಳಲೇ ಬೇಕು ಎಂದು ಫೋರ್ಸ್ ಮಾಡಿ 10 ಸಾವಿರ ರೂ. ಕೊಟ್ಟು ಹೋಗಿದ್ದಾಳೆ.
ಇದಾಗಿ ಕೆಲ ಸಮಯದ ಬಳಿಕ ಆ ಮಹಿಳೆ ಸ್ಟೇಷನ್ಗೆ ಹೋಗಿ ನನ್ನ ಡೈಮೆಂಡ್ ಸೆಕ್ಲೆಸ್ ಕಾಣುತ್ತಿಲ್ಲ.. ಓರ್ವ ಕದ್ದಿದ್ದಾನೆ ಎಂದು ದೂರು ನೀಡಿದ್ದಾಳೆ. ಪೊಲೀಸರು ನೆಕ್ಲೆಸ್ ಬಿದ್ದ ಜಾಗಕ್ಕೆ ತೆರಳಿ ಸಿಸಿಟಿವಿ ಫೂಟೆಜ್ ನೋಡುತ್ತಾರೆ. ಅಲ್ಲಿ ಆದೀಶ್ವರ್ ಆ ಮಹಿಳೆ ಬೀಳಿಸಿದ ವಸ್ತುವನ್ನು ತೆಗೆದುಕೊಂಡು ಹೋಗುವುದು ಕಾಣುತ್ತದೆ. ಅಸಲಿಗೆ ಆದೀ ಆ ವಸ್ತುವನ್ನು ತೆಗೆದುಕೊಂಡು ಹೋಗಿ ಆ ಮಹಿಳೆಗೇ ನೀಡಿರುತ್ತಾನೆ. ಆದರೆ, ಸಿಸಿಟಿವಿಯಲ್ಲಿ ಆದೀಯನ್ನು ನೋಡಿದ ತಕ್ಷಣ ಆ ಮಹಿಳೆ ಈತನೇ ಸರ್, ನನ್ನ ನೆಕ್ಲೆಸ್ ಬಿದ್ದಿತ್ತು. ಆತ ಅದನ್ನು ನನಗೆ ಪುನಃ ಕೊಡುವ ಮೊದಲು ಅದರಲ್ಲಿರುವ ನೆಕ್ಲೆಸ್ ಅನ್ನು ಕದ್ದು ಖಾಲಿ ಬಾಕ್ಸ್ ಕೊಟ್ಟಿದ್ದಾನೆ ಎಂದಿದ್ದಾಳೆ.
ಪೊಲೀಸರು ಆದೀಯ ಫೋಟೋ ತೆಗೆದುಕೊಂಡು ಗಲ್ಲಿ ಗಲ್ಲಿಯಲ್ಲಿ ವಿಚಾರಿಸಿದ್ದಾರೆ. ಕೊನೆಗೆ ಓರ್ವ ವ್ಯಕ್ತಿ ನಾನು ಇವರನ್ನು ಭಾಗ್ಯಕ್ಕನ ಮನೆಯಲ್ಲಿ ನೋಡಿದ್ದೇನೆ.. ಅವರ ಮನೆ ಇಲ್ಲಿಯೇ ಎಂದು ತೋರಿಸಿದ್ದಾನೆ. ಪೊಲೀಸರು ಭಾಗ್ಯ ಮನೆಗೆ ತೆರಳಿ ಆದೀಯನ್ನು ವಿಚಾರಿಸಿದ್ದಾರೆ. ಅಲ್ಲದೆ ಆತ ಕಳ್ಳ ಎಂದು ಹೇಳಿದ್ದಾರೆ. ಇದಕ್ಕೆ ಕೇಳಿ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ. ಆದೀ ಈಗ ಆಫೀಸ್ ಹೋಗಿದ್ದಾನೆ.. ಆದರೆ, ಆತ ಕಳ್ಳ ಅಲ್ಲ. ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ.
ಇದನ್ನು ಕೇಳಲು ಪೊಲೀಸರು ತಯಾರಿಲ್ಲ.. ಈ ಮನೆಯವರಲ್ಲಿ ಒಬ್ಬರನ್ನು ಸ್ಟೇಷನ್ ಕರೆದುಕೊಂಡು ಹೋಗೋಣ ಆಗ ಆತನೇ ಸ್ಟೇಷನ್ಗೆ ಬರುತ್ತಾನೆ ಎಂದು ಹೇಳಿ ಪೊಲೀಸರು ಭಾಗ್ಯಾಳನ್ನು ಕರೆದುಕೊಂಡು ಹೋಗಿದ್ದಾರೆ. ಕುಸುಮಾ ತಕ್ಷಣವೇ ಆದೀಶ್ವರ್ಗೆ ಕಾಲ್ ಮಾಡಿ ವಿಷಯ ಮುಟ್ಟಿಸಿದ್ದಾಳೆ. ಆದೀ ನೇರವಾಗಿ ಸ್ಟೇಷನ್ಗೆ ಬಂದಿದ್ದಾನೆ. ಆದೀಯನ್ನು ನೋಡಿದ ತಕ್ಷಣ ಪೊಲೀಸ್ ಅಧಿಕಾರಿ ಕೀಳಾಗಿ ಮಾತನಾಡಲು ಶುರುಮಾಡುತ್ತಾನೆ. ಇವಳನ್ನು ಕರೆದುಕೊಂಡು ಬಂದ್ರೆ ಇವನು ಬರ್ತಾನೆ ಅಂತ ನಾನು ಹೇಳಿದ್ದೆ ಅಲ್ವಾ ಅದು ನಿಜ ಆಯ್ತು.. ನೀವಿಬ್ರು ಸೇರಿ ನೆಕ್ಲೆಸ್ ಕದ್ದಿದ್ದೀರಾ ನಿಮ್ಮದು ಗ್ಯಾಂಗ್ ಎಂದು ಹೇಳಿದ್ದಾರೆ.
BBK 12: ಕಿಚ್ಚನ ಅಭಿಮಾನಿಗಳಿಗೆ ಒಂದಲ್ಲ.. ಎರಡಲ್ಲ.. ತ್ರಿಬಲ್ ಧಮಾಕ: ಏನೆಲ್ಲ ನೋಡಿ
ಆದೀಗೆ ಕೋಪ ಬರುತ್ತದೆ.. ನಾನು ಯಾರು ಅಂತ ಗೊತ್ತ ನಿಮ್ಗೆ ಎಂದು ಹೇಳಲು ಮುಂದಾಗುತ್ತಾ.. ಆದರೆ ಆಗ ಚಾಲೆಂಜ್ ನೆನಪಾಗುತ್ತದೆ.. ಏಳು ದಿನ ಕಳೆಯುವ ವರೆಗೆ ಆದೀ ಕಾಮತ್ ಫ್ಯಾಮಿಲಿಯವನು ಎಂದು ಎಲ್ಲೂ ಹೇಳುವ ಆಗಿಲ್ಲ.. ಆದರೆ, ಪೊಲೀಸ್ ಇನ್ಸ್ಪೆಕ್ಟರ್ ಭಾಗ್ಯ ಬಗ್ಗೆಯೂ ಕೀಳಾಗಿ ಮಾತನಾಡುತ್ತಾನೆ. ಆಗ ಆದೀ, ಈ ಚಾಲೆಂಜ್ ಮುರಿದರೂ ಪರವಾಗಿಲ್ಲ.. ಭಾಗ್ಯಾಳನ್ನು ಹೇಗಾದರು ಮಾಡಿ ಇಲ್ಲಿಂದ ಕರೆದುಕೊಂಡು ಹೋಗಬೇಕು ಅಂದುಕೊಂಡು.. ಒಂದು ನಿಮಿಷ ಒಂದು ಕಾಲ್ ಮಾಡಿ ಬರುತ್ತೇನೆ ಎಂದು ಹೇಳಿದ್ದಾನೆ.
ಸದ್ಯ ಆದೀಶ್ವರ್ ತನ್ನ ಇನ್ಫ್ಯುಲೆನ್ಸ್ ಬಳಸಿ ಸ್ಟೇಷನ್ನಿಂದ ಹೊರಹೋಗುವುದು ಖಚಿತ. ಆದರೆ, ಆ ನೆಕ್ಲೆಸ್ ಏನಾಯಿತು?, ಇತ್ತ ನಿಯಮ ಮುರಿದ ಆದೀ, ಹಣವನ್ನು ವಾಪಾಸ್ ಪಡೆದುಕೊಳ್ಳುತ್ತಾನ ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.