ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Reliance Industries: 'ಫಾರ್ಚೂನ್ ಗ್ಲೋಬಲ್ 500' ಪಟ್ಟಿಯಲ್ಲಿ ಮುಂದುವರಿದ ರಿಲಯನ್ಸ್ ಇಂಡಸ್ಟ್ರೀಸ್ ಪಾರಮ್ಯ

Reliance Industries: 2025ರ ‘ಫಾರ್ಚೂನ್ ಗ್ಲೋಬಲ್ 500’ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries) 88ನೇ ಸ್ಥಾನದಲ್ಲಿದೆ. ಅಂದ ಹಾಗೆ ಒಟ್ಟು 9 ಭಾರತೀಯ ಕಂಪನಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ, ಆ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಭಾರತೀಯ ಕಂಪನಿಯಾಗಿದೆ.

'ಫಾರ್ಚೂನ್ ಗ್ಲೋಬಲ್ 500' ಪಟ್ಟಿಯಲ್ಲಿ ರಿಲಯನ್ಸ್‌ಗೆ 88ನೇ ಸ್ಥಾನ

Profile Siddalinga Swamy Jul 30, 2025 8:22 PM

ನವದೆಹಲಿ: 2025ರ ‘ಫಾರ್ಚೂನ್ ಗ್ಲೋಬಲ್ 500’ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries) 88ನೇ ಸ್ಥಾನದಲ್ಲಿದೆ. ಅಂದ ಹಾಗೆ ಒಟ್ಟು 9 ಭಾರತೀಯ ಕಂಪನಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ, ಆ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಪಟ್ಟಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಭಾರತೀಯ ಕಂಪನಿಯಾಗಿದೆ. ರಿಲಯನ್ಸ್ ಸತತ 22 ವರ್ಷಗಳಿಂದ ಪ್ರತಿಷ್ಠಿತ ʼಫಾರ್ಚೂನ್ ಗ್ಲೋಬಲ್ 500ʼ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಯಾವುದೇ ಖಾಸಗಿ ವಲಯದ ಭಾರತೀಯ ಕಂಪನಿಯು ಈ ಪಟ್ಟಿಯಲ್ಲಿ ಇಷ್ಟು ದೀರ್ಘಕಾಲ ಉಳಿಯಲು ಸಾಧ್ಯವಾಗಿಲ್ಲ. ಕಳೆದ ವರ್ಷ ಕಂಪನಿಯ ಶ್ರೇಯಾಂಕ 86 ಆಗಿತ್ತು. ಆದರೆ ಅದು 2021ರಲ್ಲಿ 155ನೇ ಸ್ಥಾನದಲ್ಲಿ ಇದ್ದದ್ದು ಇದೀಗ 67 ಸ್ಥಾನಗಳ ಏರಿಕೆಯನ್ನು ದಾಖಲಿಸಿದೆ.

'ಫಾರ್ಚೂನ್ ಗ್ಲೋಬಲ್ 500' ಪಟ್ಟಿಯು ಒಟ್ಟು ಆದಾಯದ ಆಧಾರದ ಮೇಲೆ ಕಂಪನಿಗಳನ್ನು ಶ್ರೇಣೀಕರಿಸುತ್ತದೆ. ಈ ಪಟ್ಟಿಯಲ್ಲಿ ಐದು ಸಾರ್ವಜನಿಕ ವಲಯ ಮತ್ತು ನಾಲ್ಕು ಖಾಸಗಿ ವಲಯದ ಭಾರತೀಯ ಕಂಪನಿಗಳು ಸೇರಿವೆ. ರಿಲಯನ್ಸ್ ಹೊರತುಪಡಿಸಿದರೆ ಎಲ್‌ಐಸಿ 95ನೇ ಸ್ಥಾನದಲ್ಲಿದೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ 127ನೇ ಸ್ಥಾನ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 163ನೇ ಸ್ಥಾನ, ಒಎನ್‌ಜಿಸಿ 181ನೇ ಸ್ಥಾನ, ಎಚ್‌ಡಿಎಫ್‌ಸಿ ಬ್ಯಾಂಕ್ 258ನೇ ಸ್ಥಾನ, ಟಾಟಾ ಮೋಟಾರ್ಸ್ 283ನೇ ಸ್ಥಾನ, ಬಿಪಿಸಿಎಲ್ 285ನೇ ಸ್ಥಾನ ಮತ್ತು ಐಸಿಐಸಿಐ ಬ್ಯಾಂಕ್ 464ನೇ ಸ್ಥಾನದಲ್ಲಿದೆ.

ರಿಲಯನ್ಸ್ 25ರ ಹಣಕಾಸು ವರ್ಷದಲ್ಲಿ ರೂ. 10,71,174 ಕೋಟಿಗಳ ದಾಖಲೆಯ ಏಕೀಕೃತ ಒಟ್ಟು ಆದಾಯವನ್ನು ದಾಖಲಿಸಿದೆ. ಇದು ವರ್ಷದಿಂದ ವರ್ಷಕ್ಕೆ ಶೇ 7.1ರಷ್ಟು ಹೆಚ್ಚಾಗಿದೆ. ಇಬಿಐಟಿಡಿಎ ಕೂಡ ಶೇ 2.9ರಷ್ಟು ಬೆಳವಣಿಗೆ ಕಂಡು, ರೂ. 1,83,422 ಕೋಟಿಗೆ ತಲುಪಿದೆ. ತೈಲದಿಂದ ರಾಸಾಯನಿಕ, ತೈಲ ಮತ್ತು ಅನಿಲ, ರೀಟೇಲ್ ವ್ಯಾಪಾರ ಮತ್ತು ಡಿಜಿಟಲ್ ಸೇವೆಗಳಂತಹ ರಿಲಯನ್ಸ್‌ನ ಎಲ್ಲ ವ್ಯವಹಾರಗಳು ಅಗಾಧ ಬೆಳವಣಿಗೆಯನ್ನು ದಾಖಲಿಸಿವೆ.

ಈ ಸುದ್ದಿಯನ್ನೂ ಓದಿ | Donald Trump: ಭಾರತದ ಮೇಲೆ ಶೇ. 25ರಷ್ಟು ತೆರಿಗೆ ಘೋಷಿಸಿದ ಅಮೆರಿಕ; ಡೊನಾಲ್ಡ್‌ ಟ್ರಂಪ್‌ ಅಧಿಕೃತ ಘೋಷಣೆ

ʼಫಾರ್ಚೂನ್ ಗ್ಲೋಬಲ್ 500ʼ ಪಟ್ಟಿಯಲ್ಲಿ ವಾಲ್‌ಮಾರ್ಟ್, ಅಮೆಜಾನ್ ಮತ್ತು ಸ್ಟೇಟ್ ಗ್ರಿಡ್ ಅಗ್ರ ಮೂರು ಕಂಪನಿಗಳಾಗಿವೆ. ಇದರ ಹೊರತಾಗಿ ಚೀನಾ ನ್ಯಾಷನಲ್ ಪೆಟ್ರೋಲಿಯಂ, ಸೌದಿ ಅರಾಮ್ಕೊ ಮತ್ತು ಆಪಲ್‌ ನಂತಹ ಕಂಪನಿಗಳು ಟಾಪ್ 10ರಲ್ಲಿ ಸ್ಥಾನ ಪಡೆದಿವೆ.‌