PKL 12 schedule: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ
PKL Season 12: ಆಗಸ್ಟ್ 29 ರಂದು ವೈಜಾಗ್‌ನಲ್ಲಿ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡವು ತಮಿಳು ತಲೈವಾಸ್ ತಂಡವನ್ನು ಎದುರಿಸಲಿದ್ದು, ಬೆಂಗಳೂರು ಬುಲ್ಸ್ ತಂಡವು ದಿನದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವನ್ನು ಎದುರಿಸಲಿದೆ. ಏಳು ವರ್ಷಗಳ ಬಳಿಕ ಪಿಕೆಎಲ್ ವೈಜಾಗ್‌ಗೆ ಮರಳಲಿದೆ.


ಮುಂಬೈ: ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ನ 12ನೇ(PKL Season 12) ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು(PKL 12 schedule), ಆಗಸ್ಟ್ 29ರಿಂದ ಪಂದ್ಯಾವಳಿ ಆರಂಭವಾಗಲಿದ್ದು ಅಕ್ಟೋಬರ್ 23 ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಆಯೋಜಕರು ಗುರುವಾರ ತಿಳಿಸಿದ್ದಾರೆ. ಪಂದ್ಯಾವಳಿ ದೇಶಾದ್ಯಂತ ನಾಲ್ಕು ನಗರಗಳಲ್ಲಿ ಆಯೋಜನೆಗೊಳ್ಳಲಿದೆ.
ವೈಜಾಗ್ (ಆಗಸ್ಟ್ 29 ರಿಂದ ಸೆಪ್ಟೆಂಬರ್ 11), ಜೈಪುರ (ಸೆಪ್ಟೆಂಬರ್ 12 ರಿಂದ 28), ಚೆನ್ನೈ (ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 12) ಮತ್ತು ದೆಹಲಿ (ಅಕ್ಟೋಬರ್ 13 ರಿಂದ 23) ಒಟ್ಟು 108 ಲೀಗ್ ಹಂತದ ಪಂದ್ಯಗಳನ್ನು ಆಯೋಜಿಸಲಿವೆ.
ಆಗಸ್ಟ್ 29 ರಂದು ವೈಜಾಗ್‌ನಲ್ಲಿ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡವು ತಮಿಳು ತಲೈವಾಸ್ ತಂಡವನ್ನು ಎದುರಿಸಲಿದ್ದು, ಬೆಂಗಳೂರು ಬುಲ್ಸ್ ತಂಡವು ದಿನದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವನ್ನು ಎದುರಿಸಲಿದೆ. ಏಳು ವರ್ಷಗಳ ಬಳಿಕ ಪಿಕೆಎಲ್ ವೈಜಾಗ್‌ಗೆ ಮರಳಲಿದೆ.
𝐏𝐊𝐋 𝐒𝐄𝐀𝐒𝐎𝐍 𝟏𝟐 𝐒𝐂𝐇𝐄𝐃𝐔𝐋𝐄 – 𝐏𝐀𝐑𝐓 𝟐
— ProKabaddi (@ProKabaddi) July 31, 2025
Mark your calendars for royal raids & fearless tackles as the league stage continues at Indoor Hall, SMS Stadium, Jaipur 🩷
Watch the action LIVE from AUG 29 on @StarSportsIndia and @JioHotstar 📲#PKL #ProKabaddi pic.twitter.com/Bo4B74Bp6M
ಹಾಲಿ ಚಾಂಪಿಯನ್ ಹರಿಯಾಣ ಸ್ಟೀಲರ್ಸ್ ಆಗಸ್ಟ್ 31 ರಂದು ಬೆಂಗಾಲ್ ವಾರಿಯರ್ಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಬಾರಿ ಬೆಂಗಳೂರಿಗೆ ಪಂದ್ಯಗಳ ಆತಿಥ್ಯ ಸಿಗಲಿಲ್ಲ.
ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಪ್ರೊ ಕಬಡ್ಡಿ ಲೀಗ್ ಸೀಸನ್ 12ರ ಪಂದ್ಯಾವಳಿಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ.
ಇದನ್ನೂ ಓದಿ PKL 2025: ಆಗಸ್ಟ್ 29 ರಂದು ಹನ್ನೆರಡನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿ ಆರಂಭ!