ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TCS Layoff: ಐಟಿ ನೌಕರರಿಗೆ ಭಾರೀ ಶಾಕ್‌; 12 ಸಾವಿರ ಉದ್ಯೋಗ ಕಡಿತಗೊಳಿಸಲಿರುವ TCS

ಭಾರತದ ಅತಿದೊಡ್ಡ ಐಟಿ ಸೇವೆಗಳ ಪೂರೈಕೆದಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತನ್ನ 2026 ರ ಹಣಕಾಸು ವರ್ಷದಲ್ಲಿ ತನ್ನ ಉದ್ಯೋಗಿಗಳನ್ನು ಶೇಕಡಾ 2 ರಷ್ಟು ಕಡಿಮೆ ಮಾಡಲಿದೆ ಎಂದು ತಿಳಿದು ಬಂದಿದೆ. ಜಾಗತಿಕ ತಂತ್ರಜ್ಞಾನ ವಲಯದ ಉದ್ಯೋಗ ಕಡಿತವನ್ನು ಮೇಲ್ವಿಚಾರಣೆ ಮಾಡುವ Layoffs.fyi ದತ್ತಾಂಶ ಒಂದನ್ನು ಹಂಚಿಕೊಂಡಿದ್ದು, 2025 ರಲ್ಲಿ 169 ಕಂಪನಿಗಳಲ್ಲಿ 80,000 ಕ್ಕೂ ಹೆಚ್ಚು ತಂತ್ರಜ್ಞಾನ ವೃತ್ತಿಪರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ.

12 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿರುವ TCS

Vishakha Bhat Vishakha Bhat Jul 28, 2025 8:25 AM

ಭಾರತದ ಅತಿದೊಡ್ಡ ಐಟಿ ಸೇವೆಗಳ ಪೂರೈಕೆದಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತನ್ನ 2026 ರ ಹಣಕಾಸು ವರ್ಷದಲ್ಲಿ ತನ್ನ ಉದ್ಯೋಗಿಗಳನ್ನು ಶೇಕಡಾ 2 ರಷ್ಟು ಕಡಿಮೆ ಮಾಡಲಿದೆ ಎಂದು ತಿಳಿದು ಬಂದಿದೆ. ಕಂಪನಿಯು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸುವಾಗ, ಹೊಸ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವಾಗ ಮತ್ತು AI ಅನ್ನು ನಿಯೋಜಿಸುವಾಗ ಸಿಬ್ಬಂದಿಗೆ ಮರು ತರಬೇತಿ ಮತ್ತು ಮರು ನಿಯೋಜನೆ ಮಾಡುತ್ತಿದೆ, ಆದರೆ ಈ ಪ್ರಕ್ರಿಯೆಯ ಭಾಗವಾಗಿ ಸುಮಾರು 12,200 ಉದ್ಯೋಗಗಳನ್ನು ಕಡಿತಗೊಳಿಸಲಾಗುವುದು ಎಂದು ಟಾಟಾ ತಿಳಿಸಿದೆ. ಗ್ರಾಹಕರಿಗೆ ಸೇವಾ ವಿತರಣೆಯ ಮೇಲೆ ಯಾವುದೇ ಪರಿಣಾಮ ಬೀರದಂತೆ ಈ ಪರಿವರ್ತನೆಯನ್ನು ಸರಿಯಾದ ಕಾಳಜಿಯೊಂದಿಗೆ ಯೋಜಿಸಲಾಗುತ್ತಿದೆ" ಎಂದು ಕಂಪನಿ ತಿಳಿಸಿದೆ.

ಏಕಾಏಕಿ 12,200 ಉದ್ಯೋಗಗಳನ್ನು ಕಡಿತಗೊಳಿಸುತ್ಗತಿರುವುದು ಉದ್ಯೋಗಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ. ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಸೂಕ್ತ ಪ್ರಯೋಜನಗಳು, ಸ್ಥಳಾಂತರ, ಸಮಾಲೋಚನೆ ಮತ್ತು ಬೆಂಬಲವನ್ನು ನೀಡುವುದಾಗಿ TCS ಹೇಳಿದೆ. ಮ್ಮ ಸಹೋದ್ಯೋಗಿಗಳಿಗೆ ಇದು ಸವಾಲಿನ ಸಮಯ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅವರ ಸೇವೆಗಾಗಿ ನಾವು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಮತ್ತು ಅವರು ಹೊಸ ಅವಕಾಶಗಳಿಗೆ ತೆರೆದುಕೊಳ್ಳುವಾಗ ನಾವು ಅವರ ಜೊತೆ ನಿಲ್ಲುತ್ತೇವೆ ಎಂದು ತಿಳಿಸಲಾಗಿದೆ. ಟಿಸಿಎಸ್ ಇತ್ತೀಚೆಗೆ ಸುಮಾರು 600 ಅನುಭವಿ ಲ್ಯಾಟರಲ್ ಎಂಟ್ರಿ ನೇಮಕಾತಿಗಳನ್ನು ವಿಳಂಬಗೊಳಿಸಿತ್ತು.

ಜಾಗತಿಕವಾಗಿ 80,000ಕ್ಕೂ ಅಧಿಕ ಟೆಕ್ ಉದ್ಯೋಗಿಗಳ ವಜಾ

ಜಾಗತಿಕ ತಂತ್ರಜ್ಞಾನ ವಲಯದ ಉದ್ಯೋಗ ಕಡಿತವನ್ನು ಮೇಲ್ವಿಚಾರಣೆ ಮಾಡುವ Layoffs.fyi ದತ್ತಾಂಶ ಒಂದನ್ನು ಹಂಚಿಕೊಂಡಿದ್ದು, 2025 ರಲ್ಲಿ 169 ಕಂಪನಿಗಳಲ್ಲಿ 80,000 ಕ್ಕೂ ಹೆಚ್ಚು ತಂತ್ರಜ್ಞಾನ ವೃತ್ತಿಪರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಸೂಚಿಸುತ್ತದೆ. ಎನ್ವಿಡಿಯಾ ನಂತರ ವಿಶ್ವದ ಎರಡನೇ ಅತ್ಯಂತ ಮೌಲ್ಯಯುತ ಪಟ್ಟಿಮಾಡಿದ ಕಂಪನಿಯಾದ ಮೈಕ್ರೋಸಾಫ್ಟ್, 2025 ರಲ್ಲಿ 15,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಇಂಟೆಲ್‌ ಕಂಪನಿಯು 25,000, ಪ್ಯಾನಸಾನಿಕ್‌ 10,000, ಮೈಕ್ರೋಸಾಫ್ಟ್‌ 6500, ಮೆಟಾ 3600, ಅಮೆಜಾನ್‌ 14000, ಐಬಿಎಂ 8000, ಗೂಗಲ್‌ 500 ಸಿಬ್ಬಂದಿಯನ್ನು ಕಡಿತಗೊಳಿಸುವ ಘೋಷಣೆ ಮಾಡಿವೆ. ಎಚ್‌ಪಿ 6000, ನಿಸ್ಸಾನ್‌ 20000, ಸ್ಟಾರ್‌ಬಕ್ಸ್‌ 1100 ಹುದ್ದೆ ಕಡಿತ ಮಾಡುವುದಾಗಿ ಘೋಷಿಸಿವೆ. ಇದರ ಜತೆಗೆ ವಾಲ್‌ಮಾರ್ಟ್‌, ಬಾಷ್‌ನಂತಹ ಕಂಪನಿಗಳು ಸಹ ವೆಚ್ಚ ಕಡಿತ ಕಾರಣಗಳಿಂದಾಗಿ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಲು ಯೋಚಿಸಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Central Government: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಗುಡ್‌ನ್ಯೂಸ್‌; ಪಾಲಕರ ಆರೈಕೆಗೆ ಸಿಗಲಿದೆ 30 ದಿನ ರಜೆ

ಈ ಹಿಂದೆ 2014ರಲ್ಲಿ ಒಮ್ಮೆ ಮೈಕ್ರೋಸಾಫ್ಟ್‌ ಬರೋಬ್ಬರಿ ಸುಮಾರು 18,000 ಉದ್ಯೋಗಗಳನ್ನು ಕೆಲಸದಿಂದ ವಜಾ ಮಾಡಿತ್ತು. ಅದೇ ರೀತಿ, 2023ರಲ್ಲಿಯೂ ಕಂಪನಿಯು 10,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತೆ 9,000 ಸಿಬ್ಬಂದಿಗಳನ್ನು ಕಡಿತಗೊಳಿಸಲು ಉದ್ದೇಶಿಸಿದ್ದು, 50 ವರ್ಷ ಇತಿಹಾಸ ಇರುವ ದೈತ್ಯ ಟೆಕ್ ಕಂಪನಿಯು ತನ್ನ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ.