Rajnath Singh: 100 ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ್ದೇವೆ; ಸಂಸತ್‌ನಲ್ಲಿ ಆಪರೇಷನ್ ಸಿಂದೂರ್ ಕುರಿತು ಮಾತನಾಡಿದ ರಾಜ್‌ನಾಥ್ ಸಿಂಗ್
ಸೋಮವಾರ ಲೋಕಸಭೆಯಲ್ಲಿ ಆಪರೇಷನ್ ಸಿಂದೂರದ ಕುರಿತು ಚರ್ಚೆ ನಡೆಸಲಾಗಿದೆ. ಪಾಕಿಸ್ತಾನದ ಮೇಲಿನ ದಾಳಿ ಕುರಿತು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೇ ತಿಂಗಳಲ್ಲಿ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ.


ನವದೆಹಲಿ: ಸೋಮವಾರ ಲೋಕಸಭೆಯಲ್ಲಿ ಆಪರೇಷನ್ ಸಿಂದೂರದ (Rajnath Singh) ಕುರಿತು ಚರ್ಚೆ ನಡೆಸಲಾಗಿದೆ. ಪಾಕಿಸ್ತಾನದ ಮೇಲಿನ ದಾಳಿ ಕುರಿತು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೇ ತಿಂಗಳಲ್ಲಿ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ. ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸುವ ಉದ್ದೇಶ ಪಾಕಿಸ್ತಾನ ಪೋಷಿಸಿದ ಭಯೋತ್ಪಾದಕ ಕೇಂದ್ರಗಳನ್ನು ನಾಶಪಡಿಸುವುದಾಗಿತ್ತು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಇದರ ಉದ್ದೇಶವಾಗಿತ್ತು ಎಂದು ಅವರು ಹೇಳಿದರು.
ನಮ್ಮ ಪಡೆಗಳು ನಡೆಸಿದ ಸುಸಂಘಟಿತ ದಾಳಿಗಳು ನಿಖರವಾಗಿ ಒಂಬತ್ತು ಭಯೋತ್ಪಾದಕ ಮೂಲಸೌಕರ್ಯ ಗುರಿಗಳನ್ನು ಹೊಡೆದುರುಳಿಸಿದವು. 100 ಕ್ಕೂ ಹೆಚ್ಚು ಭಯೋತ್ಪಾದಕರು, ಅವರ ತರಬೇತುದಾರರು, ನಿರ್ವಾಹಕರು ಮತ್ತು ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ಗುಂಪುಗಳೊಂದಿಗೆ ಸಂಬಂಧ ಹೊಂದಿರುವವರನ್ನು ಸೇನೆ ಹೊಡೆದು ಹಾಕಿದೆ ಎಂದು ಹೇಳಿದರು. ಯಾವುದೋ ಒತ್ತಡದಿಂದ ಆಪರೇಷನ್ ಸಿಂಧೂರ್ ನಿಲ್ಲಿಸಲಾಗಿದೆ ಎಂದು ಹೇಳುವುದು ಆಧಾರರಹಿತ ಮತ್ತು ಸಂಪೂರ್ಣವಾಗಿ ತಪ್ಪು. ಮಿಲಿಟರಿ ಉದ್ದೇಶಗಳನ್ನು ಸಂಪೂರ್ಣವಾಗಿ ಸಾಧಿಸಿದ್ದರಿಂದ ಭಾರತ ಕಾರ್ಯಾಚರಣೆಯನ್ನು ನಿಲ್ಲಿಸಿತು. ಮೇ 7 ರಂದು ಭಾರತದ ಡಿಜಿಎಂಒ ಪಾಕಿಸ್ತಾನದ ಡಿಜಿಎಂಒಗೆ ಕರೆ ಮಾಡಿ ದಾಳಿಯ ಕಾರಣವನ್ನು ನೀಡಿತ್ತು ಎಂದು ಅವರು ಹೇಳಿದ್ದಾರೆ.
Speaking in Lok Sabha during Special Discussion on India’s strong, successful and decisive ‘Operation Sindoor’. https://t.co/Vnm7TWMqSw
— Rajnath Singh (@rajnathsingh) July 28, 2025
ಈ ಸುದ್ದಿಯನ್ನೂ ಓದಿ: Operation Mahadev: ಜಮ್ಮು ಕಾಶ್ಮೀರದಲ್ಲಿ 3 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ; ಮುಂದುವರಿದ ಆಪರೇಷನ್ ಮಾಹಾದೇವ್ ಕಾರ್ಯಾಚರಣೆ
ಆಪರೇಷನ್ ಸಿಂದೂರ್ ಕಾರ್ಯಾಚರಣೆಗೂ ಮುನ್ನ ನಮ್ಮ ಸೇನಾ ಪಡೆಗಳು ಪ್ರತಿಯೊಂದು ಅಂಶವನ್ನು ಅಧ್ಯಯನ ಮಾಡಿ, ಭಯೋತ್ಪಾದಕರಿಗೆ ಗರಿಷ್ಠ ಹಾನಿಯನ್ನುಂಟುಮಾಡುವ ಆಯ್ಕೆಯನ್ನು ಆರಿಸಿಕೊಂಡವು. ಆಪರೇಷನ್ ಸಿಂದೂರ್ ಐತಿಹಾಸಿಕ ಮಿಲಿಟರಿ ಕ್ರಮ. ಭಯೋತ್ಪಾದನೆಯ ವಿರುದ್ಧ ನಮ್ಮ ನೀತಿಯ ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ನಮ್ಮ ನೆಲೆಗಳ ಮೇಲೆ ದಾಳಿ ಮಾಡಲು ಸಾಧ್ಯವಾಗಲಿಲ್ಲ, ನಮ್ಮ ಯಾವುದೇ ಪ್ರಮುಖ ಆಸ್ತಿ ಪಾಸ್ತಿಗೆ ಹಾನಿಯಾಗಿಲ್ಲ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ. ಪಾಕ್ ದಾಳಿಯನ್ನು ಎದುರಿಸಲು ಭಾರತ ಎಸ್-400 ಬಳಸಿದೆ. ನಮ್ಮ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ ಎಂದು ಅವರು ತಿಳಿಸಿದರು.