ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Central Government: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಗುಡ್‌ನ್ಯೂಸ್‌; ಪಾಲಕರ ಆರೈಕೆಗೆ ಸಿಗಲಿದೆ 30 ದಿನ ರಜೆ

Jitendra Singh: ಸೇವಾ ನಿಯಮಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ 30 ದಿನಗಳ ವೇತನ ಸಹಿತ ರಜೆ ಸಿಗಲಿದೆ. ಇದನ್ನು ವಯಸ್ಸಾದ ಪಾಲಕರ ಆರೈಕೆ ಸೇರಿದಂತೆ ಯಾವುದೇ ವೈಯಕ್ತಿಕ ಕಾರಣಕ್ಕಾಗಿ ಪಡೆಯಬಹುದು ಎಂದು ಕೇಂದ್ರ ಸಿಬ್ಬಂದಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ತಿಳಿಸಿದರು.

ಪಾಲಕರ ಆರೈಕೆಗೆ ಸರ್ಕಾರಿ ನೌಕರರಿಗೆ ಸಿಗಲಿದೆ 30 ದಿನ ರಜೆ

ಎಐ ಚಿತ್ರ

Ramesh B Ramesh B Jul 24, 2025 6:51 PM

ದೆಹಲಿ: ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ (Central Government) ಗುಡ್‌ನ್ಯೂಸ್‌ ನೀಡಿದೆ. ವಯಸ್ಸಾದ ಪಾಲಕರ ಆರೈಕೆಗೆ 30 ದಿನಗಳ ರಜೆ ಪಡೆಯಬಹುದು ಎಂದು ತಿಳಿಸಿದೆ. ''ಸೇವಾ ನಿಯಮಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ 30 ದಿನಗಳ ವೇತನ ಸಹಿತ ರಜೆ ಸಿಗಲಿದೆ. ಇದನ್ನು ವೃದ್ಧ ಪಾಲಕರ ಆರೈಕೆ ಸೇರಿದಂತೆ ಯಾವುದೇ ವೈಯಕ್ತಿಕ ಕಾರಣಕ್ಕಾಗಿ ಪಡೆಯಬಹುದುʼʼ ಎಂದು ಕೇಂದ್ರ ಸಿಬ್ಬಂದಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ (Jitendra Singh) ಗುರುವಾರ (ಜು. 24) ರಾಜ್ಯಸಭೆಯಲ್ಲಿ ತಿಳಿಸಿದರು.

ಸರ್ಕಾರಿ ನೌಕರರು ತಮ್ಮ ವೃದ್ಧ ಪಾಲಕರನ್ನು ಆರೈಕೆ ಮಾಡಲು ರಜೆ ಪಡೆಯಲು ಯಾವುದೇ ಅವಕಾಶವಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

ಈ ಸುದ್ದಿಯನ್ನೂ ಓದಿ: ಕೊವಿಡ್ ರೋಗಿಗಳಿಗೆ ಭಾರತದ ಮೊದಲ ಮೇಲ್ವಿಚಾರಣಾ ವ್ಯವಸ್ಥೆ ‘ಕೊವಿಡ್‍ ಬೀಪ್‍’ಗೆ ಡಾ.ಜಿತೇಂದ್ರ ಸಿಂಗ್ ಚಾಲನೆ

"ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮ 1972ರ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಇತರ ಅರ್ಹ ರಜೆಗಳನ್ನು ಹೊರತುಪಡಿಸಿ, 30 ದಿನಗಳ ಹೆಚ್ಚುವರಿ ವೇತನ ಸಹಿತ ರಜೆ, 20 ದಿನಗಳ ಅರ್ಧ ವೇತನ ರಜೆ, 8 ದಿನಗಳ ಸಾಂದರ್ಭಿಕ ರಜೆ ಮತ್ತು 2 ದಿನಗಳ ನಿರ್ಬಂಧಿತ ರಜೆಯನ್ನು ವಾರ್ಷಿಕವಾಗಿ ನೀಡಲಾಗುತ್ತದೆ. ಇದನ್ನು ವಯಸ್ಸಾದ ಪಾಲಕರ ಆರೈಕೆ ಸೇರಿದಂತೆ ಯಾವುದೇ ವೈಯಕ್ತಿಕ ಕಾರಣಗಳಿಗಾಗಿ ಪಡೆಯಬಹುದು" ಎಂದು ಸಿಂಗ್ ಲಿಖಿತ ಉತ್ತರದಲ್ಲಿ ವಿವರಿಸಿದರು.

ಜು. 28, 29ರಂದು ಆಪರೇಷನ್ ಸಿಂದೂರ ಕಾರ್ಯಾಚರಣೆಯ ಚರ್ಚೆ

ಸದ್ಯ ಸಂಸತ್ತಿನಲ್ಲಿ ಮುಂಆರು ಅಧಿವೇಶ ಆರಂಭವಾಗಿದ್ದು, ಆಪರೇಷನ್ ಸಿಂದೂರದ ಕುರಿತು ಜು. 28 ಹಾಗೂ 29ರಂದು ಚರ್ಚೆ ನಡೆಯಲಿದೆ. ಜು. 28ರಂದು ಲೋಕಸಭೆಯಲ್ಲಿ ಹಾಗೂ ಜು. 29ರಂದು ರಾಜ್ಯಸಭೆಯಲ್ಲಿ ಸಿಂದೂರದ ಬಗ್ಗೆ ಚರ್ಚೆಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಉಭಯ ಸದನಗಳಿಗೂ 16 ತಾಸು ಚರ್ಚೆಗೆ ಸಮಯ ನಿಗದಿಪಡಿಸಲಾಗಿದೆ. ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ಕಾರದ ಪರ ಮಾತನಾಡುವ ನಿರೀಕ್ಷೆಯಿದೆ. ಪ್ರತಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿಯ ಆರೋಪಗಳನ್ನು ಸರ್ಕಾರ ಉತ್ತರಿಸುವ ಸಾಧ್ಯತೆ ಇದೆ.

ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ ಪ್ರವಾಸಿಗರು ಹತ್ಯೆ ಮಾಡಿದ್ದರು. ಇದರ ವಿರುದ್ಧ ಸೇಡು ತೀರಿಸಿಕೊಂಡ ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಅಡಗುತಾಣಗಳನ್ನು ಧ್ವಂಸೊಳಿಸಿತ್ತು.