Pahalgam Terror Attack: ಅತ್ತ ಹಿಂದೂಗಳ ಮಾರಣಹೋಮ; ಇತ್ತ ಪಾಕ್ ರಾಯಭಾರಿ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ?
ಕಣಿವೆ ನಾಡು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದು ಅಮಾಯಕ 26 ಜೀವಗಳನ್ನು ಬಲಿಪಡೆದಿದ್ದಾರೆ. ಘಟನೆಯಿಂದ ಇಡೀ ವಿಶ್ವವೇ ಒಂದು ಸಲ ಬೆಚ್ಚಿಬಿದ್ದಿದೆ. ಆದರೆ ವೈರಿ ರಾಷ್ಟ್ರ ಪಾಕಿಸ್ತಾನ ಮಾತ್ರ ಭಾರತದಲ್ಲಿ ನಡೆದ ಹತ್ಯಾಕಾಂಡವನ್ನು ಸಂಭ್ರಮಿಸುತ್ತಿದೆ.


ನವದೆಹಲಿ: ಕಣಿವೆ ನಾಡು ಕಾಶ್ಮೀರದಲ್ಲಿ (Pahalgam Terror Attack) ಉಗ್ರರು ಅಟ್ಟಹಾಸ ಮೆರೆದು ಅಮಾಯಕ 26 ಜೀವಗಳನ್ನು ಬಲಿಪಡೆದಿದ್ದಾರೆ. ಘಟನೆಯಿಂದ ಇಡೀ ವಿಶ್ವವೇ ಒಂದು ಸಲ ಬೆಚ್ಚಿಬಿದ್ದಿದೆ. ಆದರೆ ವೈರಿ ರಾಷ್ಟ್ರ ಪಾಕಿಸ್ತಾನ ಮಾತ್ರ ಭಾರತದಲ್ಲಿ ನಡೆದ ಹತ್ಯಾಕಾಂಡವನ್ನು ಸಂಭ್ರಮಿಸುತ್ತಿದೆ. ಭಾರತದಲ್ಲೇ ಇರುವ ಪಾಕಿಸ್ತಾನ ರಾಯಭಾರ ಕಚೇರಿ ಮಾತ್ರ ಕೇಕ್ ಕತ್ತರಿಸುವ ಮೂಲಕ ಹತ್ಯಾಂಕಾಂಡವನ್ನು ಸಂಭ್ರಮಿಸಲಾಗಿದೆ ಎಂದು ತಿಳಿದು ಬಂದಿದೆ. ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ಗೆ ವ್ಯಕ್ತಿಯೊಬ್ಬ ಕೇಕ್ ತಲುಪಿಸುತ್ತಿರುವುದನ್ನು ಚಿತ್ರಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕೇವಲ ಎರಡು ದಿನಗಳ ನಂತರ ಈ ವಿಡಿಯೋ ಕಾಣಿಸಿಕೊಂಡಿದ್ದು, ಉಗ್ರರು ಮಾಡಿರುವ ದುಷ್ಕೃತ್ಯವನ್ನು ಪಾಕಿಸ್ತಾನ ಆನಂದಿಸಿದೆ. ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳು ತಮ್ಮ ಕಚೇರಿಗೆ ಕೇಕ್ ತರಿಸಿಕೊಂಡು ಸಂಭ್ರಮಾಚರಣೆಗೆ ಮುಂದಾಗಿದ್ದರು ಎನ್ನಲಾಗಿದೆ. ಪಾಕ್ ಅಧಿಕಾರಿಗಳು ಕಚೇರಿಯಿಂದ ಹೊರ ಹೋಗುವಾಗ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ಎನ್ನಲಾಗಿದೆ. ಕೇಕ್ ಒಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ವೈರಲ್ ಆದ ವಿಡಿಯೋಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
We had an office for them.
— Subhi Vishwakarma (@subhi_karma) April 24, 2025
See cakes being delivered at Pakistan High Commission in Delhi today.
What's this celebration for? #PahalgamTerroristAttack pic.twitter.com/YaRhkdN3tw
ಪೆಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳು ಮತ್ತು ದೇಶದಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನು ಭಾರತ ಸರ್ಕಾರ 48 ಗಂಟೆಗಳಲ್ಲಿ ದೇಶ ತೊರೆಯುವಂತೆ ಘೋಷಿಸಿದೆ. ಘಟನೆ ಬಳಿಕ ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಕ್ರಮಗಳಲ್ಲಿ ಪಾಕ್ ರಾಯಭಾರಿ ಕಚೇರಿ ತೊರೆಯುವಂತೆ ಪಾಕಿಸ್ತಾನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಾಕಿಸ್ತಾನ ಸರ್ಕಾರದ ಅಧಿಕೃತ X ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ.
ಈ ಸುದ್ದಿಯನ್ನೂ ಓದಿ: Pahalgam terror attack: ಪಹಲ್ಗಾಮ್ ಉಗ್ರರ ದಾಳಿ- ರಾತ್ರೋರಾತ್ರಿ ಪಾಕ್ ರಾಯಭಾರಿ ಕಚೇರಿ ಅಧಿಕಾರಿಗೆ ಸಮನ್ಸ್; ಒಂದು ವಾರಗಳ ಗಡುವು
ನಿನ್ನೆ ನಡೆದ ಸಂಪುಟ ಸಭೆಯಲ್ಲಿ 1960 ಸಿಂಧೂ ನದಿ ಜಲ ಒಪ್ಪಂದವನ್ನು ಈಗಾಗಲೇ ರದ್ದು ಮಾಡಲಾಗಿದೆ. ಪಾಕಿಸ್ತಾನ ವಿರುದ್ಧ ಖಡಕ್ ರಾಜತಾಂತ್ರಿಕ ನಿರ್ಧಾರ ತೆಗೆದುಕೊಂಡಿರುವ ಭಾರತ ದೆಹಲಿಯಲ್ಲಿರುವ ಪಾಕ್ ರಾಜತಾಂತ್ರಿಕ ಅಧಿಕಾರಿ ಸಾದ್ ಅಹ್ಮದ್ ವಾರೈಚ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ರಾತ್ರೋರಾತ್ರಿ ಪಾಕ್‌ನ ಎಲ್ಲಾ ಮಿಲಿಟಲಿ ಅಧಿಕಾರಿಗಳ ವಿರುದ್ದ ವಿದೇಶಾಂಗ ಸಚಿವಾಲಯ ಜಾರಿಗೊಳಿಸಿರುವ ಪರ್ಸೋನಾ ನಾನ್ ಗ್ರಾಟಾ ನೋಟ್ ಅನ್ನು ವಾರೈಚ್ ಅವರಿಗೆ ಹಸ್ತಾಂತರಿಸಲಾಗಿದೆ. ಆ ಮೂಲಕ ಭಾರತದಲ್ಲಿರುವ ಪಾಕಿಸ್ತಾನಿ ರಕ್ಷಣಾ, ನೌಕಾ ಮತ್ತು ವಾಯುಪಡೆ ಸಲಹೆಗಾರರು ತಕ್ಷಣ ಭಾರತದಿಂದ ಜಾಗ ಖಾಲಿ ಮಾಡಬೇಕಿದೆ.