Kangana Ranaut: 'ನೀವು ಮಸಾಲೆ ಸೇರಿಸಿದ್ದೀರಿ'; ಕಂಗನಾ ವಿರುದ್ಧದ ಮಾನಹಾನಿ ಕೇಸ್ ಅರ್ಜಿ ತಿರಸ್ಕರಿಸಿದ ಸುಪ್ರೀಂ
ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯೊಬ್ಬರ ಬಗ್ಗೆ ಟ್ವೀಟ್ (Farmers Protest) ಮಾಡಿದ್ದಕ್ಕಾಗಿ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ( Kangana Ranaut) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

-

ನವದೆಹಲಿ: ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯೊಬ್ಬರ ಬಗ್ಗೆ ಟ್ವೀಟ್ (Farmers Protest) ಮಾಡಿದ್ದಕ್ಕಾಗಿ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ( Kangana Ranaut) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿತು, ಕಂಗನಾ ಅವರ ಟ್ವೀಟ್ ಕೇವಲ ರೀಟ್ವೀಟ್ ಅಲ್ಲ, ಬದಲಾಗಿ ನೀವು ಅದಕ್ಕೆ ಮಸಾಲೆ ಸೇರಿಸಿದ್ದೀರಿ ಎಂದು ಹೇಳಿದೆ.
ನೀವು ಆ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿಲ್ಲ. ಬದಲಾಗಿ ಅದರಲ್ಲಿ ನಿಮ್ಮದೇ ಕೆಲ ಅಂಶಗಳನ್ನು ಸೇರಿಸಿದ್ದೀರಿ. ನೀವು ಮಸಾಲೆ ಸೇರಿಸಿದ್ದೀರಿ" ಎಂದು ನ್ಯಾಯಮೂರ್ತಿ ಮೆಹ್ತಾ ಹೇಳಿದರು. ವಿಚಾರಣೆಯ ಸಮಯದಲ್ಲಿ, ರನೌತ್ ಅವರ ವಕೀಲರು, ಅವರು ತಮ್ಮ ಹೇಳಿಕೆಗಳಿಗೆ ಈಗಾಗಲೇ ಸ್ಪಷ್ಟೀಕರಣವನ್ನು ನೀಡಿದ್ದಾರೆ ಮತ್ತು ಪಂಜಾಬ್‌ನಲ್ಲಿ ಹಾಜರಾಗುವ ಬಗ್ಗೆ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿದ್ದಾರೆ ಎಂದು ವಾದಿಸಿದರು. ನ್ಯಾಯಾಲಯ, ಅವರು ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು ಎಂದು ಪೀಠ ಸೂಚಿಸಿತು. ನಂತರ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ವಜಾಗೊಳಿಸಲಾಯಿತು.
ರೈತರ ಆಂದೋಲನದ ಸಮಯದಲ್ಲಿ ವೃದ್ಧ ಪ್ರತಿಭಟನಾಕಾರ ಮಹಿಂದರ್ ಕೌರ್ ಅವರ ಬಗ್ಗೆ ರನೌತ್ ಹಂಚಿಕೊಂಡ ಟ್ವೀಟ್‌ನಿಂದ ಈ ವಿವಾದ ಹುಟ್ಟಿಕೊಂಡಿದೆ. ಕಂಗನಾ ಆ ಮಹಿಳೆ ನೂರು ರೂ. ಪಡೆದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಳೆ ಎಂಬರ್ಥದಲ್ಲಿ ಕಮೆಂಟ್ ಮಾಡಿದ್ದರು. ಈ ಕುರಿತು ಕಂಗನಾ ಮೇಲೆ ಮಹಿಳೆ ಮಾನಹಾನಿ ಪ್ರಕರಣ ದಾಖಲಿಸಿದ್ದರು. ದೂರಿನ ಮೇರೆಗೆ, ಮ್ಯಾಜಿಸ್ಟ್ರೇಟ್ ಐಪಿಸಿ ಸೆಕ್ಷನ್ 499 ರ ಅಡಿಯಲ್ಲಿ ಮಾನನಷ್ಟಕ್ಕೆ ಪ್ರಾಥಮಿಕ ಕಾರಣವೆಂದು ಕಂಡುಕೊಂಡು ಸಮನ್ಸ್ ಜಾರಿ ಮಾಡಿದರು. ಟ್ವೀಟ್‌ನಲ್ಲಿ ಉಲ್ಲೇಖಿಸಲಾದ ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ತನಗೂ ಯಾವುದೇ ಸಂಬಂಧವಿಲ್ಲ ಮತ್ತು ಆ ಹೋಲಿಕೆ (ತನ್ನದು) ತಪ್ಪಾಗಿದೆ, ಮಾನಹಾನಿಕರವಾಗಿದೆ ಮತ್ತು ತನ್ನ ಖ್ಯಾತಿಗೆ ಹಾನಿಕಾರಕವಾಗಿದೆ ಎಂದು ಕೌರ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Kangna Sharma: ಡೀಪ್ ನೆಕ್ ಬಟ್ಟೆ ಧರಿಸಿ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಕಂಗನಾ ಶರ್ಮಾ
ಪಂಜಾಬ್‌ನ ಬಹದ್ದೂರ್‌ಗಢ್ ಜಾಂಡಿಯನ್ ಗ್ರಾಮದ 73 ವರ್ಷದ ಮಹಿಂದರ್ ಕೌರ್ ಸಲ್ಲಿಸಿದ್ದ ದೂರನ್ನು ರದ್ದುಗೊಳಿಸುವಂತೆ ರನೌತ್ ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆಗಸ್ಟ್ 1 ರ ಆದೇಶದಲ್ಲಿ ವಜಾಗೊಳಿಸಿದ ನಂತರ, ನಟಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.