ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪ್ರಧಾನಿ ಮೋದಿಯ ತವರು ಎಷ್ಟು ಸುರಕ್ಷಿತ? ಫ್ರೆಂಚ್ ಮಹಿಳೆ ವೈರಲ್ ಪೋಸ್ಟ್‌ನಲ್ಲೇನಿದೆ?

French Woman Living in Ahmedabad: ಗುಜರಾತ್‌ನ ಅಹಮದಾಬಾದ್‌ನಲ್ಲಿ ಒಂದು ವರ್ಷದಿಂದ ವಾಸಿಸುತ್ತಿರುವ ಫ್ರೆಂಚ್ ಮಹಿಳೆ ಜೂಲಿಯಾ ಚೈಗ್ನೋ ಎಂಬಾಕೆ, ನಗರದ ಜೀವನದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಈ ನಗರ ಬಹಳ ಸುರಕ್ಷತೆಯನ್ನು ಹೊಂದಿದೆ ಎಂದು ಅವರು ವಿವರಿಸಿದ್ದಾರೆ.

ಅಹಮದಾಬಾದ್ ನಗರ ಎಷ್ಟು ಸುರಕ್ಷಿತ ಎಂದು ಹಂಚಿಕೊಂಡ ಫ್ರೆಂಚ್ ಮಹಿಳೆ

-

Priyanka P Priyanka P Sep 12, 2025 2:11 PM

ಅಹಮದಾಬಾದ್‌: ಕೆಲವು ವಿದೇಶಿಯರು ಭಾರತವನ್ನು ಗಲೀಜು ಅಥವಾ ಕೊಳಚೆ ದೇಶ ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದೀಗ ಭಾರತದ ಬಗ್ಗೆ ಕೊಂಡಾಡಿದ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗುಜರಾತ್‌ನ ಅಹಮದಾಬಾದ್‌ (Ahmedabad) ನಲ್ಲಿ ಒಂದು ವರ್ಷದಿಂದ ವಾಸಿಸುತ್ತಿರುವ ಫ್ರೆಂಚ್ (French) ಮಹಿಳೆ ಜೂಲಿಯಾ ಚೈಗ್ನೋ, ನಗರದ ಜೀವನದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಸುರಕ್ಷತೆ ಮತ್ತು ಆಹಾರ ಸಂಸ್ಕೃತಿ ಎರಡನ್ನೂ ತಮ್ಮ ಪೋಸ್ಟ್‌ನಲ್ಲಿ ಎತ್ತಿ ತೋರಿಸಿದ್ದಾರೆ. ಎಕ್ಸ್‌ನಲ್ಲಿ ಬರೆಯುತ್ತಾ, ಭಾರತಕ್ಕೆ ವಲಸೆ ಬಂದಾಗ ಇಲ್ಲಿನ ಸುರಕ್ಷತೆ ಬಗ್ಗೆ ಅಮೆರಿಕದ ಸ್ನೇಹಿತರು ಕಳವಳ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.

ಮದ್ಯ ಮಾರಾಟ ನಿರ್ಬಂಧಿತವಾಗಿರುವ ರಾಜ್ಯದಲ್ಲಿ ವಾಸಿಸುವುದು ಸುರಕ್ಷತೆಯ ಬಗ್ಗೆ ತನ್ನ ದೃಷ್ಟಿಕೋನವನ್ನು ರೂಪಿಸಿದೆ ಎಂದು ಜೂಲಿಯಾ ವಿವರಿಸಿದರು. ಒಂದು ಸ್ಥಳವು ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ನೋಡಿದರೆ ತಿಳಿಯುತ್ತದೆ. ಭಾರತೀಯ ಮತ್ತು ಅಂತಾರಾಷ್ಟ್ರೀಯ ಪ್ರಜೆಗಳನ್ನೊಳಗೊಂಡ ಗೇಟೆಡ್ ಸಮುದಾಯದಲ್ಲಿ ವಾಸ ಮಾಡುವುದು ಹೆಚ್ಚುವರಿ ರಕ್ಷಣೆಯ ಅರ್ಥವನ್ನು ನೀಡಿತು. ಬೆಚ್ಚಗಿನ ಮತ್ತು ಉತ್ತಮ ವಾತಾವರಣವನ್ನು ಸಹ ಒದಗಿಸಿತು ಎಂದು ಹೇಳಿದರು. ತನ್ನ ಸಕಾರಾತ್ಮಕ ಅನುಭವವು ಭಾರತದ ಪ್ರತಿಯೊಂದು ಪ್ರದೇಶದಲ್ಲೂ ಇದೇ ರೀತಿ ಅನುಭವ ನೀಡುತ್ತದೆ ಎಂದಲ್ಲ. ಆದರೆ, ಅಹಮದಾಬಾದ್ ತನಗೆ ಭದ್ರತೆ ಮತ್ತು ಸೌಕರ್ಯವನ್ನು ನೀಡಿತು ಎಂದು ಅವರು ಹೇಳಿದರು.

ವಿಡಿಯೊ ವೀಕ್ಷಿಸಿ:



ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ವೈರಲ್ (Viral News) ಆಗುತ್ತಲೇ, ಹಲವಾರು ಪ್ರತಿಕ್ರಿಯೆಗಳನ್ನು ಪಡೆಯಿತು. ಅಹಮದಾಬಾದ್‌ನಲ್ಲಿ ಸಾಕಷ್ಟು ಸಮಯ ಕಳೆದ ನಂತರವೇ ಹೊರಗಿನವರಿಗೆ ಅದರ ಶ್ರೇಷ್ಠತೆ ಅರಿವಾಗುತ್ತದೆ ಎಂದು ಸ್ಥಳೀಯರೊಬ್ಬರು ಕಾಮೆಂಟ್ ಮಾಡಿದ್ದಾರೆ. ಗುಜರಾತ್‌ನಲ್ಲಿ ಮಹಿಳೆಯರಿಗೆ ಸುರಕ್ಷತೆಯು ಪೊಲೀಸ್ ವ್ಯವಸ್ಥೆಗಿಂತ ಸಾಂಸ್ಕೃತಿಕ ಮೌಲ್ಯಗಳಲ್ಲಿ ಹೆಚ್ಚು ಬೇರೂರಿದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಮದ್ಯಪಾನದಿಂದ ದೂರವಿರುವುದು ಮತ್ತು ಕಿರುಕುಳ ಅಥವಾ ಕಳ್ಳತನದ ವಿರುದ್ಧ ನಿಲ್ಲುವಂತಹ ಅಭ್ಯಾಸಗಳನ್ನು ಉಲ್ಲೇಖಿಸುತ್ತಾರೆ.

ಜೂಲಿಯಾ ಭಾರತದ ಪಾಕಪದ್ಧತಿಯ ವೈವಿಧ್ಯತೆಯನ್ನು ಶ್ಲಾಘಿಸಿದರು. ಬಾಯಲ್ಲಿ ನೀರೂರುವ ಬೀದಿ ಬದಿ ಆಹಾರ, ಅತ್ಯುತ್ತಮ ಭೋಜನ, ಇವನ್ನೆಲ್ಲಾ ಸವಿದರಿಗಷ್ಟೇ ರುಚಿ ಗೊತ್ತಿರಲು ಸಾಧ್ಯ ಎಂದು ಅವರು ಹೇಳಿದರು. ಇದಕ್ಕೆ ಪೂರಕವಾಗಿ, ಜೂಲಿಯಾ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಒಂದು ಕಾರಿನೊಳಗೆ ಬೀದಿ ಬದಿ ಆಹಾರವನ್ನು ಆನಂದಿಸುತ್ತಿರುವ ಚಿತ್ರ, ಇನ್ನೊಂದು ರೆಸ್ಟೋರೆಂಟ್‌ನಲ್ಲಿ ಸವಿದ ಉತ್ತಮ ಊಟದ ಫೋಟೋ. ಅಹಮದಾಬಾದ್ ನೀಡುವ ಸುರಕ್ಷತೆ, ಸಂಸ್ಕೃತಿ ಮತ್ತು ಆತಿಥ್ಯದ ವಿಶಿಷ್ಟ ಸಮತೋಲನವನ್ನು ಪ್ರದರ್ಶಿಸುವ ಮೂಲಕ ಅವರ ಪೋಸ್ಟ್ ಇದೀಗ ಗಮನ ಸೆಳೆದಿದೆ.

ಇದನ್ನೂ ಓದಿ: Viral Video: ನನ್ನನ್ನೇ ಕಚ್ಚುತ್ತೀಯಾ?: ಕುಡಿದ ಮತ್ತಿನಲ್ಲಿ ಕುತ್ತಿಗೆಗೆ ಹಾವು ಸುತ್ತಿಕೊಂಡು ಹುಚ್ಚಾಟ ಮೆರೆದ ವ್ಯಕ್ತಿ