Naga Chaitanya: ಮುದ್ದಿನ ಸಾಕು ನಾಯಿ ಜತೆ ನಟಿ ಶೋಭಿತಾ; ಸ್ಪೆಶಲ್ ಫೋಟೊ ಶೇರ್ ಮಾಡಿದ ನಾಗಚೈತ್ಯನ್ಯ
ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಹಾಗೂ ಅಕ್ಕಿನೇನಿ ನಾಗ ಚೈತನ್ಯ ಮೋಸ್ಟ್ ಕ್ಯೂಟ್ ಕಪಲ್ ಎಂದೇ ಖ್ಯಾತಿ ಪಡೆದಿದ್ದರು. ಆದರೆ ಇಬ್ಬರ ನಡುವಿನ ವೈಮನಸ್ಸು ಇವರ ವೈವಾಹಿಕ ಸಂಬಂಧವನ್ನು ಡಿವೋರ್ಸ್ನೊಂದಿಗೆ ಅಂತ್ಯ ಕಾಣುವಂತೆ ಮಾಡಿತು. ಸಮಂತಾ ಜತೆಗೆ ವಿಚ್ಛೇದನದ ಪಡೆದ ನಂತರ ನಟ ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡಿ ಕಳೆದ ವರ್ಷ ಡಿಸೆಂಬರ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕ ನಟ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಆಗಾಗ ಫೋಟೋ ಹಂಚಿಕೊಳ್ಳುತ್ತಾರೆ. ಇದೀ ಅಂತಹದ್ದೇ ಫೋಟೊ ವೈರಲ್ ಆಗಿದೆ.

Naga Chaitanya Shares Photo Of Sobhita Dhulipala


ನಾಗಚೈತನ್ಯ ಅಕ್ಕಿನೇನಿ ಮತ್ತು ಶೋಭಿತಾ ಆಗಾಗ ಫೋಟೋ ಶೇರ್ ಮಾಡುತ್ತಾರೆ. ಈ ಬಾರಿ ತಮ್ಮ ಪ್ರೀತಿಯ ಮುದ್ದು ನಾಯಿ ಹ್ಯಾಶ್ ಜತೆಗೆ ಪತ್ನಿ ಶೋಭಿತಾ ಧುಲಿಪಾಲ ಅವರು ಸಮಯ ಕಳೆದಿದ್ದ ಫೋಟೊವನ್ನು ನಟ ನಾಗ ಚೈತನ್ಯ ಅಕ್ಕಿನೇನಿ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಟ ನಾಗಚೈತನ್ಯ ಅಕ್ಕಿನೇನಿ ಶೇರ್ ಮಾಡಿಕೊಂಡ ಫೋಟೊದಲ್ಲಿ ನಟಿ ಶೋಭಿತಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಮುದ್ದಾದ ಸಾಕು ನಾಯಿ ಹ್ಯಾಶ್ ಜತೆಗೆ ಶೋಭಿತಾ ಸಮಯ ಕಳೆದಿದ್ದಾರೆ. ನಟ ಈ ಫೋಟೊವನ್ನು ಎಲ್ಲ ಮುಗಿದಿದೆ ಎನ್ನುವ ಕ್ಯಾಪ್ಶನ್ನೊಂದಿಗೆ ಹಂಚಿಕೊಂಡಿದ್ದಾರೆ.

ಈ ಫೋಟೊಕ್ಕೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದು, ಅಭಿಮಾನಿಯೊಬ್ಬರು ವಾವ್ಹ್ ಸೂಪರ್ ಡೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಇದು ಸ್ಯಾಮ್ನ ಮುದ್ದು ಹ್ಯಾಶ್ ಅಲ್ವಾ ಎಂದು ಪ್ರಶ್ನೆಯನ್ನು ಕಾಮೆಂಟ್ ಬಾಕ್ಸ್ನಲ್ಲಿ ಹಾಕಿದ್ದಾರೆ. ಈ ಹಿಂದೆ ನಟಿ, ಮಾಜಿ ಪತ್ನಿ ಸಮಂತಾ ರುತ್ ಪ್ರಭು ಜತೆಗೂ ನಟ ನಾಗಚೈತನ್ಯ ಸಾಕು ನಾಯಿ ಹ್ಯಾಶ್ ಫೋಟೊ ಹಂಚಿಕೊಂಡಿದ್ದರು.

ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಅವರು 2024ರಲ್ಲಿ ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ವಿವಾಹವಾದರು. ಈ ವಿವಾಹದ ಬಳಿಕ ನಟಿ ಶೋಭಿತಾ ಧುಲಿಪಾಲಾ ಅವರಿಗೆ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ನೆಗೆಟಿವ್ ಕಾಮೆಂಟ್ಗಳ ಸುರಿಮಳೆ ಬಂದಿದೆ. ಆದರೆ ನಾಗಚೈತನ್ಯ ಮಾತ್ರ ನಾನು ಶೋಭಿತಾ ಅವರೊಂದಿಗಿನ ಅದ್ಭುತ ವೈವಾಹಿಕ ಜೀವನ ಕಂಡು ಕೊಂಡಿದ್ದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಇಬ್ಬರು ಕೂಡ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಚೆನ್ನಾಗಿ ಸಮತೋಲನಗೊಳಿಸಲು ಸಾಧ್ಯವಾಗಿದೆ ಎಂದು ಹೇಳಿದ್ದರು.

ಇತ್ತೀಚೆಗೆ ʼತಂಡೆಲ್ʼ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕೂಡ ತಮ್ಮ ಪತ್ನಿ ಶೋಭಿತಾ ವೈಜಾಗ್ ಮೂಲದವರು ಎಂದು ತಿಳಿಸಿದ್ದರು. ನಾಗ ಚೈತನ್ಯ ನಟನೆಯ ʼತಂಡೆಲ್ʼ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಾಗ ಚೈತನ್ಯ ವೃತ್ತಿ ಬದುಕಿನಲ್ಲಿಯೇ 100 ಕೋಟಿ ರೂ. ಕಲೆಕ್ಷನ್ ಮಾಡಿರುವ ಮೊದಲ ಸಿನಿಮಾವಾಗಿ ಇದು ಹೊರ ಹೊಮ್ಮಿದೆ. ಈ ಮೂಲಕ ಅವರಿಗೆ ವರ್ಷಗಳ ನಂತರ ದೊಡ್ಡ ಯಶಸ್ಸು ಸಿಕ್ಕಿದೆ.