Cough Syrup: ಕೆಮ್ಮಿನ ಸಿರಪ್ ತಯಾರಿಕೆ ಕಾರ್ಖಾನೆಯಲ್ಲಿ ಮೂಲಭೂತ ಸೌಕರ್ಯ ಕೊರತೆ; ಸ್ವಚ್ಛತೆಯೂ ಇಲ್ಲ: ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ
ಚೆನ್ನೈ ಮೂಲದ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಕೋಲ್ಡ್ರಿಫ್ ಕಾಫ್ ಸಿರಪ್ ತಯಾರಿಕೆಯಲ್ಲಿ ಭಾರಿ ಲೋಪ ಉಂಟಾಗಿದ್ದು, ಸಿಬ್ಬಂದಿಯಿಂದ ಹಿಡಿದು ಉತ್ಪನ್ನದ ಭದ್ರತೆ ವಿಷಯದಲ್ಲಿಯೂ ಬೇಜಾವಬ್ದಾರಿತನ ತೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೀತ-ಕೆಮ್ಮಿನಿಂದ ಬಳಲುತ್ತಿದ್ದ ಮಕ್ಕಳು ಈ ಸಿರಪ್ ಸೇವಿಸಿದ ನಂತರ ಅಸ್ವಸ್ಥರಾಗಿದ್ದು, ಕೆಲವು ಮಕ್ಕಳು ಕಿಡ್ನಿ ವೈಫಲ್ಯದಿಂದ ಸಾವಿಗೀಡಾಗಿದ್ದಾರೆ. ಸಿರಪ್ ಮಾದರಿಗಳನ್ನು ಪರೀಕ್ಷಿಸಿದ ಬಳಿಕ, ಅದರಲ್ಲಿ ವಿಷಕಾರಿ ದ್ರಾವಕವಾದ ಡೈಥಿಲೀನ್ ಗ್ಲೈಕೋಲ್ ಪ್ರಮಾಣ ಅಧಿಕ ಇದ್ದುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.

ಸಾಂಧರ್ಬಿಕ ಚಿತ್ರ -

ಚೆನ್ನೈ: ಸರ್ಕಾರ ನೀಡಿದ ಉಚಿತ ಕಾಫ್ ಸಿರಪ್ (Cough syrup) ಪುಟ್ಟ ಕಂದಮ್ಮಗಳ ಸಾವಿಗೆ ಕಾರಣವಾಗಿದ್ದು, ಮಧ್ಯ ಪ್ರದೇಶದ ಛಿಂದ್‌ವಾರಾ ಜಿಲ್ಲೆಯಲ್ಲಿ 9 ಮಕ್ಕಳು ಮತ್ತು ರಾಜಸ್ಥಾನದ ಭರತ್ ಹಾಗೂ ಸಿಕರ್‌ನಲ್ಲಿ 2 ಮಕ್ಕಳು ಸೇರಿ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಸರ್ಕಾರಗಳ ಉಚಿತ ವೈದ್ಯಕಿಯ ಸವಲತ್ತು ಯೋಜನೆಯಡಿ ಈ ಕಾಫ್ ಸಿರಪ್ ವಿತರಿಸಲಾಗಿತ್ತು. ನಂತರ ಸಿರಪ್ ಸೇವಿಸಿದ ವೈದ್ಯರೂ ಅಸ್ವಸ್ಥತರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ (Rajasthan Horror). ಘಟನೆ ಬಳಿಕ ಎಚ್ಚೆತ್ತ ತಮಿಳುನಾಡು ಸರ್ಕಾರ ಔಷಧ ಪೂರೈಕೆಯನ್ನು ಸ್ಥಗಿತಗೊಳಿಸಿದ್ದು, ತನಿಖೆಗೆ ಆದೇಶ ಹೊರಡಿಸಿದೆ.
ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಎಂಬ ಎರಡು ಕೆಮ್ಮಿನ ಸಿರಪ್‌ಗಳು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದ್ದು, ತಮಿಳುನಾಡು ಡ್ರಗ್ಸ್ ಕಂಟ್ರೋಲ್ ಇಲಾಖೆ ನಡೆಸಿದ ತನಿಖೆಯಲ್ಲಿ ಆಘಾತಕಾರಿ ವಿಷಯ ಬಹಿರಂಗವಾಗಿದೆ.
ಹೌದು, ಚೆನ್ನೈ ಮೂಲದ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಕೋಲ್ಡ್ರಿಫ್ ತಯಾರಿಕೆಯಲ್ಲಿ ಭಾರಿ ಲೋಪ ಉಂಟಾಗಿದ್ದು, ಸಿಬ್ಬಂದಿಯಿಂದ ಹಿಡಿದು ಉತ್ಪನ್ನದ ಭದ್ರತೆ ವಿಷಯದಲ್ಲಿಯೂ ಬೇಜಾವಬ್ದಾರಿತನ ತೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೀತ-ಕೆಮ್ಮಿನಿಂದ ಬಳಲುತ್ತಿದ್ದ ಮಕ್ಕಳು ಈ ಸಿರಪ್ ಸೇವಿಸಿದ ನಂತರ ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಕೆಲವರು ಕಿಡ್ನಿ ವೈಫಲ್ಯದಿಂದ ಸಾವಿಗೀಡಾಗಿದ್ದಾರೆ. ಸಿರಪ್ ಮಾದರಿಗಳನ್ನು ಪರೀಕ್ಷಿಸಿದ ಬಳಿಕ, ಅದರಲ್ಲಿ ವಿಷಕಾರಿ ದ್ರಾವಕವಾದ ಡೈಥಿಲೀನ್ ಗ್ಲೈಕೋಲ್ ಪ್ರಮಾಣ ಅಧಿಕವಿದ್ದುದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ.
ತನಿಖಾಧಿಕಾರಿಗಳು ಮತ್ತಷ್ಟು ಗಂಭೀರ ವಿಷಯಗಳನ್ನು ಬಹಿರಂಗಗೊಳಿಸಿದ್ದು, ಸಿರಪ್ ತಯಾರಿಸುವ ಕಾರ್ಖಾನೆಯಲ್ಲು ಸ್ವಚ್ಛತೆ ಮರೆಯಾಗಿದ್ದು, ಅಲ್ಲಿನ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಕಾರ್ಖಾನೆಯಲ್ಲಿ ಎಯರ್ ಹ್ಯಾಂಡ್ಲಿಂಗ್ ಯುನಿಟ್‌ಗಳ ಕೊರತೆ ಎದ್ದು ಕಾಣುತ್ತಿದ್ದು, ಸಮರ್ಪಕವಾದ ವೆಂಟಿಲೇಟರ್ ವ್ಯವಸ್ಥೆ ಇಲ್ಲದೇ ಅಲ್ಲಿನ ಉಪಕರಣಗಳು ತುಕ್ಕು ಹಿಡಿದಿವೆ. ಇಂತಹ ಅವ್ಯವಸ್ಥೆಯ ಕೂಪದಲ್ಲಿ ಸಿರಪ್ ತಯಾರಿಕೆ ಮಾಡಲಾಗುತ್ತಿದ್ದು, ಸುರಕ್ಷತಾ ಕ್ರಮಗಳನ್ನು ಪಾಲನೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಮಾದಕ ದ್ರವ್ಯವೆಂದು ಶಂಕಿಸಿ, ಪರ್ಫ್ಯೂಮ್ ವಶಕ್ಕೆ; ಅಧಿಕಾರಿಗಳ ತಪ್ಪಿಗೆ ಭಾರತೀಯನ ಪರದಾಟ
ಕಳಪೆ ಗುಣಮಟ್ಟ
ಕಳಪೆ ದರ್ಜೆಯ ಕಚ್ಚಾವಸ್ತು ಬಳಕೆ ಮಾಡಿದ್ದಾರೆ ಎನ್ನಲಾಗಿದ್ದು, ಉತ್ಪನ್ನದ ಗುಣಮಟ್ಟವನ್ನು ಪರಿಶೀಲಿಸಲು ಯಾವುದೇ ಅಧಿಕಾರಿಗಳನ್ನು ಕಂಪನಿ ನೇಮಕ ಮಾಡಿಲ್ಲ. ಉತ್ಪನ್ನಗಳನ್ನು ಹಿಂಪಡೆಯುವ (Recall) ಪ್ರಕ್ರಿಯೆ ಅಥವಾ ಗುಣಮಟ್ಟದ ಲೋಪಗಳನ್ನು ನಿರ್ವಹಿಸಲು ಯಾವುದೇ SOPs ನಿಯಮಗಳನ್ನು ಪಾಲಿಸುವುದಿಲ್ಲ ಎಂದು ವರದಿ ತಿಳಿಸಿದೆ.
ಒಟ್ಟಾರೆ ಕಾರ್ಖಾನೆ ಅವ್ಯವಸ್ಥೆಯ ಅಗರವಾಗಿದ್ದು, ಗಳಿಕೆಯ ಹಿಂದೆ ಬಿದ್ದಿರುವ ಕಂಪನಿ ಮೂಲಭೂತ ಸೌಕರ್ಯ ಹಾಗೂ ಶುಚಿತ್ವ, ಭದ್ರತೆ ಇತ್ಯಾದಿ ವಿಷಯಗಳನ್ನು ಕಡೆಗಣಿಸಿ ಔಷಧಿ ತಯಾರಿಕೆ ಮಾಡುತ್ತಿದ್ದು, ಈ ಬೆಳವಣಿಗೆಯಿಂದ ಪೋಷಕರು ಮಕ್ಕಳಿಗೆ ಸಿರಪ್ ನೀಡುವುದಕ್ಕೂ ನೂರು ಬಾರಿ ಯೋಚಿಸುವಂತೆ ಆಗಿದೆ.
ಘಟನೆಯ ನಂತರ, ಮಧ್ಯ ಪ್ರದೇಶ ಸರ್ಕಾರದ ಮಾಹಿತಿ ಆಧಾರದಲ್ಲಿ, ತಮಿಳುನಾಡಿನ ಕಾಂಚೀಪುರಂನಲ್ಲಿ ಇರುವ ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್‌ನ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಸಂಸ್ಥೆಯ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಿದೆ. ಕಂಪನಿಯ ವಿರುದ್ಧ ಪ್ರಕರಣವೂ ದಾಖಲಾಗಿದೆ.
ಇನ್ನು ಕೇಂದ್ರ ಸರ್ಕಾರ (Central Government) 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬಾರದು ಎಂದು ಶಿಫಾರಸು ಮಾಡಿದೆ. ಕೋಲ್ಡ್ರಿಫ್ ಕಾಫ್ ಸಿರಪ್ ಅನ್ನು ಕರ್ನಾಟಕ ಸೇರಿದಂತೆ ತಮಿಳನಾಡಿನಲ್ಲೂ ಬ್ಯಾನ್ ಮಾಡಲಾಗಿದೆ. ಎಲ್ಲ ಸ್ಟಾಕ್‌ಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಹೀಗಾಗಿ ಮುಂದಿನ ಸರ್ಕಾರದ ಆದೇಶದವರೆಗೆ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಕಾಫ್ ಸಿರಫ್ ಮಾರಾಟ ಮಾಡದ್ದಂತೆ ತಿಳಿಸಲಾಗಿದೆ. ಈ ಸಿರಪ್‌ಗಳನ್ನು ಸೇವಿಸಿದ ಮಕ್ಕಳಿಗೆ ಮೂತ್ರ ವಿಸರ್ಜನೆ ನಿಂತು, ದೇಹದಲ್ಲಿ ಊತ ಕಾಣಿಸಿಕೊಂಡು, ಕಿಡ್ನಿ ವೈಫಲ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.