Sridevi Birth Anniversary: ಪತ್ನಿ ಶ್ರೀದೇವಿಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೊ ಶೇರ್ ಮಾಡಿದ್ದ ನಿರ್ಮಾಪಕ ಬೋನಿ ಕಪೂರ್!
ಭಾರತೀಯ ಚಿತ್ರರಂಗದ ಪ್ರಸಿದ್ದ ನಟಿಯರಲ್ಲಿ ಅನೇಕ ಹಿಟ್ ಸಿನಿಮಾ ನೀಡಿದ್ದ ನಟಿ ಶ್ರೀದೇವಿ ಅವರು ತಮ್ಮ ಅಭಿನಯದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಹಿಂದಿ , ತಮಿಳು, ತೆಲುಗು, ಕನ್ನಡ ಚಿತ್ರದಲ್ಲಿ ಅಭಿನಯಿಸುವ ಮೂಲಕ 80ರ ದಶಕದಲ್ಲಿಯೇ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ ಎಂದು ಖ್ಯಾತಿ ಪಡೆದಿದ್ದರು. ಇವರ ಅದ್ಭುತ ಅಭಿನಯಕ್ಕೆ ಇವರನ್ನು ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲಾಗಿತ್ತು. ಇಂದು ನಟಿ ಶ್ರೀದೇವಿ ಅವರ ಜನ್ಮದಿನವಾಗಿದ್ದು,ಪತಿ ಬೋನಿ ಕಪೂರ್ ಅವರು ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು ಸದ್ಯ ಅವರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.



ನಟಿ ಶ್ರೀದೇವಿ ಅವರು 1997ರಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾಗಿದ್ದು ಅವರಿಗೆ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಹೆಸರಿನ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇಂದು ನಟಿ ಶ್ರೀ ದೇವಿ ಅವರ ಜನ್ಮ ದಿನವಾಗಿದ್ದು ಅವರ ಹಳೆ ಫೋಟೊ ಮತ್ತೆ ಮುನ್ನಲೆಗೆ ಬರುತ್ತಿದೆ. ವೈರಲ್ ಆದ ಒಂದು ಫೋಟೊದಲ್ಲಿ ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಹಳೆ ಫೋಟೊ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ಫೋಟೊ 1984ರ ತೆಗೆದದ್ದಾಗಿದ್ದು, ಆಗ ಅವರಿಬ್ಬರ ನಡುವೆ ಗೆಳೆತನದ ಸಂಬಂಧ ಮಾತ್ರವೇ ಇತ್ತು ಎನ್ನಲಾಗುತ್ತಿದೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಶ್ರೀದೇವಿ ಅವರು ಟ್ರೆಡಿಶನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 2018 ರಲ್ಲಿ ದುಬೈನಲ್ಲಿ ಮದುವೆ ಕಾರ್ಯಕ್ರಮ ಒಂದಕ್ಕೆ ಹಾಜರಾಗಿದ್ದ ಸಂದರ್ಭದಲ್ಲಿ ತೆಗೆಸಿದ ಫೋಟೊ ಇದಾಗಿದೆ. ಇವರ ಜೊತೆಗೆ ಪತಿ ಬೋನಿ ಕಪೂರ್, ಅವರ ಕಿರಿಯ ಮಗಳು ಖುಷಿ ಮತ್ತು ಇತರ ಸಂಬಂಧಿಕರು ಕೂಡ ಜೊತೆಗಿರುವುದನ್ನು ಕಾಣಬಹುದು. ಈ ಫೋಟೊ ನಟಿ ಶ್ರೀದೇವಿ ನಿಧನರಾಗುವ ಕೆಲವೇ ಗಂಟೆಗಳ ಮೊದಲು ಸೆರೆಹಿಡಿದ ಕೊನೆಯ ಫೋಟೋ ಎಂದು ಕೂಡ ಹೇಳಲಾಗುತ್ತಿದೆ.

ನಟಿ ಶ್ರೀದೇವಿ ಮತ್ತು ಅವರ ಪತಿ ಬೋನಿ ಕಪೂರ್ ಅವರು ಹಾಲಿ ಡೇ ಟ್ರಿಪ್ ಎಂಜಾಯ್ ಮಾಡು ತ್ತಿರುವ ದೃಶ್ಯವನ್ನು ಈ ಫೋಟೊದಲ್ಲಿ ನಾವು ಕಾಣಬಹುದು. ಇವರಿಬ್ಬರು ವೆಸ್ಟರ್ನ್ ಔಟ್ ಫಿಟ್ ನಲ್ಲಿ ರಜೆಯ ಕ್ಷಣವನ್ನು ಬಹಳ ಮೋಜಿನಿಂದ ಕಳೆದಿದ್ದಾರೆ ಎಂಬುದಕ್ಕೆ ಈ ಫೋಟೊ ಸಾಕ್ಷಿಯಂತಿದೆ ಎನ್ನಬಹುದು.

ಬೋನಿ ಕಪೂರ್ ಅವರು ಹಂಚಿಕೊಂಡಿದ್ದ ಇನ್ನೊಂದು ಫೋಟೊದಲ್ಲಿ ನಟಿ ಶ್ರೀದೇವಿ ಅವರು ಯಂಗ್ ಲುಕ್ನಿಂದ ಕಂಗೊಳಿಸಿದ್ದಾರೆ. 1990 ರಲ್ಲಿ ಚೆನ್ನೈನಲ್ಲಿ ನಟಿ ಶ್ರೀದೇವಿ ಅವರ ಹುಟ್ಟು ಹಬ್ಬದ ಪಾರ್ಟಿ ಆಯೋಜಿಸಿದ್ದು ಅದಕ್ಕೆ ನಾನು ಅವರ 26ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದೆ. ಆದರೆ ಅದು ಅವರ 27ನೇ ಹುಟ್ಟುಹಬ್ಬವಾಗಿತ್ತು. ನಿಮಗೆ ವಯಸ್ಸು ಕಡಿಮೆ ಆಗುತ್ತಿದೆ ಎಂದು ಫೀಲ್ ಆಗಲಿ ಅಂತಾ ಹೇಳಿದ್ದೆ. ಅದರ ಸವಿನೆನಪಿನ ಫೋಟೊ ಇದು ಎಂದು ಕ್ಯಾಪ್ಶನ್ ಕೂಡ ಹಾಕಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಶ್ರೀದೇವಿ ಅವರು ತಮ್ಮ ತಾಯಿ ರಾಜೇಶ್ವರಿ ಯಂಗೇರ್ ಅವರೊಂದಿಗೆ ಅವಿಸ್ಮರಣೀಯ ಕ್ಷಣ ಕಳೆದಿರುವುದನ್ನು ಕಾಣಬಹುದು. ಒಂದು ಸಿನಿಮಾದ ಸೆಟ್ನಲ್ಲಿ ಇರುವ ಅಪರೂಪದ ಫೋಟೊ ಇದಾಗಿದೆ. ಇದರೊಂದಿಗೆ ಶ್ರೀದೇವಿ ಮತ್ತು ಜಾನ್ವಿ ಕಪೂರ್ ಅವರೊಂದಿಗೆ ಇರುವ ಫೋಟೊ, ಶ್ರೀದೇವಿ ಮತ್ತು ಬೋನಿ ವೆನಿಸ್ನಲ್ಲಿ ಗೊಂಡೊಲಾ ಪ್ರವಾಸಕ್ಕೆ ತೆರಳಿದ್ದ ಫೋಟೊ ಕೂಡ ಹೈಲೈಟ್ ಆಗಿದೆ.