Daily Horoscope: ಪೂರ್ವಾಷಾಢ ನಕ್ಷತ್ರದಿಂದ ಈ ರಾಶಿಯವರಿಗೆ ಇಂದು ಅದೃಷ್ಟದ ಬಾಗಿಲು ತೆರೆಯಲಿದೆ
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿ ಪೂರ್ವಾಷಡ ನಕ್ಷತ್ರದ ಈ ದಿನ (ಸೆಪ್ಟೆಂಬರ್ 3) ಪ್ರತಿ ರಾಶಿಯ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Daily Horoscope -

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಪೂರ್ವಾಷಾಡ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ (Daily Horoscope) ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಪೂರ್ವಾಷಾಡ ನಕ್ಷತ್ರ ಇದ್ದು, ಇದರ ಅಧಿಪತಿ ಶುಕ್ರ. ಮೇಷ ರಾಶಿಯವರಿಗೆ ಇಂದು ಬೆಳಗ್ಗೆಯಿಂದ ಮಧ್ಯಾಹ್ನವರೆಗೂ ಸ್ವಲ್ಪ ಕಷ್ಟವಾಗಲಿದೆ. ಮಧ್ಯಾಹ್ನದ ಬಳಿಕ ಅದೃಷ್ಟದ ಬಾಗಿಲು ತೆರೆಯಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಆದರೆ ಇಂದು ಹಿರಿಯರ ಆಶೀರ್ವಾದದೊಂದಿಗೆ ನೀವು ವಿನಯ ಪೂರ್ವಕವಾಗಿ ಎಲ್ಲರ ಜತೆಯೂ ವರ್ತಿಸಬೇಕಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಸ್ವಲ್ಪ ಕ್ಷೇಷ ಇರುವ ದಿನವಾಗಲಿದೆ. ಮಧ್ಯಾಹ್ನ ಬಳಿಕ ಅದೃಷ್ಟ ಒಲಿಯಲಿದೆ. ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಕಾಣುವ ಮೂಲಕ ಶುಭ ಫಲಗಳನ್ನು ಕಾಣಲಿದ್ದೀರಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಮಧ್ಯಾಹ್ನವರೆಗೂ ಅನುಕೂಲದ ದಿನವಾಗಲಿದೆ. ಎಲ್ಲರ ಜತೆ ಸೌಹಾರ್ದ ಉಂಟಾಗಲಿದೆ. ಮಧ್ಯಾಹ್ನ ಬಳಿಕ ಸ್ವಲ್ಪ ಕಷ್ಟ ಎದುರಾಗಲಿದೆ. ನಿಮ್ಮ ಪ್ರೀತಿ ಪಾತ್ರರಿಂದಲೇ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.
ಕಟಕ ರಾಶಿ: ಕಟಕ ರಾಶಿಯವರು ಇಂದು ಮಧ್ಯಾಹ್ನವರೆಗೂ ಸಾಮಾಜಿಕ ವ್ಯವಹಾರಗಳಿಗೆ ಗಮನ ನೀಡುತ್ತೀರಿ. ಮಧ್ಯಾಹ್ನ ಬಳಿಕ ನೀವು ವೈಯಕ್ತಿಕ ಜೀವನದ ವಿಚಾರದಲ್ಲಿ ನೆಮ್ಮದಿ ಕಾಣಲಿದ್ದೀರಿ. ಈ ದಿನ ಕಟಕ ರಾಶಿಯವರಿಗೆ ಉತ್ತಮ ದಿನವಾಗಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ವ್ಯವಹಾರ, ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಗಳು ಇರುತ್ತವೆ. ಮಧ್ಯಾಹ್ನ ಬಳಿಕ ಮನಸ್ಸಿನಲ್ಲಿ ಒಂದು ಸಣ್ಣ ಬದಲಾವಣೆಯಾಗಲಿದೆ. ಅತ್ಮವಿಶ್ವಾಸದೊಂದಿಗೆ ಸಾಮಾಜಿಕ ವ್ಯವಹಾರದಲ್ಲಿ ಮುನ್ನಡೆ ಸಾಧಿಸಲಿದ್ದೀರಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಆಸ್ತಿ- ಪಾಸ್ತಿ ವಿಚಾರ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ ಇಲ್ಲ ಎನ್ನುವ ಯೋಚನೆಗಳು ಕಾಡಬಹುದು. ಮಧ್ಯಾಹ್ನ ಬಳಿಕ ತಾನು ಇದೆಲ್ಲವನ್ನು ಗೆಲ್ಲಬಲ್ಲೆ ಎನ್ನುವ ಆತ್ಮವಿಶ್ವಾಸ ದೊಂದಿಗೆ ಮುಂದುವರಿಯುತ್ತೀರಿ. ಮುಂದಿನ ದಿನಗಳಲ್ಲಿ ನಿಮಗೆ ಉತ್ತಮ ಫಲಗಳು ಪ್ರಾಪ್ತಿಯಾಗಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ಎಲ್ಲರ ಸಹಕಾರ, ನೆಮ್ಮದಿ ಪ್ರಾಪ್ತಿ ಯಾಗುತ್ತದೆ. ಮಧ್ಯಾಹ್ನ ಬಳಿಕ ಏನೋ ಒಂದು ತಿರುವು ಉಂಟಾಗಲಿದೆ. ಸ್ವಲ್ಪ ಗೊಂದಲದ ಯೋಚನೆಗಳು ನಿಮಗೆ ಕಾಡಬಹುದು. ಧ್ಯಾನಧಿಗಳನ್ನು ಮಾಡುವ ಮೂಲಕ ಇದಕ್ಕೆಲ್ಲ ಪರಿಹಾರ ಪಡೆದುಕೊಳ್ಳಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ಸಂಸಾರದ ವಿಚಾರದಲ್ಲಿ ನಾನಾ ಸಮಸ್ಯೆಗಳು ಉಂಟಾಗಲಿದೆ. ಹಣ ವ್ಯವಹಾರದ ಬಗ್ಗೆ ಸ್ವಲ್ಪ ತಲೆ ಕೆಡೆಸಿಕೊಂಡು ಇರುತ್ತೀರಿ. ಮಧ್ಯಾಹ್ನ ಬಳಿಕ ಆತ್ಮವಿಶ್ವಾಸದಿಂದ ಎಲ್ಲವನ್ನು ನಿಭಾಯಿಸಿ ಪರಿಹಾರ ಪಡೆದುಕೊಳ್ಳುತ್ತೀರಿ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ಬಹಳ ಉತ್ತಮ ದಿನವಾಗಲಿದೆ. ಎಲ್ಲರೂ ನೀವು ಹೇಳಿದ ಮಾತನ್ನು ಕೇಳುತ್ತಾರೆ. ಆದರೆ ಮಧ್ಯಾಹ್ನ ಬಳಿಕ ಕುಟುಂಬ, ಮನೆಯಲ್ಲಿ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಕಾರ್ಯಕ್ಷೇತ್ರ ಮಾತ್ರವಲ್ಲದೆ ಮನೆಯವರ ಬಗ್ಗೆಯೂ ಆದ್ಯತೆ ನೀಡಬೇಕಾಗುತ್ತದೆ.
ಇದನ್ನು ಓದಿ:Daily Horoscope: ಈ ದಿನದ ಜೇಷ್ಠ ನಕ್ಷತ್ರದಿಂದ ಯಾವ ರಾಶಿಗೆಲ್ಲ ಲಾಭ?
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ಯೋಚನೆಗಳು ಕಾಡುತ್ತಿರುತ್ತವೆ. ಯಾವ ಕೆಲಸದಲ್ಲೂ ಜಯ ಪ್ರಾಪ್ತಿಯಾಗುವುದಿಲ್ಲ ಎನ್ನುವ ಭಾವನೆ ಕಾಡುತ್ತಿರುತ್ತದೆ. ಆದರೆ ಮಧ್ಯಾಹ್ನ ಬಳಿಕ ಎಲ್ಲವೂ ಒಳ್ಳೆಯದಾಗಲಿದೆ. ನಿಮ್ಮ ಕೆಲವೊಂದಿಷ್ಟು ಸಮಸ್ಯೆಗಳಿಗೆ ಪರಿಹಾರ ಕೂಡ ಸಿಗಲಿದೆ.
ಕುಂಭ ರಾಶಿ: ಕುಂಭ ರಾಶಿಯವರಿಗೆ ಮಧ್ಯಾಹ್ನವರೆಗೂ ಸಂತೋಷದ ದಿನವಾಗಲಿದೆ. ಮಧ್ಯಾಹ್ನ ಬಳಿಕ ಮಿತ್ರರಿಂದ ದೂರ ಆಗಬಹುದು. ಮಿತ್ರರ ಜತೆಗೆ ಒಡಕು ಉಂಟಾಗಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ಕಾರ್ಯ ಕ್ಷೇತ್ರದಲ್ಲಿ ಸ್ವಲ್ಪ ಜವಾಬ್ದಾರಿ ಹೆಚ್ಚಾಗಿರುತ್ತದೆ. ಮಧ್ಯಾಹ್ನ ಬಳಿಕ ಕೆಲವು ಲಾಭದಾಯಕ ಕೆಲಸಗಳು ಆಗಲಿದ್ದು, ಧನಾಗಮನ ಕೂಡ ಆಗಲಿದೆ. ಇಂದು ಭಗವಂತನ ಆರಾಧನೆ, ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು. ಎಲ್ಲ ರಾಶಿಯವರು ನಿತ್ಯ ಶ್ಲೋಕ, ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯಲಿದ್ದೀರಿ.