ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಪೂರ್ವಭಾದ್ರಾ ನಕ್ಷತ್ರದ ಈ ದಿನ ಯಾವ ರಾಶಿಗೆಲ್ಲ ಒಳಿತಾಗಲಿದೆ?

ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ಪ್ರತಿಪಾ ತಿಥಿ ಪೂರ್ವಭಾದ್ರಾ ನಕ್ಷತ್ರದ ಸೆಪ್ಟೆಂಬರ್‌ 8ನೇ ತಾರೀಖಿನ ‌ಈ ದಿನದ ಪ್ರತಿ ರಾಶಿಯ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಈ ದಿನ ಯಾವ ರಾಶಿಗೆ ಒಳಿತಾಗಲಿದೆ?

Horoscope -

Profile Pushpa Kumari Sep 8, 2025 6:00 AM

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ಪೂರ್ವಭಾದ್ರಾ ನಕ್ಷತ್ರದ ಇಂದು (ಸೆಪ್ಟೆಂಬರ್‌ 8) ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನ ಆಗಿದೆ. ಮಧ್ಯಾಹ್ನ ಬಳಿಕ ನಿಮಗೆ ಸ್ವಲ್ಪ ತೊಂದರೆ ಎದುರಾಗಲಿದ್ದು, ಮನಸ್ಸಿಗೆ ನೋವಾಗುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಮುಖ್ಯ ನಿರ್ಧಾರಗಳನ್ನು ಇಂದು ಮಾಡಬೇಡಿ. ಅದೇ ರೀತಿ ಮಿತೃತ್ವಗಳಲ್ಲಿ ಕೂಡ ಒಡಕು ಉಂಟಾಗಲಿದೆ.

ವೃಷಭ ರಾಶಿ: ವೃಷಭ ರಾಶಿಯಲ್ಲಿರುವವರಿಗೆ‌ ಮಧ್ಯಾಹ್ನವರೆಗೂ ಕಾರ್ಯಕ್ಷೇತ್ರದಲ್ಲಿ ಜವಾ ಬ್ದಾರಿಗಳು ಹೆಚ್ಚು ಇರುತ್ತವೆ. ಆದಾದ ಬಳಿಕ ಗುಂಪು ಕೆಲಸಗಳಲ್ಲಿ ನಿಮಗೆ ಸಂತೋಷ ಪ್ರಾಪ್ತಿ ಯಾಗಲಿದೆ. ಅದೇ ರೀತಿ ಧನಾಗಮನವಾಗುವ ಸಾಧ್ಯತೆ ಕೂಡ ಇದೆ.

ಮಿಥುನ ರಾಶಿ: ಮಿಥುನ ರಾಶಿಯವರಿಗೂ ಮಧ್ಯಾಹ್ನವರೆಗೂ ನಿಮ್ಮ ಅದೃಷ್ಟ ಅಷ್ಟೊಂದು ಚೆನ್ನಾಗಿ ನಡೆಯುವುದಿಲ್ಲ‌.‌ ಎಲ್ಲ ಕೆಲಸದಲ್ಲೂ ಪ್ರತಿಫಲ ಸಿಗುವುದಿಲ್ಲ ಎನ್ನುವ ಬೇಸರ ಇರಬಹುದು. ಮಧ್ಯಾಹ್ನ ಬಳಿಕ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಮತ್ತು ನಿಮ್ಮ ಬಾಸ್‌ನಿಂದ ಹೊಗಳಿಕೆ ಕೇಳಿ ಬರಹುದು.‌

ಕಟಕ ರಾಶಿ: ಕಟಕ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನಾನಾ ರೀತಿಯ ಕ್ಷೇಷಗಳು ಬರಬಹುದು. ಮಧ್ಯಾಹ್ನ ಬಳಿಕ ಎಲ್ಲದರಲ್ಲೂ ಅದೃಷ್ಟ ಪ್ರಾಪ್ತಿಯಾಗಲಿದೆ. ಇದಕ್ಕೆ ಹಿರಿಯರ ಆಶೀರ್ವಾದ ಅತ್ಯಗತ್ಯ. ಆದ್ದರಿಂದ ಗುರು ಹಿರಿಯರ, ಭಗವಂತನ, ಆಶೀರ್ವಾದ ಪಡೆದುಕೊಳ್ಳಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ಬಹಳ ಉತ್ತಮ ಸಮಯ. ಮಧ್ಯಾಹ್ನವರೆಗೆ ಎಲ್ಲ ಕೆಲಸಗಳು ಅಂದುಕೊಂಡಂತೆ ನಡೆಯಬಹುದು. ಆದರೆ ಮಧ್ಯಾಹ್ನ ಬಳಿಕ ನಿಮ್ಮ ಪ್ರೀತಿ ಪಾತ್ರರ ಜತೆ ಸೌಹಾರ್ದ ಸಂಬಂಧ ಪ್ರಾಪ್ತಿಯಾಗುವುದಿಲ್ಲ. ಇದರಿಂದ ನಿಮಗೆ ಬೇಸರ ಉಂಟಾಗ ಬಹುದು. ಹಾಗಾಗಿ ಧ್ಯಾನ ಮಾಡುವ ಮೂಲಕ ಸಮಯವನ್ನು ಕಳೆಯಿರಿ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು, ಆತ್ಮವಿಶ್ವಾಸ ಹೆಚ್ಚಾಗಿ ಇರಲಿದೆ. ಮಧ್ಯಾಹ್ನ ಬಳಿಕ ನಿಮ್ಮ ಪ್ರೀತಿ ಪಾತ್ರರ ಜತೆ ಉತ್ತಮ ಸಮಯವನ್ನು ಕಳೆಯುತ್ತೀರಿ.

ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಕಿರಿಕಿರಿ ಉಂಟಾಗ ಬಹುದು. ದಾಂಪತ್ಯ, ಮಕ್ಕಳು, ಪ್ರೇಮ, ಪ್ರೀತಿ ವಿಚಾರದಲ್ಲಿ ಬಹಳಷ್ಟು ಕಿರಿಕಿರಿ ಇರುತ್ತದೆ. ಮಧ್ಯಾಹ್ನ ಬಳಿಕ ಮನಸ್ಸಿನಲ್ಲಿ ಬದಲಾವಣೆ ಉಂಟಾಗಲಿದೆ. ಸಾಮಾಜಿಕ ವ್ಯವಹಾರಗಳಲ್ಲಿ ಉತ್ತಮ ದಿನ ಕಳೆಯಲಿದ್ದು ಯಶಸ್ಸು ಕೂಡ ಸಿಗಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಯೋಚನೆಗಳು ಕಾಡುತ್ತಿರುತ್ತದೆ. ಸಂಸಾರದ ವಿಚಾರಗಳಲ್ಲಿ ಬಹಳಷ್ಟು ತೊಂದರೆಗಳು ಕಾಡುತ್ತದೆ. ಮಧ್ಯಾಹ್ನ ಬಳಿಕ ಕ್ರಿಯಾಶೀಲತೆಯಿಂದ ಹೆಚ್ಚು ಯಶಸ್ಸು ಅನ್ನು ಕಾಣಲಿದ್ದೀರಿ.

ಇದನ್ನು ಓದಿ:Daily Horoscope: ಈ ದಿನದ ಚಂದ್ರಗ್ರಹಣವು ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ?

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ಸಮಯ ತುಂಬಾ ಉತ್ತಮವಾಗಿರುತ್ತದೆ. ಎಲ್ಲದರಲ್ಲೂ ಆತ್ಮವಿಶ್ವಾಸ, ಜಯ ಪ್ರಾಪ್ತಿಯಾಗುತ್ತದೆ. ಮಧ್ಯಾಹ್ನ ಬಳಿಕ ಸಮಯ ನಿಮಗೆ ಅನುಕೂಲವಾಗಿ ಇರುವುದಿಲ್ಲ. ಮಧ್ಯಾಹ್ನ ಬಳಿಕ ಮುಖ್ಯವಾದ ನಿರ್ಧಾರಗಳನ್ನು ಇಟ್ಟು ಕೊಳ್ಳಬೇಡಿ.

ಮಕರ ರಾಶಿ: ಮಕರ ರಾಶಿಯವರು ಸಂಸಾರದ ವಿಚಾರ, ಮುಂದಿನ ಆರ್ಥಿಕ ಸುಭದ್ರತೆಯ ಬಗ್ಗೆ ಯೋಚನೆ ಮಾಡುತ್ತೀರಿ. ಮಧ್ಯಾಹ್ನ ಬಳಿಕ ಆತ್ಮವಿಶ್ವಾಸ ಹೆಚ್ಚಾಗಿ ಸಾಮಾಜಿಕ ಕೆಲಸಗಳಲ್ಲೂ ಯಶಸ್ಸು ಕಾಣುತ್ತೀರಿ.

ಕುಂಭ ರಾಶಿ: ಮೀನ ರಾಶಿಯವರಿಗೆ ಚಂದ್ರ ನಿಮ್ಮ ರಾಶಿಯಲ್ಲಿ ಇರುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಮಧ್ಯಾಹ್ನ ಬಳಿಕ ಕುಟುಂಬದ ಜತೆಗೂ ಉತ್ತಮ ಸಮಯ ಕಳೆಯುತ್ತೀರಿ. ಉತ್ತಮ ದಿನ ನಿಮ್ಮದಾಗಲಿದೆ.

ಮೀನರಾಶಿ: ಮೀನರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಕ್ಷೇಷ ಇರುತ್ತದೆ‌. ಮಧ್ಯಾಹ್ನ ಬಳಿಕ ಮುಂದಿನ ಕೆಲಸಗಳಿಗೆ ಮಾರ್ಗದರ್ಶನ ಸಿಗಲಿದ್ದು, ಉತ್ತಮ ಸಲಹೆ ನಿಮಗೆ ಸಿಗಲಿದೆ. ದಿನ ನಿತ್ಯ ಭಗವಂತನ ಆರಾಧನೆ, ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು. ಎಲ್ಲ ರಾಶಿಯವರು ನಿತ್ಯ ಶ್ಲೋಕ, ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯಲಿದ್ದೀರಿ.