Daily Horoscope: ಉತ್ತರಾಭಾದ್ರಾ ನಕ್ಷತ್ರದ ಈ ದಿನ ಈ ರಾಶಿಗೆ ಭಾರೀ ಅದೃಷ್ಟ!
ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ದ್ವಿತೀಯ ತಿಥಿ ಉತ್ತರ ಭಾದ್ರಾ ನಕ್ಷತ್ರದ ಸೆಪ್ಟೆಂಬರ್ 9ನೇ ತಾರೀಖಿನ ಮಂಗಳವಾರದ ಈ ದಿನದ ಭವಿ ಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

-

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾ ಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ಉತ್ತರಾಭಾದ್ರಾ ನಕ್ಷತ್ರದ ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟಕರವಾದ ದಿನ ಆಗಿದ್ದು ಅಷ್ಟೇನು ಉತ್ತಮ ವಾದ ದಿನ ಅಲ್ಲ.. ಮನಸ್ಸಿಗೆ ಇಂದು ಕ್ಷೇಷ ಇರಲಿದ್ದು ಮುಖ್ಯವಾದ ನಿರ್ಧಾರಗಳನ್ನು ಇಂದು ಮಾಡಲು ಹೋಗಬೇಡಿ.
ವೃಷಭ ರಾಶಿ: ವೃಷಭ ರಾಶಿಯಲ್ಲಿ ಇರುವವರಿಗೆ ಇಂದು ಅತ್ಯುತ್ತಮವಾದ ದಿನ ಆಗಲಿದೆ. ಗುಂಪು ಕೆಲಸ, ಮೀಟಿಂಗ್ ಇತ್ಯಾದಿಗಳಲ್ಲಿ ಯಶಸ್ಸು ಗಳಿಸುತ್ತೀರಿ. ಧನ ಆಗಮನ ಕೂಡ ಆಗಲಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೂ ಇಂದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಕಾಣುತ್ತೀರಿ. ನೀವು ಮಾಡಿದ ಕೆಲಸ ಕಾರ್ಯಗಳಿಗೆ ಉತ್ತಮ ಹೊಗಳಿಕೆ ಪ್ರಾಪ್ತಿಯಾಗಲಿದ್ದು ನೀವು ಅಂದು ಕೊಂಡ ಕೆಲಸ ಕಾರ್ಯಗಳು ಎಲ್ಲವೂ ಇಂದು ನೆರವೇರಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಭಾಗ್ಯೋದಯವಾದ ದಿನ ವಾಗಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದ್ದು ಎಲ್ಲ ಕೆಲಸ ಕಾರ್ಯಗಳು ನೆರವೇರಲಿದೆ..ಆದರೆ ಇಂದು ನೀವು ಮನೆಯಲ್ಲಿ ಹಿರಿಯರ- ದೊಡ್ಡವರ ಆಶೀರ್ವಾದ ಪಡೆದುಕೊಳ್ಳುವುದನ್ನು ಮರೆಯಬೇಡಿ. ಇದರಿಂದ ಎಲ್ಲ ಫಲಗಳು ನಿಮಗೆ ಪ್ರಾಪ್ತಿಯಾಗಲಿದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಕಷ್ಟಕರವಾದ ದಿನ ಆಗಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮುಖ್ಯವಾದ ಕೆಲಸಗಳಲ್ಲಿ ಯಾವುದೇ ನಿರ್ಧಾರ ಬೇಡ.. ಯಾವುದೇ ಮೀಟಿಂಗ್, ಶುಭ ಕಾರ್ಯ ಇತ್ಯಾದಿಯನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಇಂದು ಉತ್ತಮವಾದ ದಿನ ಆಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಪ್ರೀತಿ ಪಾತ್ರರಿಂದ ಉತ್ತಮ ಸಹಕಾರ ಪ್ರಾಪ್ತಿಯಾಗಲಿದೆ. ಉತ್ತಮವಾದ ದಿನ ನಿಮ್ಮದು ಆಗಲಿದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಉತ್ತಮವಾದ ದಿನ ಆಗಲಿದೆ. ಅದೇ ರೀತಿ ನಿಮಗೆ ಆತ್ಮವಿಶ್ವಾಸ ಚೆನ್ನಾಗಿ ಇರಲಿದ್ದು ಹಿಂದಿನ ಮೂರು ದಿನಗಳ ವರೆಗೆ ನಿಮಗೆ ಬಹಳಷ್ಟು ತೊಂದರೆ ಆಗಿತ್ತು. ಆದರೆ ಇದಕ್ಕೆಲ್ಲ ಇಂದು ಪರಿಹಾರ ಸಿಗಲಿದೆ. ಆತ್ಮವಿಶ್ವಾಸ ಚೆನ್ನಾಗಿ ಇರಲಿದ್ದು ಸಾಮಾಜಿಕ ಕೆಲಸ ಕಾರ್ಯಗಳಲ್ಲೂ ಜಯವನ್ನು ಕಾಣುತ್ತೀರಿ.
ಇದನ್ನು ಓದಿ:Daily Horoscope: ಶ್ರವಣ ನಕ್ಷತ್ರದ ಅಧಿಪತಿ ಚಂದ್ರನಿಂದ ಯಾವ ರಾಶಿಗೆಲ್ಲ ಇಂದು ಒಳಿತಾಗಲಿದೆ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಇಂದು ನಿಮ್ಮ ಬುದ್ದಿ ಶಕ್ತಿಯಿಂದ ಜಯವನ್ನು ಕಾಣುತ್ತೀರಿ. ಆದರೆ ಬಿಸಿನೆಸ್ ವ್ಯವಹಾರದಲ್ಲಿ ನಷ್ಟ ಆಗಲಿದೆ. ಹಣ ಖರ್ಚು ಆಗುವ ಸಾಧ್ಯತೆ ಹೆಚ್ಚು ಇರುತ್ತದೆ.ಈ ಬಗ್ಗೆ ಗಮನ ವಹಿಸಿ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಆಸ್ತಿ ಪಾಸ್ತಿ, ರಿಯಲ್ ಎಸ್ಟೇಟ್ ವ್ಯವಹಾರ, ಇತ್ಯಾದಿಯಲ್ಲಿ ಇರುವವರಿಗೆ ಸ್ವಲ್ಪ ಕಿರಿ ಕಿರಿ ಹೆಚ್ಚಾಗಲಿದೆ. ಕೋರ್ಟ್, ವ್ಯವಹಾರ ಇತ್ಯಾದಿ ವಿಚಾರಗಳ ಬಗ್ಗೆ ಜಾಗೃತೆಯಾಗಿ ವ್ಯವಹಾರ ನಡೆಸಬೇಕು.
ಮಕರ ರಾಶಿ: ಮಕರ ರಾಶಿ ಅವರಿಗೆ ಇಂದು ಅತ್ಯುತ್ತಮ ವಾದ ದಿನ ಆಗಲಿದೆ. ಸೋಷಿಯಲ್ ಮೀಡಿಯಾ, ಮಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮವಾದ ದಿನ. ನಿಮ್ಮ ಮುಖ್ಯವಾದ ಕೆಲಸಗಳಲ್ಲಿ ಇಂದು ಜಯ ಕಂಡುಕಂಡುಬರಲಿದೆ. ನಿಮ್ಮ ಪ್ರಯತ್ನಕ್ಕೆ ಪ್ರತಿಫಲ ಕೂಡ ಸಿಗಲಿದೆ
ಕುಂಭ ರಾಶಿ: ಮೀನ ರಾಶಿ ಅವರು ಸಂಸಾರದ ವಿಚಾರದಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ನಿಮ್ಮ ಕುಟುಂಬ ಮನೆಯವರ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ
ಮೀನರಾಶಿ: ಮೀನರಾಶಿಯವರಿಗೆ ಉತ್ತಮವಾದ ದಿನ ಆಗಲಿದೆ. ಹಿಂದಿನ ಎರಡು ಮೂರು ದಿನ ಗಳಲ್ಲಿ ಇದ್ದ ಮನಸ್ಸಿನ ಕ್ಷೇಷ ಎಲ್ಲವೂ ಮಯವಾಗಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗ ಲಿದೆ. ನಿಮ್ಮ ಖುಷಿಯನ್ನು ಇತರರೊಂದಿಗೂ ಹಂಚಿ ಕೊಳ್ಳುತ್ತೀರಿ..ದಿನ ನಿತ್ಯ ಭಗವಂತನ ಆರಾಧನೆ ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು. ಎಲ್ಲಾ ರಾಶಿಯವರು ನಿತ್ಯ ಶ್ಲೋಕ, ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯಲಿದ್ದೀರಿ.