Daily Horoscope: ರೇವತಿ ನಕ್ಷತ್ರದ ಈ ದಿನ ಈ ರಾಶಿಯವರಿಗೆ ಒಳಿತಾಗಲಿದೆ?
ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ತೃತೀಯ ತಿಥಿ ರೇವತಿ ನಕ್ಷತ್ರದ ಸೆಪ್ಟೆಂಬರ್ 10ನೇ ತಾರೀಖಿನ ಬುಧವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

Horoscope -

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ರೇವತಿ ನಕ್ಷತ್ರದ ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟಕರವಾದ ದಿನ ಆಗಿದ್ದು ಯಾವುದೇ ಮುಖ್ಯ ನಿರ್ಧಾರಗಳು ಇಂದು ಬೇಡ. ಅದೇ ರೀತಿ ಮಿತೃತ್ವದಲ್ಲಿ ಒಡಕು, ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಮುಖ್ಯವಾದ ಮೀಟಿಂಗ್ ,ಕೆಲಸ ಯಾವುದೇ ಕಾರ್ಯದಲ್ಲಿ ತೊಡಗಿ ಕೊಳ್ಳುವುದು ಅಷ್ಟು ಉತ್ತಮವಲ್ಲ.
ವೃಷಭ ರಾಶಿ: ವೃಷಭ ರಾಶಿಯಲ್ಲಿ ಇರುವವರಿಗೆ ಇಂದು ಅತ್ಯುತ್ತಮವಾದ ದಿನ ಆಗಲಿದೆ. ಶತ್ರುಗಳಿಂದ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಗುಂಪು ಕೆಲಸಗಳಲ್ಲಿ ಧನ ಆಗಮನದ ಸೂಚನೆ ಇರುತ್ತದೆ. ಬಿಸೆನೆಸ್ ವ್ಯವಹಾರದಲ್ಲಿ ಇರುವವರಿಗೂ ಉತ್ತಮವಾದ ದಿನ ಆಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೂ ಇಂದು ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚು ಇರುತ್ತದೆ. ಆದರೂ ಕೆಲಸ ಕಾರ್ಯದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಮನಸ್ಸಿಗೆ ನೆಮ್ಮದಿ ಇದ್ದು ಬಂಧು- ಬಾಂಧವರಿಂದ ಕೂಡ ಬಹಳಷ್ಟು ಖುಷಿಯನ್ನು ಕಾಣುತ್ತೀರಿ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಭಾಗ್ಯೋದಯವಾದ ದಿನ ವಾಗಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗಲಿದೆ. ಹಿರಿಯರ ಆಶೀರ್ವಾದ ದಿಂದ ಎಲ್ಲ ಕೆಲಸ ಕಾರ್ಯಗಳು ಸರಿ ಹೋಗುತ್ತವೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಮನಸ್ಸಿಗೆ ನಾನಾ ರೀತಿಯ ಕ್ಷೇಷಗಳು ಕಾಡುತ್ತವೆ. ನಿಮ್ಮ ರಾಶಿಯಲ್ಲಿ ಚಂದ್ರ ಬರುವುದರಿಂದ ವಿಪರೀತ ಕ್ಷೇಷ ಉಂಟಾಗಲಿದೆ. ನಿಮ್ಮ ಪ್ರೀತಿ ಪಾತ್ರರಿಂದ ಯಾವುದೇ ಪ್ರೀತಿ- ಅಕ್ಕರೆಗಳು ಪ್ರಾಪ್ತಿ ಯಾಗುವುದಿಲ್ಲ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಇಂದು ಉತ್ತಮವಾದ ದಿನ ಆಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಪ್ರೀತಿ ಪಾತ್ರರಿಂದ ಎಲ್ಲವೂ ಸಿಗಲಿದೆ. ದಾಂಪತ್ಯ ಜೀವನದಲ್ಲೂ ಕೂಡ ಸುಖವನ್ನು ಕಾಣುತ್ತೀರಿ. ಪಾರ್ಟನ್ನರ್ ಶೀಪ್,ಕೆಲಸ ವ್ಯವಹಾರ ಎಲ್ಲ ಕಡೆಯೂ ಬಹಳಷ್ಟು ಅಕ್ಕರೆ ನಿಮಗೆ ಪ್ರಾಪ್ತಿ ಯಾಗುತ್ತದೆ. ಉತ್ತಮ ಆತ್ಮವಿಶ್ವಾಸ ಕೂಡ ನಿಮಗೆ ಇರಲಿದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಕಷ್ಟಕರವಾದ ದಿನ ಆಗಲಿದೆ. ಆದರೂ ಕೂಡ ನಿಮ್ಮ ಆತ್ಮವಿಶ್ವಾಸ ದಿಂದ ನೀವು ಎಲ್ಲವನ್ನು ಗೆಲ್ಲಬಹುದು. ಆದರೆ ಅತೀಯಾದ ಆತ್ಮವಿಶ್ವಾಸ ದಿಂದ ಶತ್ರುಗಳು ನಿಮ್ಮನ್ನು ಹಿಮ್ಮೆಟ್ಟಬಹುದು..
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರು ಬುದ್ದಿವಂತಿಕೆ ಯಿಂದ ಜಯವನ್ನು ಗಳಿಸುತ್ತೀರಿ. ಆದರೆ ಇಂದು ಮಾತಿನಿಂದ ನಿಮಗೆ ಗೆಲ್ಲಲು ಸಾಧ್ಯ ಆಗೋದಿಲ್ಲ.. ಹಾಗಾಗಿ ಇಂದು ಮಾತನ್ನು ಕೂಡ ಕಡಿಮೆ ಮಾಡಿಕೊಳ್ಳಿ.
ಇದನ್ನು ಓದಿ:Daily Horoscope: ಪೂರ್ವಭಾದ್ರಾ ನಕ್ಷತ್ರದ ಈ ದಿನ ಯಾವ ರಾಶಿಗೆಲ್ಲ ಒಳಿತಾಗಲಿದೆ?
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ನಾನಾ ರೀತಿಯ ಯೋಚನೆಗಳು ಇರುತ್ತವೆ. ಟ್ಯಾಕ್ಸ್, ವ್ಯವಹಾರ ಇತ್ಯಾದಿ ಗಳಲ್ಲಿ ಇರುವವರು ಜಾಗೃತೆ ವಹಿಸಬೇಕು. ಮುಖ್ಯ ವಾದ ಕೆಲಸಗಳಲ್ಲಿ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ.
ಮಕರ ರಾಶಿ: ಮಕರ ರಾಶಿ ಅವರಿಗೆ ಇಂದು ಅತ್ಯುತ್ತಮ ವಾದ ದಿನ ಆಗಲಿದೆ. ಮನಸ್ಸಿಗೆ ನೆಮ್ಮದಿ ಇರಲಿದ್ದು ವೈವಾಹಿಕ ಜೀವನದಲ್ಲೂ ಸುಖಕರವಾಗಿರುತ್ತದೆ. ಮತ್ತು ಆತ್ಮ ವಿಶ್ವಾಸ ಹೆಚ್ಚಾಗಿ ಇರಲಿದ್ದು ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರಿ
ಕುಂಭ ರಾಶಿ: ಮೀನ ರಾಶಿ ಅವರು ಸಂಸಾರದ ವಿಚಾರದಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ನಿಮ್ಮ ಕುಟುಂಬ ಆರ್ಥಿಕ ಭಧ್ರತೆಯ ಬಗ್ಗೆ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ
ಮೀನರಾಶಿ: ಮೀನರಾಶಿಯವರಿಗೆ ಉತ್ತಮವಾದ ದಿನ ಆಗಲಿದ್ದು ಶಾಂತಿಯುತವಾದ ದಿನ ಆಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಮುಂದಿನ ದಿನಗಳ ಬಗ್ಗೆ ಮಾರ್ಗ ದರ್ಶನ ಕೂಡ ಸಿಗಲಿದೆ. ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದ ಮನಸ್ಸಿನ ಕ್ಷೇಷ ಎಲ್ಲವೂ ಮಯವಾಗಲಿದೆ. ದಿನ ನಿತ್ಯ ಭಗವಂತನ ಆರಾಧನೆ ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು. ಎಲ್ಲಾ ರಾಶಿಯವರು ನಿತ್ಯ ಶ್ಲೋಕ,ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯಲಿದ್ದೀರಿ.