Daily Horoscope: ಕುಜ ಕನ್ಯಾ ರಾಶಿ ಪ್ರವೇಶ; ಇಂದು ಯಾವೆಲ್ಲ ರಾಶಿಯವರಿಗೆ ಅದೃಷ್ಟ?
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿ, ಪೂರ್ವ ಫಲ್ಗುಣಿ ನಕ್ಷತ್ರದ ಈ ದಿನ ಕುಜ ಕನ್ಯಾ ರಾಶಿ ಪ್ರವೇಶಿಸುತ್ತಿದೆ. ವಿಶೇಷ ಎಂದರೆ ಎರಡು ವರ್ಷದ ನಂತರ ಈ ರಾಶಿಯಲ್ಲಿ ಕುಜ ಗೋಚರವಾಗಿದೆ. ಹಾಗಾದರೆ ಇಂದಿನ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಏನು ಹೇಳುತ್ತಾರೆ ಎನ್ನುವುದನ್ನು ನೋಡೋಣ.

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿ, ಪೂರ್ವ ಫಲ್ಗುಣಿ ನಕ್ಷತ್ರದ ಈ ದಿನ ಕುಜ ಕನ್ಯಾ ರಾಶಿ ಪ್ರವೇಶಿಸುತ್ತಿದ್ದು, ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಮೇಷ ರಾಶಿಯವರಿಗೆ ಕುಜ ಕನ್ಯಾ ರಾಶಿ ಪ್ರವೇಶಿಸುವುದು ಅತ್ಯುತ್ತಮ ಫಲ ನೀಡಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು, ಅಂದುಕೊಂಡ ಕೆಲಸ ಕಾರ್ಯಗಳು ಸಿದ್ಧಿಯಾಗಲಿದೆ. ಸುಮಾರು ಒಂದುವರೆ ತಿಂಗಳ ಕಾಲ ಈ ಫಲ ಇರುವ ಕಾರಣ ನಿಮ್ಮ ಅಂದುಕೊಂಡ ಕೆಲಸ ಕಾರ್ಯಗಳು ಸರಿಯಾದ ಕಾಲಕ್ಕೆ ನಡೆಯಲಿದೆ. ಆರೋಗ್ಯ ವೃದ್ಧಿ, ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಇಷ್ಟಾರ್ಥ ಸಿದ್ಧಿಯಾಗಲಿದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರ ಮನಸ್ಸಿನ ನೆಮ್ಮದಿ ಹಾಳಾಗಲಿದೆ. ದಾಂಪತ್ಯದಲ್ಲಿ ವೈಮನಸ್ಸು ಮೂಡಲಿದೆ. ಪ್ರೇಮ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಹಣಕಾಸಿನ ವ್ಯವಹಾರಕ್ಕೆ ತೊಂದರೆ ಆಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಹಣಕಾಸು, ರಿಯಲ್ ಎಸ್ಟೇಟ್ ವ್ಯವಹಾರ ಇರುವವರಿಗೆ ಹಾಗೂ ತೋಟಗಾರಿಕೆ ಮಾಡುವವರಿಗೆ ಈ ದಿನ ಬಹಳ ಕಷ್ಟ ಎದುರಾಗಲಿದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಗಮನ ವಹಿಸುವುದು ಬಹಳ ಮುಖ್ಯ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಅತ್ಯುತ್ತಮವಾಗಿ ಗೋಚರವಾಗುತ್ತದೆ. ಮನಸ್ಸಿಗೆ ನೆಮ್ಮದಿ ಹಾಗೂ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಅಣ್ಣ ತಮ್ಮಂದಿರಿಂದ ಧನ ಆಗಮನವಾಗಲಿದ್ದು ಆತ್ಮವಿಶ್ವಾಸ ಕೂಡ ಪ್ರಾಪ್ತಿಯಾಗಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಷ್ಟದ ದಿನ. ನಿಮ್ಮ ಶುಕ್ರ ಸ್ಥಾನದಲ್ಲಿ ಕುಜ ಬರುವುದರಿಂದ ನಷ್ಟ ಉಂಟಾಗಲಿದೆ. ಸಂಸಾರದ ತಾಪತ್ರಯಗಳೂ ಗೋಚರವಾಗಲಿದೆ. ಹಾಗೆಯೇ ಹಣಕಾಸಿನ ತೊಂದರೆಯೂ ಉಂಟಾಗಲಿದೆ. ಇದನ್ನು ಬಹಳ ತಾಳ್ಮೆಯಿಂದ ನಿಭಾಯಿಸಬೇಕು.
ಕನ್ಯಾ ರಾಶಿ: ಈ ದಿನ ಉತ್ತಮವಾಗಲಿದ್ದು, ಮಿಶ್ರ ಫಲ ಇದ್ದರೂ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗಲಿದೆ. ಇಲ್ಲಿಯವರೆಗೆ ಇದ್ದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಲಿದೆ. ಕೆಲಸದಲ್ಲಿ ಆತ್ಮ ಅವಿಶ್ವಾಸ ಹೆಚ್ಚಾಗಿ ಸುಧಾರಣೆ ಕಾಣಲಿದೆ.
ತುಲಾ ರಾಶಿ: ಇವರಿಗೆ ಇಂದು ಅಷ್ಟು ಶುಭಕರವಾಇರುವುದಿಲ್ಲ. ಮುಖ್ಯವಾದ ಕೆಲವು ಸಂಬಂಧಗಳಲ್ಲಿ ತೊಡಕು ಉಂಟಾಗಬಹುದು. ಹಿಂದಿನ ದಿನಗಳಲ್ಲಿ ನಿಮಗೆ ಮನಸ್ಸಿಗೆ ನೆಮ್ಮದಿ ಇತ್ತು. ಈಗ ಮನಸ್ಸಿನಲ್ಲಿ ಹೆಚ್ಚಿನ ತಳಮಳ ನಿಮ್ಮನ್ನು ಕಾಡುತ್ತದೆ. ಬಿಸಿನೆಸ್ ವ್ಯವಹಾರದಲ್ಲಿ ನಿಮ್ಮ ಆತ್ಮಿಯರು ಬಿಟ್ಟು ಹೊಗುವ ಸಂದರ್ಭ ಬರಬಹುದು. ಆರೋಗ್ಯದಲ್ಲೂ ಏರು ಪೇರು ಆಗುವ ಸಂಭವ ಬರಬಹುದು.
ಇದನ್ನು ಓದಿ:Daily Horoscope: ಈ ದಿನ ಈ ರಾಶಿಯವರ ಮೇಲೆ ಕೇತುವಿನ ಪ್ರಭಾವ
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಉತ್ತಮ ಗೋಚರ. ಮನಸ್ಸಿಗೆ ನೆಮ್ಮದಿ ಇದ್ದು ಮಿತ್ರರಿಂದ ಧನಾಗಮನವಾಗಲಿದೆ. ಇಷ್ಟಾರ್ಥ ಸಿದ್ಧಿಯಾಗಲಿದ್ದು, ಒಂದೂವರೆ ತಿಂಗಳಿನಲ್ಲಿ ಬೇಕಾಗಿದ್ದು ಎಲ್ಲವೂ ಪ್ರಾಪ್ತಿಯಾಗಲಿದೆ. ಕುಜ ಇಷ್ಟಾರ್ಥ ಸಿದ್ಧಿ ಕರುಣಿಸುತ್ತಾನೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದ್ದು ಹೊಸ ಕೆಲಸ ಪ್ತಾಪ್ತಿ ಯಾಗಬಹುದು. ಇರುವ ಕೆಲಸದಲ್ಲಿ ಭಡ್ತಿಉಂಟಾಗಬಹುದು. ಪ್ರಮೋಷನ್, ಗೌರವ ಎಲ್ಲವೂ ದೊರೆಯುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಒಂದೂವರೆ ವರ್ಷಗಳಲ್ಲಿ ಕ್ಲೇಶ ಇದ್ದು ಮುಖ್ಯವಾದ ವಿಚಾರಗಳಲ್ಲಿ ಬಹಳ ನೊಂದಿದ್ದು ಈಗ ಅದೆಲ್ಲವೂ ನಿವಾರಣೆಯಾಗಲಿದೆ. ಮುಂದಿನ ಮಾರ್ಗ ನಿಮಗೆ ಉತ್ತಮವಾಗಿ ಇರುತ್ತದೆ. ಆದರೆ ಭಗವಂತನ, ದೊಡ್ಡವರ ಆಶೀರ್ವಾದ ಅಗತ್ಯವಾಗಿರುತ್ತದೆ.
ಕುಂಭ ರಾಶಿ: ಕುಂಭ ರಾಶಿಯವರಿಗೆ ಈ ದಿನ ಮನಸ್ಸಿಗೆ ಬಹಳ ಕ್ಲೇಶವಾಗುವ ದಿನವಾಗಲಿದೆ. ದಾಂಪತ್ಯ ಜೀವನದಲ್ಲಿ ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ತೊಂದರೆ ಉಂಟಾಗಲಿದೆ. ಕುಜ ಸಪ್ತಮದಲ್ಲಿರುವ ಕಾರಣ ವೈಮನಸ್ಸು ಉಂಟಾಗಲಿದೆ. ಒಂದೂವರೆ ತಿಂಗಳ ನಂತರ ಎಲ್ಲವೂ ಕೂಡ ಸರಿಯಾಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೂ ಈ ದಿನ ಸಂಕಷ್ಟ ಎದುರಾಗಲಿದೆ. ಕುಜ ಸಪ್ತಮದಲ್ಲಿರುವ ಕಾರಣ ಮುಖ್ಯವಾದ ವ್ಯಾಪಾರ ವ್ಯವಹಾರ ಎಲ್ಲವೂ ಕೂಡ ಕಷ್ಟದಲ್ಲಿ ನಡೆಯಲಿದೆ. ಸಹೋದ್ಯೋಗಿಗಳ ನಡುವೆ ಹಾಗೂ ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗುತ್ತದೆ. ಕೆಲವು ಸಂಬಂಧಗಳು ನಿಮ್ಮಿಂದ ದೂರ ಸರಿದು ಬಳಿಕ ಮತ್ತೆ ಆ ಸಂಬಂಧ ಸರಿಯಾಗುವ ಸಾಧ್ಯತೆ ಇದೆ.