ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lunar Eclipse: ನಾಳೆ ಭಾರತದಲ್ಲೂ ಗೋಚರಿಸಲಿದೆ ಖಗ್ರಾಸ ಚಂದ್ರಗ್ರಹಣ; ದೋಷ ನಿವಾರಣೆಗೆ ಈ ಮಂತ್ರ ಪಠಿಸಿ

Lunar Eclipse: ನಾಳೆ ಚಂದ್ರಗ್ರಹಣ ಸಂಭವಿಸಲಿದ್ದು, ಇದು ಭಾರತದಲ್ಲೂ ಗೋಚರಿಸಲಿದೆ. ಈ ಬಾರಿ ರಾಹುಗ್ರಸ್ತ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಕೆಲವು ರಾಶಿಯವರಿಗೆ ದೋಷವಿದೆ, ಹಾಗಿದ್ದರೆ ಈ ದೋಷ ನಿವಾರಣೆಗೆ ಚಂದ್ರಗ್ರಹಣ ಸಂದರ್ಭದಲ್ಲಿ ಯಾವ ಸ್ತೋತ್ರ ಪಠಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ನಾಳೆ ಭಾರತದಲ್ಲೂ ಗೋಚರಿಸಲಿದೆ ಖಗ್ರಾಸ ಚಂದ್ರಗ್ರಹಣ!

-

Priyanka P Priyanka P Sep 6, 2025 4:35 PM

ಚಂದ್ರಗ್ರಹಣವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹತ್ವಪೂರ್ಣ ಖಗೋಳೀಯ ಘಟನೆ ಎಂದೇ ಪರಿಗಣಿಸಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ಕೆಲವೊಂದು ರಾಶಿಗಳಿಗೆ ಹಾನಿಕಾರಕ ದೋಷಗಳು ಉಂಟಾಗಬಹುದು ಎಂಬ ನಂಬಿಕೆ ಇದೆ. ಇಂತಹ ಸಂದರ್ಭದಲ್ಲಿ ಶಾಂತಿ ಮತ್ತು ದೋಷಪರಿಹಾರದ ಸಲುವಾಗಿ ಶ್ಲೋಕ ಅಥವಾ ಸ್ತೋತ್ರಗಳ ಪಠಣ ಮಾಡಲು ಶಾಸ್ತ್ರಗಳು ಸಲಹೆ ನೀಡುತ್ತವೆ. ನಾಳೆ ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿ ರಾಹುಗ್ರಸ್ತ ಖಗ್ರಾಸ ಚಂದ್ರಗ್ರಹಣವಾಗಲಿದ್ದು (Rahu's Blood Moon Eclipse), ಭಾರತದಲ್ಲೂ ಗೋಚರಿಸಲಿದೆ. ಕೆಲವು ರಾಶಿಯವರಿಗೆ ದೋಷವಿದೆ, ಹಾಗಿದ್ದರೆ ಈ ದೋಷ ನಿವಾರಣೆಗೆ ಚಂದ್ರಗ್ರಹಣ (lunar eclipse) ಸಂದರ್ಭದಲ್ಲಿ ಯಾವ ಸ್ತೋತ್ರ ಪಠಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಚಂದ್ರಗ್ರಹಣ ಸಮಯದಲ್ಲಿ ಹೇಳಬಹುದಾದ ಶ್ಲೋಕಗಳು

ಓಂ ಏಂ ಕ್ಲೀಂ ಸೋಮಾಯ ನಾಮಾಯ ನಮಃ

ಅಥವಾ

ಓಂ ಶ್ರಾಂ ಶ್ರೀಂ ಶ್ರೌಂ ಚಂದ್ರಾಯ ನಮಃ

ಅಥವಾ

ಓಂ ಕ್ಷೀರ ಪುತ್ರಾಯ ವಿದ್ಮಹೇ ಅಮೃತ ತತ್ವಾಯ ಧೀಮಹೀ

ತನ್ನೋ ಸೋಮ ಪ್ರಚೋದಯಾತ್

ಇದನ್ನೂ ಓದಿ: Onam Celebration 2025: ಟ್ರೆಡಿಷನಲ್ ಉಡುಗೆಯಲ್ಲಿ ಓಣಂ ಹಬ್ಬ ಆಚರಿಸಿದ ತಾರೆಯರು

ಶಿವ ಮಂತ್ರಗಳು:

ಓಂ ನಮಃ ಶಿವಾಯ

ಅಥವಾ

ಮಹಾಮೃತ್ಯುಂಜಯ ಮಂತ್ರ: ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ. ಉರುವರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್.

ಇತರೆ ಮಂತ್ರಗಳು:

ಓಂ ನಮೋ ನಾರಾಯಣ ಅಥವಾ ಓಂ ನಮೋ ಭಗವತೇ ವಾಸುದೇವಾಯ

ಓಂ ಸರ್ವೇ ಭವಂತು ಸುಖಿನಃ. ಸರ್ವೇ ಸಂತು ನಿರಾಮಯಃ. ಸರ್ವೇ ಭದ್ರಾಣಿ ಪಶ್ಯಂತು. ಮಾ ಕಶ್ಚಿದ ದುಃಖ ಭಗ್ಭವೇತ್. ಓಂ ಶಾಂತಿಃ ಶಾಂತಿಃ ಶಾಂತಿಃ. ಈ ಮಂತ್ರವನ್ನು ಸಾರ್ವತ್ರಿಕ ಶಾಂತಿ ಮತ್ತು ಯೋಗಕ್ಷೇಮಕ್ಕಾಗಿ ಪಠಿಸಬಹುದು.

ಗ್ರಹಣದ ಸಲಹೆಗಳು

ಗ್ರಹಣದ ಸಮಯದಲ್ಲಿ ಶುಭ ಚಟುವಟಿಕೆಗಳು ಮತ್ತು ಹೊಸ ಉದ್ಯಮಗಳನ್ನು ಮಾಡಬೇಡಿ. ಆದಷ್ಟು ಹಗುರವಾದ ಆಹಾರವನ್ನು ಸೇವಿಸಿ. ಅಧಿಕ ಆಹಾರ ಮತ್ತು ಮಾಂಸಾಹಾರವನ್ನು ಸೇವಿಸಬೇಡಿ. ಗ್ರಹಣದ ನಂತರ, ನಿಮ್ಮ ಮನೆಯನ್ನು ಶುದ್ಧೀಕರಿಸಲು ಗಂಗಾ ಜಲವನ್ನು ಸಿಂಪಡಿಸಿ. ನಿಮ್ಮ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಅಗತ್ಯವಿರುವವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡಿ.

ಇದನ್ನೂ ಓದಿ: Spoorthivani Column: ಮನಸ್ಸು ಭಕ್ತಿಯಲ್ಲಿ ತಲ್ಲೀನವಾದಾಗಲೇ ಅಮರತ್ವ ಸಾಧನೆ ಸಾಧ್ಯ