ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಶ್ರಾವಣ ಶನಿವಾರದ ಈ ದಿನ ಭಗವಾನ್ ವಿಷ್ಣುವಿನ ಶುಭದಾಯಕ ಫಲ ಈ ರಾಶಿಗೆ ಇರಲಿದೆ!

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿ ದನಿಷ್ಠ ನಕ್ಷತ್ರದ ಸೆಪ್ಟೆಂಬರ್‌ 6ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ದಿನ ಭವಿಷ್ಯ- ಶನಿವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

-

Profile Pushpa Kumari Sep 6, 2025 6:00 AM

ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ದನಿಷ್ಠ ನಕ್ಷತ್ರದ ಈ ದಿನ ಅನಂತ ಪದ್ಮನಾಭ ವ್ರತ ಆಗಿದ್ದು ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಒಂದು ಪೂಜೆಯಾಗಿದೆ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ದನಿಷ್ಠ ನಕ್ಷತ್ರ ಇದ್ದು ಎಲ್ಲ ರಾಶಿಗೂ ಧನಾಗಮನವನ್ನು ಸೂಚಿಸುವ ದಿನ ಆಗಲಿದೆ. ಇಂದು ಮೇಷ ರಾಶಿಯವರಿಗೆ ಅತ್ಯುತ್ತಮವಾದ ದಿನ ಆಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಮಿತ್ರರಿಂದ ಒಳಿತಾಗಲಿದೆ. ಇಂದು ದಿನ ಪೂರ್ತಿ ಒಳ್ಳೆಯದಿನ ವಾಗಲಿದೆ.

ವೃಷಭ ರಾಶಿ: ವೃಷಭ ರಾಶಿ ಅವರಿಗೆ ಭಾಗ್ಯೋದಯ ವಾದ ದಿನವಾಗಲಿದ್ದು ಕಾರ್ಯ ಕ್ಷೇತ್ತದಲ್ಲಿ ಯಶಸ್ಸು ಸಿಗಲಿದೆ. ಅದೇ ರೀತಿ ಕೆಲಸಕಾರ್ಯಗಳಲ್ಲಿ ಮುಂದಿನ ದಿನಗಳಲ್ಲಿ ಪ್ರಮೋಷನ್ ಕೂಡ ಗಿಟ್ಟಿಸಿಕೊಳ್ಳಲಿದ್ದೀರಿ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಇಂದು ಭಾಗ್ಯೋದಯವಾದ ದಿನ ಆಗಲಿದೆ. ಹಣಕಾಸಿನ ವಿಚಾರದ ಬಗ್ಗೆ ಹೊಸದಾದ ಯೋಚನೆಗಳು ನಿಮಗೆ ಬರಬಹುದು. ಆರ್ಥಿಕ ಸುಭದ್ರ ತೆಯ ಬಗ್ಗೆ ಯೋಚಿಸುವುದರಿಂದ ಮುಂದಿನ ದಿನಗಳಲ್ಲಿ ಒಳಿತಗಾಲಿದೆ. ಉತ್ತಮವಾದ ದಿನ ನಿಮ್ಮದು ಆಗಲಿದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಮನಸ್ಸಿಗೆ ಸ್ವಲ್ಪ ಕ್ಲೇಷ ಉಂಟಾಗುವ ದಿನ ಆಗಲಿದೆ. ಮುಖ್ಯವಾದ ವಿಚಾರಗಳಲ್ಲಿ ಯಾವುದೇ ಮುಖ್ಯ ನಿರ್ಧಾರಗಳನ್ನು ಇಂದು ಮಾಡಲು ಹೋಗಬೇಡಿ. ಹಣಕಾಸಿನ ಅಡಚಣೆ ಇರಬಹುದು. ಆದರೆ ಅತಿಯಾಗಿ ಯೋಚನೆ ಮಾಡಲು ಹೋಗಬೇಡಿ.. ನಾಳೆ ಎಲ್ಲವೂ ಸರಿಯಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಯಾರ ಜೊತೆ ಕೆಲಸ ಮಾಡುತ್ತೀರಿ ಅವರಿಂದ ಧನ ಆಗಮನವಾಗುವ ಸಾಧ್ಯತೆ ಇರುತ್ತದೆ. ಇಂದು ಮಿತೃತ್ವದಲ್ಲಿ, ಸಾಮಾಜಿಕ ವ್ಯವಹಾರದಲ್ಲಿ, ದಾಂಪತ್ಯದಲ್ಲಿ ನೀವು ಸುಖವನ್ನು ಕಾಣುತ್ತೀರಿ. ಸಾಮಾಜಿಕ ವ್ಯವಹಾರಗಳಲ್ಲಿ ಇಂದು ಜಯ ಪ್ರಾಪ್ತಿಯಾಗಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಇಂದು ಉತ್ತಮವಾಗಲಿದ್ದು ವೈರಿಗಳಿಂದಲೇ ಧನ ಆಗಮನ ವಾಗುವ ಸೂಚನೆ ಇದೆ. ಆದರೇ ಅತೀ ಹೆಚ್ಚಿನ ಆತ್ಮವಿಶ್ವಾಸ ದಿಂದ ಇರಬೇಡಿ. ನಿಮ್ಮ ಪಾಡಿಗೆ ಎಲ್ಲ ಕೆಲಸವನ್ನು ನೀವು ಮಾಡಿಕೊಳ್ಳಿ. ತಾಳ್ಮೆಯಿಂದ ಇರಿ.. ಮುಂದಿನ ದಿನಗಳಲ್ಲಿ ಉತ್ತಮ ಫಲಗಳು ಪ್ರಾಪ್ತಿ ಯಾಗಲಿದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಮನಸ್ಸಿಗೆ ಕ್ಷೇಷ ಉಂಟಾಗುವ ದಿನ ಆಗಲಿದೆ. ಹಣಕಾಸಿನ ಖರ್ಚು ವೆಚ್ಚಗಳು ಇಂದು ಜಾಸ್ತಿ ಯಾಗಲಿದೆ. ಬರುವ ಹಣ ಕೂಡ ಇಂದು ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ‌. ಮುಂದಿನ ದಿನಗಳಲ್ಲಿ ಬಹಳ ಉತ್ತಮ ಶುಭ ಫಲಗಳು ನಿಮಗೆ ದೊರೆಯಲಿದೆ

ಇದನ್ನು ಓದಿ:Daily Horoscope: ದ್ವಾದಶಿ ತಿಥಿಯ ಈ ದಿನ ಯಾವ ರಾಶಿಗೆ ಶುಭ ಫಲವಾಗಲಿದೆ?

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಆಸ್ತಿ ಪಾಸ್ತಿ ವಿಚಾರವಾಗಿ ಸ್ವಲ್ಪ ಗೊಂದಲಗಳು ಉಂಟಾಗಬಹುದು. ಅದೇ ರೀತಿ ವಾಹನ ಖರೀದಿ, ಕೃಷಿ ಚಟುವಟಿಕೆ ಇತ್ಯಾದಿ ಕೆಲಸ ಕಾರ್ಯಗಳಿಗೆ ಹಣಕಾಸಿನ ತೊಂದರೆ ಬರಬಹುದು.‌

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಮನಸ್ಸಿಗೆ ನೆಮ್ಮದಿ ಇರುತ್ತದೆ.‌ ಆತ್ಮವಿಶ್ವಾಸ ಕೂಡ ಹೆಚ್ಚಾಗಿಯೇ ಇರುತ್ತದೆ.‌ ಸೋಷಿಯಲ್ ಮೀಡಿಯಾ ಬಳಕೆದಾರರು, ಪತ್ರಿಕೋದ್ಯಮ, ಇತ್ಯಾದಿ ಕೆಲಸ ಮಾಡುವವರಿಗೆ ಉತ್ತಮ ದಿನ ಆಗಲಿದೆ..

ಮಕರ ರಾಶಿ: ಮಕರ ರಾಶಿ ಅವರಿಗೆ ಸಂಸಾರದ ವಿಚಾರದಲ್ಲಿ ಸ್ವಲ್ಪ ಕ್ಷೇಷ ಹೆಚ್ಚಾಗಿಯೇ ಇರುತ್ತದೆ. ಆರ್ಥಿಕ ಸುಭದ್ರತೆಯ ಬಗ್ಗೆ ಹೆಚ್ಚಿನ ಯೋಜನೆಗಳನ್ನು ಹಾಕಿಕೊಳ್ಳುತ್ತೀರಿ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಉತ್ತಮವಾದ ದಿನ ಆಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅದೇ ರೀತಿ ಆತ್ಮವಿಶ್ವಾಸ ಹೆಚ್ಚಾಗಿ ಇರಲಿದ್ದು ಅಂದು ಕೊಂಡ ಕೆಲಸ ಕಾರ್ಯಗಳು ಇಂದು ನೆರವೇರಲಿದೆ. ಅತೀ ಉತ್ತಮದಾಯಕ ದಿನ ನಿಮ್ಮದು ಆಗಲಿದೆ

ಮೀನ ರಾಶಿ: ಮೀನ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನ ಆಗಲಿದೆ. ಹಣಕಾಸಿನ ತೊಂದರೆ ಗಳು ಉಂಟಾಗಬಹುದು. ಮುಖ್ಯವಾದ ವಿಚಾರಗಳಲ್ಲಿ ತೊಂದರೆ ಉಂಟಾಗ ಬಹುದು. ಹಣಕಾಸಿನ ಖರ್ಚು ವೆಚ್ಚಗಳು ಹೆಚ್ಚಾಗಬಹುದು. ಇಂದು ಭಗವಂತನ ಆರಾಧನೆ ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು. ಎಲ್ಲಾ ರಾಶಿಯವರು ನಿತ್ಯ ಶ್ಲೋಕ,ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯಲಿದ್ದೀರಿ.