ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭೂತದ ಬಾಯಲ್ಲಿ ಭಗವದ್ಗೀತೆ!

ಪಾಕ್ ರಕ್ಷಣಾ ಸಚಿವರಾಗಲೀ, ಸೇನಾ ಮುಖ್ಯಸ್ಥರಾಗಲೀ ನಿದ್ರೆಗಣ್ಣಿನಲ್ಲಿ ಹೀಗೆಲ್ಲಾ ಕನವರಿಸು ತ್ತಿದ್ದಾರೆಯೇ ಎಂದು ಪ್ರಶ್ನಿಸಬೇಕಾದ ಸಂದರ್ಭವೀಗ ಬಂದಿದೆ. ಪಹಲ್ಗಾಮ್‌ನಲ್ಲಿ ಪಾಕ್ ಕೃಪಾ ಪೋಷಿತ ಉಗ್ರರು ನಡೆಸಿದ 26 ಮಂದಿಯ ಮಾರಣಹೋಮಕ್ಕೆ ಪ್ರತಿಯಾಗಿ ಭಾರತವು ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ನಡೆಸಿತೇ ವಿನಾ, ತಾನೇತಾನಾಗಿ ಕಾಲು ಕೆರೆದುಕೊಂಡು ಹೋಗಲಿಲ್ಲ.

ಭೂತದ ಬಾಯಲ್ಲಿ ಭಗವದ್ಗೀತೆ!

-

Ashok Nayak Ashok Nayak Oct 7, 2025 1:12 PM

ತಾವು ಮಾಡಿದ ತಪ್ಪನ್ನು ಇನ್ನೊಬ್ಬರು ಬೆರಳುಮಾಡಿ ತೋರಿಸಿ, ತಿದ್ದಿಕೊಳ್ಳುವಂತೆ ತಮಗೆ ಹಿತೋಪದೇಶ ನೀಡುವುದಕ್ಕೂ ಮೊದಲೇ, ಆ ಇನ್ನೊಬ್ಬರ ಮೇಲೆ ವಿನಾಕಾರಣ ಸಲ್ಲದ ಆರೋಪ ಹೊರಿಸಿ ಅವರ ಸದಾಶಯವನ್ನೇ ಕುಗ್ಗಿಸಿಬಿಡುವ ಕುತ್ಸಿತ ಚಿಂತನೆ ಕೆಲವರಲ್ಲಿ ಹರಳುಗಟ್ಟಿರುತ್ತದೆ.

ಕಾಲು ಕೆರೆದುಕೊಂಡು ಜಗಳಕ್ಕೆ ಬರುವಲ್ಲಿ ನಿಷ್ಣಾತರಾಗಿರುವ, ಪಾಕಿಸ್ತಾನದ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿರುವ ಕೆಲವರಿಗೆ ಈ ಮಾತು ಶತ-ಪ್ರತಿಶತ ಅನ್ವಯವಾಗುತ್ತದೆ. ‘ಪಾಕಿಸ್ತಾನವು ಅಲ್ಲಾಹುವಿನ ಹೆಸರಿನಲ್ಲಿ ರೂಪುಗೊಂಡ ದೇಶ; ನಮ್ಮ ರಕ್ಷಕರು ಅಲ್ಲಾಹುವಿನ ಸೈನಿಕರು.

ಈ ಬಾರಿ ಭಾರತವೇನಾದರೂ ಮತ್ತೆ ದುಸ್ಸಾಹಸ ಮಾಡಲು ಮುಂದಾದರೆ, ತನ್ನದೇ ವಿಮಾನಗಳ ಅವಶೇಷಗಳ ಅಡಿಯಲ್ಲಿ ಅದು ಹೂತುಹೋಗಲಿದೆ’ ಎಂಬ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿ- ಅವರ ಧಾರ್ಷ್ಟ್ಯದ ಮಾತುಗಳ ಹಿನ್ನೆಲೆಯಲ್ಲಿ ಈ ಎದಿರೇಟನ್ನು ನೀಡಬೇಕಾಗಿ ಬಂದಿದೆ.

ಇದನ್ನೂ ಓದಿ: Vishwavani Editorial: ಶ್ರೇಷ್ಠತೆಗೆ ಮೌಲ್ಯ ಇದ್ದೇ ಇದೆ

ಪಾಕ್ ರಕ್ಷಣಾ ಸಚಿವರಾಗಲೀ, ಸೇನಾ ಮುಖ್ಯಸ್ಥರಾಗಲೀ ನಿದ್ರೆಗಣ್ಣಿನಲ್ಲಿ ಹೀಗೆಲ್ಲಾ ಕನವರಿಸು ತ್ತಿದ್ದಾರೆಯೇ ಎಂದು ಪ್ರಶ್ನಿಸಬೇಕಾದ ಸಂದರ್ಭವೀಗ ಬಂದಿದೆ. ಪಹಲ್ಗಾಮ್‌ನಲ್ಲಿ ಪಾಕ್ ಕೃಪಾ ಪೋಷಿತ ಉಗ್ರರು ನಡೆಸಿದ 26 ಮಂದಿಯ ಮಾರಣಹೋಮಕ್ಕೆ ಪ್ರತಿಯಾಗಿ ಭಾರತವು ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ನಡೆಸಿತೇ ವಿನಾ, ತಾನೇ ತಾನಾಗಿ ಕಾಲು ಕೆರೆದುಕೊಂಡು ಹೋಗಲಿಲ್ಲ.

ಪುಲ್ವಾಮಾದಲ್ಲಿ ಸಿಆರ್‌ಪಿಎ- ಸಿಬ್ಬಂದಿಗಳಿದ್ದ ವಾಹನದ ಮೇಲೆ ದಾಳಿಯಾಗಿದ್ದು ಸೇರಿದಂತೆ ಪಾಕ್-ಪ್ರೇರಿತ ಉಗ್ರರು ಭಾರತದಲ್ಲಿ ನಡೆಸಿದ ವಿಧ್ವಂಸಕ ಕೃತ್ಯಗಳಿಗೆ ಪ್ರತಿಯಾಗಿ ಅವರ ನೆಲೆಗಳ ಮೇಲೆ ಭಾರತವು ‘ಸರ್ಜಿಕಲ್ ಸ್ಟ್ರೈಕ್’ ಅನ್ನು ನಡೆಸಿತೇ ವಿನಾ, ಸುಖಾಸುಮ್ಮನೆ ಅಲ್ಲ.

ಇನ್ನೊಬ್ಬರ ಮುಖಕ್ಕೆ ಕೆಸರು ಬಳಿಯಲು ಯತ್ನಿಸುವವರ ಕೈ ಮೊದಲಿಗೆ ಕೆಸರಾಗುತ್ತದೆ, ಇನ್ನೊ ಬ್ಬರ ಬಾಳಿಗೆ ಬೆಂಕಿಯಿಡಲು ಕಿಸೆಯಲ್ಲಿ ಕೆಂಡವನ್ನು ಇಟ್ಟುಕೊಂಡವರಿಗೇ ಮೊದಲು ಬಿಸಿ ತಾಕುತ್ತದೆ ಎಂಬುದನ್ನು ಇಂಥ ಮಹಾನುಭಾವರು ಮೊದಲಿಗೆ ಅರಿತುಕೊಳ್ಳಲಿ...