Vishwavani Editorial: ಬೇಲಿಯೇ ಹೊಲವನ್ನು ಮೇಯ್ದರೆ!
ಒಂದು ಕಡೆ, ದೇಶದ ಉದ್ದಗಲಕ್ಕೂ ತನ್ನ ಕಬಂಧ ಬಾಹುವನ್ನು ಚಾಚಿರುವ ಮಾದಕ ವಸ್ತುಗಳ ಪಿಡು ಗನ್ನು ಮೂಲೋತ್ಪಾಟನೆ ಮಾಡಲು ಒಂದಷ್ಟು ಪ್ರಾಮಾಣಿಕ ಪೊಲೀಸ್ ಸಿಬ್ಬಂದಿಗಳು ಅಹರ್ನಿಶಿ ಶ್ರಮಿಸುತ್ತಿದ್ದರೆ, ಮತ್ತೊಂದೆಡೆ ಅದೇ ವೃತ್ತಿಯವರು ಹೀಗೆ ಡ್ರಗ್ ಪೆಡ್ಲರ್ ಗಳ ಜತೆ ಶಾಮೀಲಾಗಿದ್ದು ನಾಚಿಕೆಗೇಡಿನ ಸಂಗತಿ.

-

ಬಸವಣ್ಣನವರು ತಮ್ಮ ವಚನವೊಂದರಲ್ಲಿ, ‘ಏರಿಯೇ ನೀರನ್ನು ಕುಡಿದರೆ, ಬೇಲಿಯೇ ಹೊಲ ವನ್ನು ಮೇಯ್ದರೆ, ಮನೆಯಾಕೆಯೇ ತನ್ನ ಮನೆಯಲ್ಲಿ ಕಳ್ಳತನ ಮಾಡಿದರೆ ಯಾರಿಗೆ ದೂರಬೇಕು?’ ಎಂಬರ್ಥದಲ್ಲಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಬಯಲಾಗಿರುವ ಆಘಾತಕಾರಿ ಘಟನೆಯೊಂದು ಈ ಮಾತನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.
ವಿವಿಧ ಸ್ತರದ ಪೊಲೀಸ್ ಸಿಬ್ಬಂದಿಗಳು, ಡ್ರಗ್ ಪೆಡ್ಲರ್‌ಗಳ ಜತೆ ಶಾಮೀಲಾಗಿ ಮಾದಕ ವಸ್ತುಗಳ ಮಾರಾಟದ ದಂಧೆಯಲ್ಲಿ ಕೈಜೋಡಿಸಿದ್ದ ಘಟನೆಯಿದು. ಈ ಸಂಬಂಧವಾಗಿ 11 ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂಬುದು ಲಭ್ಯ ಸುದ್ದಿ. ಈಗ ಅಮಾನತುಗೊಂಡಿರುವ ಸಿಬ್ಬಂದಿಗಳು, ಮಾದಕ ವಸ್ತುಗಳ ಮಾರಾಟಕ್ಕೆ ಸಹಕರಿಸಿದ್ದಕ್ಕಾಗಿ ಡ್ರಗ್ ಪೆಡ್ಲರ್‌ಗಳಿಂದ ತಿಂಗಳಿಗೆ 2 ಲಕ್ಷ ರುಪಾಯಿ ಹಫ್ತಾವನ್ನೂ ವಸೂಲಿ ಮಾಡುತ್ತಿದ್ದರು ಎಂಬ ಆರೋಪವೂ ಕೇಳಿ ಬಂದಿದೆ.
ಇದನ್ನೂ ಓದಿ: Vishwavani Editorial: ಸುತ್ತಲು ಬೆಂಕಿ ಕಿಡಿ; ಮಧ್ಯೆ ಭಾರತ
ಒಂದು ಕಡೆ, ದೇಶದ ಉದ್ದಗಲಕ್ಕೂ ತನ್ನ ಕಬಂಧ ಬಾಹುವನ್ನು ಚಾಚಿರುವ ಮಾದಕ ವಸ್ತುಗಳ ಪಿಡುಗನ್ನು ಮೂಲೋತ್ಪಾಟನೆ ಮಾಡಲು ಒಂದಷ್ಟು ಪ್ರಾಮಾಣಿಕ ಪೊಲೀಸ್ ಸಿಬ್ಬಂದಿಗಳು ಅಹರ್ನಿಶಿ ಶ್ರಮಿಸುತ್ತಿದ್ದರೆ, ಮತ್ತೊಂದೆಡೆ ಅದೇ ವೃತ್ತಿಯವರು ಹೀಗೆ ಡ್ರಗ್ ಪೆಡ್ಲರ್ ಗಳ ಜತೆ ಶಾಮೀಲಾಗಿದ್ದು ನಾಚಿಕೆಗೇಡಿನ ಸಂಗತಿ.
‘ತೊಟ್ಟಿಯ ತಳಭಾಗದಲ್ಲಿ ಸೋರಿಕೆಗೆ ಕಾರಣವಾಗಿರುವ ರಂಧ್ರವನ್ನು ಮುಚ್ಚದೆ ಮೇಲಿನಿಂದ ಎಷ್ಟು ನೀರು ತುಂಬಿದರೂ ವ್ಯರ್ಥ’ ಎಂಬ ಗ್ರಹಿಕೆಗೆ ಇಂಥ ನಿದರ್ಶನಗಳು ಪುಷ್ಟಿ ನೀಡುತ್ತವೆ. ವ್ಯವಸ್ಥೆಯೊಳಗೆ ಇಂಥ ‘ಅನರ್ಹ ಕೊಂಡಿ’ಗಳು ಸೇರಿಕೊಂಡಿರುವುದರಿಂದಲೇ, ವ್ಯವಸ್ಥೆಯ ಬಂಧಕ ಶಕ್ತಿ ಕುಗ್ಗುತ್ತಿದೆ ಎಂಬುದು ನಿರಾಕರಿಸಲಾಗದ ಸತ್ಯ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅದರ ಹಿಂದಿರುವ ಕುತ್ಸಿತ ಶಕ್ತಿಗಳ ಹೆಡೆಮುರಿ ಕಟ್ಟಬೇಕಿದೆ. ಅಲ್ಲಿಯವರೆಗೆ ‘ವ್ಯವಸ್ಥೆ’ ಎಂಬ ತೊಟ್ಟಿ ಸೋರುತ್ತಲೇ ಇರುತ್ತದೆ...