ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಈ ಸಹಯೋಗ ಅನಿವಾರ್ಯ

ಭಾರತವನ್ನು ದಮನಿಸುವುದೇ ಈಗ ಅವರ ಪಾಲಿನ ‘ಒಂದಂಶದ ಕಾರ್ಯಕ್ರಮ’. ಇದನ್ನು ಸಾಕಾರ ಗೊಳಿಸಲೆಂದು ನಮ್ಮ ಮಗ್ಗುಲುಮುಳ್ಳು ದೇಶ ಪಾಕಿಸ್ತಾನದೊಂದಿಗೆ ಟ್ರಂಪ್ ಒಡನಾಟವನ್ನು ಶುರುವಿಟ್ಟುಕೊಂಡಿದ್ದಾರೆ. ಅಮೆರಿಕದ ಆಳುಗರ ಸ್ವಹಿತಾಸಕ್ತಿಯ ಧೋರಣೆಗಳನ್ನೂ ನವರಂಗಿ ಆಟಗಳನ್ನೂ ದಶಕಗಳಿಂದಲೂ ನೋಡಿಕೊಂಡು ಬಂದಿರುವ ಭಾರತವು ಈ ಬೆಳವಣಿಗೆ ಯಿಂದೇನೂ ವಿಚಲಿತಗೊಂಡಿಲ್ಲ.

Vishwavani Editorial: ಈ ಸಹಯೋಗ ಅನಿವಾರ್ಯ

Ashok Nayak Ashok Nayak Aug 13, 2025 6:48 AM

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವರಸೆ ದಿನದಿನಕ್ಕೂ ಬದಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ತೆರಳಿ ಅಲ್ಲಿ ಆಯೋಜಿಸಲಾಗಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಟ್ರಂಪ್. ಆಗ ಕಂಡಿದ್ದ ಟ್ರಂಪ್ ಈಗ ಮಾಯವಾಗಿದ್ದಾರೆ. ತರುವಾಯದಲ್ಲಿ ಗುಜರಾತಿನ ಅಹಮದಾಬಾದ್‌ ನಲ್ಲಿ ಆಯೋಜಿಸಲಾಗಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗಿ ‘ಭಾರತವು ಅಮೆರಿಕದ ಆಪ್ತಮಿತ್ರ’ ಎಂದು ಬಣ್ಣಿಸಿದ್ದರು ಟ್ರಂಪ್. ಆದರೆ ಅಂದು ಹಾಗೆ ಕರೆದಿದ್ದನ್ನು ಟ್ರಂಪ್ ಈಗ ಮರೆತಿದ್ದಾರೆ.

ಭಾರತವನ್ನು ದಮನಿಸುವುದೇ ಈಗ ಅವರ ಪಾಲಿನ ‘ಒಂದಂಶದ ಕಾರ್ಯಕ್ರಮ’. ಇದನ್ನು ಸಾಕಾರ ಗೊಳಿಸಲೆಂದು ನಮ್ಮ ಮಗ್ಗುಲುಮುಳ್ಳು ದೇಶ ಪಾಕಿಸ್ತಾನದೊಂದಿಗೆ ಟ್ರಂಪ್ ಒಡನಾಟವನ್ನು ಶುರುವಿಟ್ಟುಕೊಂಡಿದ್ದಾರೆ. ಅಮೆರಿಕದ ಆಳುಗರ ಸ್ವಹಿತಾಸಕ್ತಿಯ ಧೋರಣೆಗಳನ್ನೂ ನವರಂಗಿ ಆಟಗಳನ್ನೂ ದಶಕಗಳಿಂದಲೂ ನೋಡಿಕೊಂಡು ಬಂದಿರುವ ಭಾರತವು ಈ ಬೆಳವಣಿಗೆ ಯಿಂದೇನೂ ವಿಚಲಿತಗೊಂಡಿಲ್ಲ.

ಇದನ್ನೂ ಓದಿ: Vishwavani Editorial: ಸೂಕ್ತ ಮಾಹಿತಿ ದೊರೆಯಲಿ

ಆದರೆ ಭಾರತೀಯರ ಹಿತಾಸಕ್ತಿಯನ್ನು ಕಾಯಲೇಬೇಕಲ್ಲಾ? ಹೀಗಾಗಿ, ರಷ್ಯಾದೊಂದಿಗೆ ಮುಂದು ವರಿಸಿಕೊಂಡೇ ಬಂದಿರುವ ಬಾಂಧವ್ಯದ ತೆಕ್ಕೆಗೆ ಈಗ ಚೀನಾವನ್ನೂ ಸೇರಿಸಿಕೊಳ್ಳಲು ಭಾರತ ಕಾರ್ಯತಂತ್ರವನ್ನು ಹೆಣೆದಿದೆ. ಆಗಸ್ಟ್ 30ರಂದು ಪ್ರಧಾನಿ ಮೋದಿಯವರು ಚೀನಾ ಪ್ರವಾಸವನ್ನು ಕೈಗೊಳ್ಳಲಿರುವುದು ಈ ಸಂಬಂಧದ ಸಮಾಲೋಚನೆಗಾಗಿಯೇ. ಈ ನಡೆ ಎಷ್ಟರ ಮಟ್ಟಿಗೆ ಸರಿ? ಚೀನಾ ಕೂಡ ನಮ್ಮ ಶತ್ರುವೇ ಅಲ್ಲವೇ? ಎಂದು ಕೆಲವರು ಪ್ರಶ್ನಿಸಬಹುದು.

ಆದರೆ, ಭಾರತದಂತೆಯೇ ಚೀನಾದ ಮೇಲೂ ಟ್ರಂಪ್ ಅತಿರೇಕದ ಸುಂಕವನ್ನು ಹೇರಿ ಕೆಂಗಣ್ಣು ಬೀರಿರುವುದರಿಂದ, ‘ಶತ್ರುವಿನ ಶತ್ರು, ಮಿತ್ರ’ ಎಂಬ ತಂತ್ರಗಾರಿಕೆಯನ್ನು ನೆಚ್ಚಿ ಭಾರತ ಈ ರಾಜತಾಂತ್ರಿಕ ಹೆಜ್ಜೆಯನ್ನು ಇಡಲಿದೆ ಎನ್ನುತ್ತಾರೆ ರಾಜಕೀಯ ಪಂಡಿತರು. ಕಾಲ ಬದಲಾದಂತೆ, ದೇಶದ ಹಿತರಕ್ಷಣೆಯ ನಿಟ್ಟಿನಲ್ಲಿ ಇಂಥ ಕೆಲವು ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಅದರ ಫಲಶ್ರುತಿ ಉತ್ತಮವಾಗಿರಲಿ ಎಂದೇ ನಾವು ಹಾರೈಸೋಣ.