Yadgir News: ರಾಷ್ಟ್ರ ಮಟ್ಟದ ಎನ್‌ಕ್ಯೂಎಎಸ್ ಮಾನ್ಯತೆ ಪಡೆದ ಕೆಂಭಾವಿ ಆಸ್ಪತ್ರೆ; ರಾಜ್ಯಕ್ಕೆ ಎರಡನೇ ಸ್ಥಾನ
Yadgir News: ಅತ್ಯುತ್ತಮ ಆಸ್ಪತ್ರೆ ನಿರ್ವಹಣೆಗಾಗಿ ರಾಷ್ಟೀಯ ಮಟ್ಟದಲ್ಲಿ ನೀಡಲಾಗುವ ನ್ಯಾಷನಲ್ ಕ್ವಾಲಿಟಿ ಅಶ್ಶುರೆನ್ಸ್ ಸ್ಟ್ಯಾಂಡರ್ಡ್ಸ್ (ಎನ್‌ಕ್ಯೂಎಎಸ್)ಗೆ ರಾಜ್ಯದಿಂದ ಆಯ್ಕೆಯಾಗಿರುವ ನಾಲ್ಕು ಆಸ್ಪತ್ರೆಗಳ ಪೈಕಿ ಜಿಲ್ಲೆಯ ಕೆಂಭಾವಿ ಸಮುದಾಯ ಆಸ್ಪತ್ರೆ ಎರಡನೇಯ ಸ್ಥಾನ ಪಡೆಯುವ ಮೂಲಕ ಮೈಲಿಗಲ್ಲು ಸ್ಥಾಪಿಸಿದೆ.
 
                                -
 Siddalinga Swamy
                            
                                Aug 13, 2025 9:34 PM
                                
                                Siddalinga Swamy
                            
                                Aug 13, 2025 9:34 PM
                            ಯಾದಗಿರಿ: ಅತ್ಯುತ್ತಮ ಆರೋಗ್ಯ ಸೇವೆ ಮತ್ತು ನಿರ್ವಹಣೆಗಾಗಿ ಜಿಲ್ಲೆಯ ಕೆಂಭಾವಿ ಸಮುದಾಯ ಆಸ್ಪತ್ರೆಯು ಕೇಂದ್ರ ಸರ್ಕಾರದ ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡ (ಎನ್‌ಕ್ಯೂಎಎಸ್) ಮಾನ್ಯತೆ ಲಭಿಸಿದೆ. ರಾಜ್ಯದಿಂದ ಆಯ್ಕೆಯಾಗಿರುವ ನಾಲ್ಕು ಆಸ್ಪತ್ರೆಗಳ ಪೈಕಿ ಜಿಲ್ಲೆಯ ಕೆಂಭಾವಿ ಸಮುದಾಯ ಆಸ್ಪತ್ರೆ (KEMBHAVI Hospital) ಎರಡನೇ ಸ್ಥಾನ ಪಡೆಯುವ ಮೂಲಕ ಮೈಲುಗಲ್ಲು ಸ್ಥಾಪಿಸಿದೆ.
ಕೆಂಭಾವಿ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗಿದ್ದ ಎನ್‌ಕ್ಯೂಎಎಸ್ ತಂಡದ ಅಧಿಕಾರಿಗಳು ಇಲ್ಲಿನ ಆಸ್ಪತ್ರೆಯಲ್ಲಿ ಎನ್‌ಕ್ಯೂಎಎಸ್ ಅನ್ವಯವಾಗುವ ಈ ಮಾನದಂಡಗಳಾದ ಸೇವಾ ನಿಬಂಧನೆ, ರೋಗಿಗಳ ಹಕ್ಕುಗಳು, ಇನ್‌ಪುಟ್‌ಗಳು, ಬೆಂಬಲ ಸೇವೆಗಳು, ಕ್ಲಿನಿಕಲ್ ಆರೈಕೆ, ಸೋಂಕು ನಿಯಂತ್ರಣ, ಗುಣಮಟ್ಟ ನಿರ್ವಹಣೆ ಅಳವಡಿಸಿಕೊಂಡಿರುವುದನ್ನು ಪರಿಗಣಿಸಿ ರಾಜ್ಯದಲ್ಲಿ ಎರಡನೇಯ ಸ್ಥಾನ ನೀಡಿದೆ.
ಈ ಮೂಲಕ ಕೆಂಭಾವಿ ಸಮುದಾಯ ಆಸ್ಪತ್ರೆಯು ಜಿಲ್ಲೆಯಲ್ಲಿ ರಾಷ್ಟೀಯ ಮಟ್ಟದಲ್ಲಿ ಎನ್‌ಕ್ಯೂಎಎಸ್ ಪ್ರಮಾಣಪತ್ರ ಪಡೆದ ಮೊದಲ ಆಸ್ಪತ್ರೆಯಾಗಿದೆ. ಇಡೀ ರಾಜ್ಯದಲ್ಲಿರುವ ಸಾವಿರಾರು ಸರ್ಕಾರಿ ಆಸ್ಪತ್ರೆಗಳನ್ನು ಹಿಂದಿಕ್ಕಿ ಅತ್ಯುತ್ತಮ ನಿರ್ವಹಣೆ ತೋರಿ ಈ ಸಾಧನೆಗೆ ಕಾರಣರಾದ ಆಸ್ಪತ್ರೆಯ ಆಡಳಿತ ವರ್ಗ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಈ ಸುದ್ದಿಯನ್ನೂ ಓದಿ | SBI Recruitment 2025: ಪದವಿ ಹೊಂದಿದವರಿಗೆ ಗುಡ್‌ನ್ಯೂಸ್; ಬರೋಬ್ಬರಿ 5,180 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ
ಏನಿದು ಎನ್‌ಕ್ಯೂಎಎಸ್
ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಸುಧಾರಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಭಿವೃದ್ಧಿಪಡಿಸಿದ ಸಮಗ್ರ ಚೌಕಟ್ಟು ಎನ್‌ಕ್ಯೂಎಎಸ್ ಆಗಿದೆ. ವಿವಿಧ ಹಂತದ ಆರೋಗ್ಯ ಸೇವೆಗಳಿಗೆ (ಜಿಲ್ಲಾ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು) ಅನ್ವಯವಾಗುವ ಈ ಮಾನದಂಡಗಳು ಸೇವಾ ನಿಬಂಧನೆ, ರೋಗಿಗಳ ಹಕ್ಕುಗಳು, ಇನ್‌ಪುಟ್‌ಗಳು, ಬೆಂಬಲ ಸೇವೆಗಳು, ಕ್ಲಿನಿಕಲ್ ಆರೈಕೆ, ಸೋಂಕು ನಿಯಂತ್ರಣ, ಗುಣಮಟ್ಟ ನಿರ್ವಹಣೆ ಮತ್ತು ಫಲಿತಾಂಶಗಳಂತಹ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತವೆ. ಗುಣಮಟ್ಟದ ಸುಧಾರಣೆ ಮತ್ತು ಮೌಲ್ಯಮಾಪನಕ್ಕೆ ರಚನಾತ್ಮಕ ವಿಧಾನವನ್ನು ಒದಗಿಸುವ ಮೂಲಕ ರಾಷ್ಟ್ರದಾದ್ಯಂತ ಸ್ಥಿರವಾದ, ಉತ್ತಮ-ಗುಣಮಟ್ಟದ ಆರೋಗ್ಯ ವಿತರಣೆಯನ್ನು ಖಚಿತಪಡಿಸುವ ಒಂದು ಗುರಿಯಾಗಿದೆ.
