ಪಾಕ್ನಲ್ಲಿ ಶಿಕ್ಷೆ ಅವಧಿ ಮುಗಿದರೂ ಬಿಡುಗಡೆಯಾಗದ ಭಾರತೀಯರು
ಜೈಲಿನಿಂದ ಬಿಡುಗಡೆಗಾಗಿ ಕಾಯುತ್ತಿದ್ದ ಭಾರತೀಯರ ಮೀನುಗಾರರು ಪಾಕಿಸ್ತಾನದ ವಿಳಂಬದ ಕಾರಣಕ್ಕೆ ಶಿಕ್ಷೆಯ ಅವಧಿ ಮುಗಿದರೂ ಸೆರೆಮನೆಯಲ್ಲಿಯೇ ಉಳಿಯುವ ಪರಿಸ್ಥಿತಿ ಎದುರಾಗಿದೆ. ನವದೆಹಲಿ ಮತ್ತು ಇಸ್ಲಾಮಾಬಾದ್ ನಲ್ಲಿ ಏಕಕಾಲಕ್ಕೆ ಪರಸ್ಪರ ವಶದಲ್ಲಿರುವ ನಾಗರಿಕ ಕೈದಿಗಳು ಹಾಗೂ ಮೀನುಗಾರರ ಪಟ್ಟಿಗಳನ್ನು ವಿನಿಮಯ ಮಾಡಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.