Ayush Mhatre: ಅತಿ ವೇಗದ ಶತಕ ಬಾರಿಸಿ ದಾಖಲೆ ಬರೆದ ಆಯುಷ್ ಮ್ಹಾತ್ರೆ
2024-25ರ ಸಾಲಿನಲ್ಲಿ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆಯುಷ್ ಮ್ಹಾತ್ರೆ, ಮುಂಬೈ ಪರ 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 504 ರನ್‌ಗಳನ್ನು ದಾಖಲಿಸಿದ್ದಾರೆ. ಇನ್ನು 7 ಲಿಸ್ಟ್ ಎ ಪಂದ್ಯಗಳಿಂದ 4458 ರನ್‌ಗಳನ್ನು ಗಳಿಸಿದ್ದಾರೆ.


ಲಂಡನ್: ಭಾರತ U19 ತಂಡದ ನಾಯಕ ಆಯುಷ್ ಮ್ಹಾತ್ರೆ(Ayush Mhatre) 80 ಎಸೆತಗಳಲ್ಲಿ128 ರನ್ ಗಳಿಸಿ ಭಾರತ ಇಂಗ್ಲೆಂಡ್ U19 ವಿರುದ್ಧದ ಎರಡನೇ ಯೂತ್ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಹಾಯ ಮಾಡಿದರು. ಇದೇ ವೇಳೆ ಮ್ಹಾತ್ರೆ ಯೂತ್ ಟೆಸ್ಟ್ ಇತಿಹಾಸದಲ್ಲಿ ಅತಿ ವೇಗದ ಶತಕ ಗಳಿಸುವ ಮೂಲಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡರು. ಪಂದ್ಯದ ಕೊನೆಯ ದಿನದಂದು ಭಾರತವು ಗೆಲ್ಲಲು 355 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದಾಗ ಮ್ಹಾತ್ರೆ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು.
ಹಿಂದಿನ ದಾಖಲೆಯು 2022 ರಲ್ಲಿ ಶ್ರೀಲಂಕಾ U-19 ವಿರುದ್ಧ 88 ಎಸೆತಗಳಲ್ಲಿ ಶತಕ ಗಳಿಸಿದ ಇಂಗ್ಲೆಂಡ್‌ನ ಜಾರ್ಜ್ ಬೆಲ್ ಅವರ ಹೆಸರಿನಲ್ಲಿತ್ತು. ಮೊದಲ ಯೂತ್ ಟೆಸ್ಟ್‌ನಲ್ಲಿ 107 ಎಸೆತಗಳಲ್ಲಿ ಶತಕ ಗಳಿಸಿದಾಗ ಮ್ಹಾತ್ರೆ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ದ್ವಿತೀಯ ಟೆಸ್ಟ್‌ನಲ್ಲಿ ಅವರು 64 ಎಸೆತಗಳಲ್ಲಿ ಶತಕ ಪೂರೈಸಿ ದಾಖಲೆ ತಮ್ಮ ಹೆಸರಿಗೆ ಬರೆದರು. 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
2024-25ರ ಸಾಲಿನಲ್ಲಿ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆಯುಷ್ ಮ್ಹಾತ್ರೆ, ಮುಂಬೈ ಪರ 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 504 ರನ್‌ಗಳನ್ನು ದಾಖಲಿಸಿದ್ದಾರೆ. ಇನ್ನು 7 ಲಿಸ್ಟ್ ಎ ಪಂದ್ಯಗಳಿಂದ 4458 ರನ್‌ಗಳನ್ನು ಗಳಿಸಿದ್ದಾರೆ. ಆದರೆ, ದೇಶಿ ಕ್ರಿಕೆಟ್‌ನಲ್ಲಿ ಇನ್ನೂ ಟಿ20 ಪಂದ್ಯವನ್ನು ಆಡಿಲ್ಲ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಪರ 7 ಪಂದ್ಯಗಳನ್ನಾಡಿ 240 ರನ್ ಗಳಿಸಿದ್ದರು. ಇದರಲ್ಲಿ 94ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
Ayush Mhatre: 181 ರನ್ ಸಿಡಿಸಿ ಯಶಸ್ವಿ ಜೈಸ್ವಾಲ್‌ರ ವಿಶ್ವ ದಾಖಲೆ ಮುರಿದ ಆಯುಷ್ ಮ್ಹಾತ್ರೆ!
ಕಳೆದ ವರ್ಷ ನಾಗಾಲ್ಯಾಂಡ್ ವಿರುದ್ದದ ಪಂದ್ಯದಲ್ಲಿ ಕೇವಲ 117 ಎಸೆತಗಳಲ್ಲಿ 181 ರನ್‌ಗಳನ್ನು ಸಿಡಿಸಿ ಆ ಮೂಲಕ ಲಿಸ್ಟ್ ಎ ಕ್ರಿಕೆಟ್‌ನ ಇನಿಂಗ್ಸ್‌ನಲ್ಲಿ 150ಕ್ಕೂ ಅಧಿಕ ರನ್ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.