ಭಾರತ ತಂಡದ ಬೌಲಿಂಗ್ ವೈಫಲ್ಯಕ್ಕೆ ಗೌತಮ್ ಗಂಭೀರ್ ಕಾರಣ ಎಂದ ಸಂಜಯ್ ಮಾಂಜ್ರೇಕರ್!
ಇಂಗ್ಲೆಂಡ್ ವಿರುದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡವನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಟೀಕಿಸಿದಾರೆ. ವಿಶೇಷವಾಗಿ ವಾಷಿಂಗ್ಟನ್ ಸುಂದರ್ಗೆ ಆರಂಭದಲ್ಲಿ ಬೌಲಿಂಗ್ ನೀಡದ ಹೆಡ್ ಕೋಚ್ ಗೌತಮ್ ಅವರ ತಂತ್ರಗಾರಿಕೆಯ ವಿರುದ್ಧ ಮಾಂಜ್ರೇಕರ್ ಕಿಡಿಕಾರಿದ್ದಾರೆ.

ಗೌತಮ್ ಗಂಭೀರ್ ವಿರುದ್ದ ಸಂಜಯ್ ಮಾಂಜ್ರೇಕರ್ ಆಕ್ರೋಶ.

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ದ ನಾಲ್ಕನೇ ಟೆಸ್ಟ್ ಪಂದ್ಯದ (IND vs ENG) ಮೂರನೇ ದಿನ ವಾಷಿಂಗ್ಟನ್ ಸುಂದರ್ಗೆ (Washington Sundar) ಬೌಲಿಂಗ್ ನೀಡದ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ (Sanjay Manjrekar) ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿನ ಓಲ್ಡ್ ಟ್ರಾಫರ್ಡ್ನಲ್ಲಿ 2 ವಿಕೆಟ್ ನಷ್ಟಕ್ಕೆ 225 ರನ್ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳಾದ ಜೋ ರೂಟ್ ಹಾಗೂ ಒಲ್ಲಿ ಪೋಪ್ ಅವರನ್ನು ಕಟ್ಟಿ ಹಾಕಲು ಆರಂಭದಲ್ಲಿ ಭಾರತೀಯ ಬೌಲರ್ಗಳು ಪರದಾಟ ನಡೆಸಿದ್ದರು.
ಆರಂಭದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅನ್ಶುಲ್ ಕಾಂಬೋಜ್ ಸೇರಿದಂತೆ ಕೆಲವೇ ಬೌಲರ್ಗಳಿಗೆ ಮಾತ್ರ ನಾಯಕ ಶುಭಮನ್ ಗಿಲ್ ಬೌಲಿಂಗ್ ಕೊಟ್ಟಿದ್ದರು. ಎರಡನೇ ದಿನ 46 ಓವರ್ಗಳಿಗೆ ಎರಡು ವಿಕೆಟ್ ಕಿತ್ತಿದ್ದ ಭಾರತ, ಮೂರನೇ ದಿನ 22ಕ್ಕೂ ಅಧಿಕ ಓವರ್ಗಳಲ್ಲಿಯೂ ವಿಕೆಟ್ ಅನ್ನು ಕಿತ್ತಿರಲಿಲ್ಲ. ಆ ಮೂಲಕ ಇಂಗ್ಲೆಂಡ್ ತಂಡ 76 ಓವರ್ಗಳಿಗೆ 341 ರನ್ಗಳನ್ನು ಗಳಿಸಿತ್ತು. ಅಂದ ಹಾಗೆ ವಾಷಿಂಗ್ಟನ್ ಸುಂದರ್ 69ನೇ ಓವರ್ನಲ್ಲಿ ತಮ್ಮ ಮೊದಲನೇ ಓವರ್ ಬೌಲ್ ಮಾಡಿದ್ದರು. ನಂತರ 77ನೇ ಓವರ್ನಲ್ಲಿ ವಾಷಿಂಗ್ಟನ್ ಸುಂದರ್, ಒಲ್ಲಿ ಪೋಪ್ ಅವರನ್ನು ಔಟ್ ಮಾಡಿದ್ದರು. ನಂತರ 81ನೇ ಓವರ್ನಲ್ಲಿ ಹ್ಯಾರಿ ಬ್ರೂಕ್ ಅವರ ವಿಕೆಟ್ ಅನ್ನು ವಾಷಿಂಗ್ಟನ್ ಸಂದರ್ ಕಿತ್ತಿದ್ದರು.
IND vs ENG: ರಾಹುಲ್ ದ್ರಾವಿಡ್ ಬೆನ್ನಲ್ಲೆ ರಿಕಿ ಪಾಂಟಿಂಗ್ ದಾಖಲೆ ಮುರಿದ ಜೋ ರೂಟ್!
ಈ ಬಗ್ಗೆ ಕಾಮೆಂಟರಿ ವೇಳೆ ಮಾತನಾಡಿದ ಸಂಜಯ್ ಮಾಂಜ್ರೇಕರ್, "ಕ್ಷಮಿಸಿ, ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಏಕೆಂದು ನಾನು ತಲೆ ಕೆಡಿಸಿಕೊಳ್ಳುತ್ತಿದ್ದೇನೆ ಎಂದಲ್ಲ. ಪರಿಪೂರ್ಣ ಸ್ಪಿನ್ನರ್. ಈ ಇನಿಂಗ್ಸ್ನ 65 ಓವರ್ಗಳವರೆಗೆ ನಾವು ವಿಕೆಟ್ ಕಿತ್ತಿರಲಿಲ್ಲ. ಇದರ ತರ್ಕವೇನು? ಮತ್ತು ಅವರು ಯಾವುದಕ್ಕಾಗಿ ಇದ್ದಾರೆ? ನಿಮಗೆ ಯಾವುದೇ ಭರವಸೆ ಬೇಕೆಂದರೆ, ಅವರು ಕಳೆದ ಪಂದ್ಯದಲ್ಲಿ 4 ವಿಕೆಟ್ಗಳನ್ನು ಪಡೆದಿದ್ದರು. ಇದು ವಿಚಿತ್ರ ನಡೆ, ಈ ನಡೆ ಸ್ಪಷ್ಟವಾಗಿಯೂ ಇಲ್ಲ. ನಾನು ಗೌತಮ್ ಗಂಭೀರ್ ಅವರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡುತ್ತೇನೆ," ಎಂದು ದೂರಿದ್ದಾರೆ.
"ಇದು ಕೇವಲ ನಾಯಕನಿಂದ ಮಾತ್ರವಲ್ಲ. ಶುಭಮನ್ ಗಿಲ್ ಇನ್ನೂ ಯುವ ನಾಯಕ, ಅವರಿನ್ನೂ ನಾಯಕತ್ವದಲ್ಲಿ ಪಳಗುವುದು ಇನ್ನೂ ಜಾಸ್ತಿ ಇದೆ. ಹಾಗಾಗಿ ನೀವು ಶುಭಮನ್ ಗಿಲ್ ಅವರನ್ನು ಮರೆತು ಬಿಡಿ. ಇದರ ಬಗ್ಗೆ ಕೋಚ್ ಖಚಿತವಾಗಿಯೂ ಉತ್ತರ ನೀಡಬೇಕು," ಎಂದು ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ ಆಗ್ರಹಿಸಿದ್ದಾರೆ.
IND vs ENG: ಎರಡನೇ ದಿನ ಶುಭಮನ್ ಗಿಲ್ ಎಸಗಿದ ತಪ್ಪನ್ನು ಬಹಿರಂಗಪಡಿಸಿದ ರಿಕಿ ಪಾಂಟಿಂಗ್!
ಅತ್ಯುತ್ತಮವಾಗಿ ಬೌಲ್ ಮಾಡಿದ ವಾಷಿಂಗ್ಟನ್ ಸುಂದರ್
ಮೂರನೇ ದಿನ ಅತ್ಯುತ್ತಮವಾಗಿ ಬೌಲ್ ಮಾಡಿದ ವಾಷಿಂಗ್ಟನ್ ಸುಂದರ್, ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅವರು 114 ಓವರ್ಗಳ ಹೊತ್ತಿಗೆ ಬೌಲ್ ಮಾಡಿದ್ದ 15 ಓವರ್ಗಳಿಗೆ ಎರಡು ವಿಕೆಟ್ ಪಡೆಯುವ ಮೂಲಕ 43 ರನ್ಗಳನ್ನು ನೀಡಿದ್ದಾರೆ. ಈ ವೇಳೆ ಇಂಗ್ಲೆಂಡ್ ತಂಡ ನಾಲ್ಕು ವಿಕೆಟ್ಗಳ ನಷ್ಟಕ್ಕೆ 482 ರನ್ ಗಳಿಸಿದೆ. ಜೋ ರೂಟ್ (142*) ಹಾಗೂ ನಾಯಕ ಬೆನ್ ಸ್ಟೋಕ್ಸ್ (60*) ಕ್ರೀಸ್ನಲ್ಲಿದ್ದಾರೆ.