SL vs BAN: ಬಾಂಗ್ಲಾದೇಶ ಎದುರು ಇನಿಂಗ್ಸ್ ಗೆಲುವಿನ ಸನಿಹದಲ್ಲಿ ಶ್ರೀಲಂಕಾ ತಂಡ!
ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ತಂಡದ ಎರಡನೇ ಟೆಸ್ಟ್ ಪಂದ್ಯದಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಪ್ರಥಮ ಇನಿಂಗ್ಸ್ನಲ್ಲಿ 211 ರನ್ಗಳ ಮುನ್ನಡೆ ಸಾಧಿಸಿದ ನಂತರ, ಶ್ರೀಲಂಕಾ ದ್ವಿತೀಯ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ ತಂಡದ ಆರು ವಿಕೆಟ್ಗಳನ್ನು ಕಬಳಿಸಿದೆ.

ಬಾಂಗ್ಲಾ ಎದುರು ಇನಿಂಗ್ಸ್ ಗೆಲುವಿನತ್ತ ಶ್ರೀಲಂಕಾ ತಂಡ.

ಕೊಲಂಬೊ: ಶುಕ್ರವಾರ ಎರಡನೇ ಟೆಸ್ಟ್ ಪಂದ್ಯದ (BAN vs SL) ಮೂರನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ (Bangladesh) ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಆರು ವಿಕೆಟ್ಗಳ ನಷ್ಟಕ್ಕೆ 115 ರನ್ ಗಳಿಸಿದೆ. ಹಾಗಾಗಿ ಶ್ರೀಲಂಕಾ (Sri lanka) ತಂಡ ಇನಿಂಗ್ಸ್ ಗೆಲುವು ದಾಖಲಿಸಲು ಇನ್ನು ಕೇವಲ ನಾಲ್ಕು ವಿಕೆಟ್ಗಳ ಅಗತ್ಯವಿದೆ. ಶ್ರೀಲಂಕಾ ಪ್ರಥಮ ಇನಿಂಗ್ಸ್ನಲ್ಲಿ 458 ರನ್ ಗಳಿಸುವ ಮೂಲಕ 211 ರನ್ಗಳ ಮುನ್ನಡೆ ಸಾಧಿಸಿತ್ತು, ಆದರೆ ಬಾಂಗ್ಲಾದೇಶ ತಂಡ ಇನ್ನೂ 96 ರನ್ಗಳ ಹಿಂದಿದ್ದು, ಕೇವಲ ನಾಲ್ಕು ವಿಕೆಟ್ಗಳು ಮಾತ್ರ ಬಾಕಿ ಉಳಿದಿವೆ. ಬಾಂಗ್ಲಾದೇಶ ತಂಡ ತನ್ನ ಪ್ರಥಮ ಇನಿಂಗ್ಸ್ನಲ್ಲಿ 247 ರನ್ಗಳಿಗೆ ಆಲ್ಔಟ್ ಆಗಿತ್ತು. ಅಂದ ಹಾಗೆ ನಾಲ್ಕನೇ ದಿನವಾದ ಶನಿವಾರೆ ಶ್ರೀಲಂಕಾ ತಂಡ ಎರಡನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಅಂತರದಲ್ಲಿ ಗೆಲ್ಲುವ ಸಾಧ್ಯತೆ ಇದೆ.
ಬಾಂಗ್ಲಾದೇಶ ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಅನಮುಲ್ ಹಕ್ (19), ಶಾದ್ಮನ್ ಇಸ್ಲಾಂ (12), ಮೊಮಿನುಲ್ ಹಕ್ (15), ನಾಯಕ ನಜ್ಮುಲ್ ಹುಸೇನ್ ಶಾಂತೊ (26), ಮುಷ್ಫಿಕರ್ ರಹೀಮ್ (26) ಮತ್ತು ಮೆಹಡಿ ಹಸನ್ ಮಿರಾಜ್ (11) ಅವರ ವಿಕೆಟ್ಗಳನ್ನು ಕಳೆದುಕೊಂಡಿತು. ಲಿಟನ್ ದಾಸ್ ಮೂರನೇ ದಿನದಾಟದ ಅಂತ್ಯಕ್ಕೆ 13 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಶ್ರೀಲಂಕಾ ತಂಡದ ನಾಯಕ ಧನಂಜಯ್ ಡಿ ಸಿಲ್ವಾ (13 ರನ್ಗಳಿಗೆ 2 ವಿಕೆಟ್ಗಳು) ಮತ್ತು ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ (47 ರನ್ಗಳಿಗೆ 2 ವಿಕೆಟ್ಗಳು) ತಲಾ ಎರಡು ವಿಕೆಟ್ಗಳನ್ನು ಕಬಳಿಸಿದ್ದಾರೆ.
BAN vs SL: ಬಾಂಗ್ಲಾದೇಶ ವಿರುದ್ಧ ಸತತ ಎರಡನೇ ಶತಕ ಬಾರಿಸಿದ ಪಥುಮ್ ನಿಸಾಂಕ!
ಇದಕ್ಕೂ ಮುನ್ನ ಮೂರನೇ ದಿನ ಬೆಳಿಗ್ಗೆ ಪ್ರಥಮ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ತಂಡದ ಪರ ಆರಂಭಿಕ ಆಟಗಾರ ಪಥುಮ್ ನಿಸಾಂಕ (158 ರನ್) ಸತತ ಎರಡನೇ ಟೆಸ್ಟ್ ಪಂದ್ಯದಲ್ಲಿ 150 ಕ್ಕೂ ಹೆಚ್ಚು ರನ್ ಗಳಿಸಿದರು ಮತ್ತು ಕುಸಾಲ್ ಮೆಂಡಿಸ್ 87 ಎಸೆತಗಳಲ್ಲಿ 84 ರನ್ ಗಳಿಸಿದರು. ಆ ಮೂಲಕ ಶ್ರೀಲಂಕಾ ತಂಡ ದೊಡ್ಡ ಮೊತ್ತದ ಮುನ್ನಡೆ ಸಾಧಿಸಲು ಸಹಾಯ ಮಾಡಿದರು.
Sri Lanka tighten the grip! 🇱🇰 Bangladesh end Day 3 on 115/6, still trailing by 96 runs 🏏#SriLankaCricket #SLvsBAN pic.twitter.com/mXNlAStCTQ
— Sri Lanka Cricket 🇱🇰 (@OfficialSLC) June 27, 2025
ಶ್ರೀಲಂಕಾ ಮೂರನೇ ದಿನದ ಬೆಳಿಗ್ಗೆ ಎರಡು ವಿಕೆಟ್ಗಳಿಗೆ 290 ರನ್ಗಳೊಂದಿಗೆ ಆಟ ಪ್ರಾರಂಭಿಸಿತು. ನಿಸಾಂಕ, ನೈಟ್ವಾಚ್ಮನ್ ಜಯಸೂರ್ಯ ಅವರೊಂದಿಗೆ ಕ್ರೀಸ್ಗೆ ಬಂದಿದ್ದರು. ಬಾಂಗ್ಲಾದೇಶ ತಂಡ ಮೊದಲ ಅವಧಿಯಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆಯುವ ಮೂಲಕ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿತು. ಆದರೆ ಆತಿಥೇಯ ತಂಡ ಊಟದ ವಿರಾಮದವರೆಗೆ ಆರು ವಿಕೆಟ್ಗಳನ್ನು ಕಳೆದುಕೊಂಡು 401 ರನ್ಗಳನ್ನು ಗಳಿಸಿತ್ತು. ಅಂತಿಮವಾಗಿ ಶ್ರೀಲಂಕಾ ತಂಡ ಪ್ರಥಮ ಇನಿಂಗ್ಸ್ನಲ್ಲಿ 116.5 ಓವರ್ಗಳಿಗೆ 458 ರನ್ಗಳಿಗೆ ಆಲ್ಔಟ್ ಆಯಿತು.
ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ನಲ್ಲಿ 187 ರನ್ ಗಳಿಸಿದ ನಿಸಾಂಕ ಆರು ಗಂಟೆಗಳಿಗಿಂತ ಹೆಚ್ಚು ಕಾಲ ಬ್ಯಾಟಿಂಗ್ ನಡೆಸಿ 254 ಎಸೆತಗಳಲ್ಲಿ 19 ಬೌಂಡರಿಗಳೊಂದಿಗೆ 158 ರನ್ ಗಳಿಸಿದರು. ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ 131 ರನ್ಗಳಿಗೆ ಐದು ವಿಕೆಟ್ಗಳನ್ನು ಪಡೆದರು. ಎರಡೂ ತಂಡಗಳ ನಡುವಿನ ಮೊದಲ ಟೆಸ್ಟ್ ಡ್ರಾ ಆಗಿತ್ತು.