Drop-in pitches: ಭಾರತದ ಆಸೀಸ್ ಪ್ರವಾಸಕ್ಕೂ ಮುನ್ನ ಎಂಸಿಜಿಯಲ್ಲಿ ಡ್ರಾಪ್-ಇನ್ ಪಿಚ್ ಅಳವಡಿಕೆ; ಇಲ್ಲಿದೆ ವಿಡಿಯೊ
ಡ್ರಾಪ್ ಇನ್ ಪಿಚ್ ಹೇಗಿರುತ್ತೆದೆ ಅಂದರೆ ಮೈದಾನದ ಮಧ್ಯೆ 20 ಮೀಟರ್ ಉದ್ದ, ಮೂರು ಮೀಟರ್ ಅಗಲ, 20 ಸೆಂಟಿ ಮೀಟರ್ ಆಳದಲ್ಲಿ, ಕ್ರಿಕೆಟ್ ಪಿಚ್ಗೆ ಗುಂಡಿ ತೆಗೆದಿರಲಾಗಿರುತ್ತದೆ. ಗುಂಡಿ ಸುತ್ತಲೂ ಸಿಮೆಂಟ್ ಸ್ಲಾಬ್ ನಿರ್ಮಿಸಲಾಗುತ್ತದೆ. ಮೈದಾನದ ಹೊರಗೆ ಪಿಚ್ ಅಳತೆಗೆ ತಕ್ಕಂತೆ, ಸ್ಟೀಲ್ ಕೇಸ್ ಸಿದ್ಧಪಡಿಸಲಾಗುತ್ತದೆ.

-

ಸಿಡ್ನಿ: ಮೆಲ್ಬೋರ್ನ್ ಕ್ರಿಕೆಟ್ ಮೈದಾನವು(Melbourne Cricket Ground) ದೀರ್ಘ ಬೇಸಿಗೆಯ ಕ್ರಿಕೆಟ್‌ಗೆ ಸಿದ್ಧವಾಗುತ್ತಿದೆ. ಆಸ್ಟ್ರೇಲಿಯನ್ ಫುಟ್‌ಬಾಲ್ ಲೀಗ್ ಸೀಸನ್ ಮುಗಿದ ಕಾರಣ ಇದೀಗ ಭಾರತ ವಿರುದ್ಧದ(India's tour of Australia) ವೈಟ್ ಬಾಲ್ ಸರಣಿಗಾಗಿ ಡ್ರಾಪ್-ಇನ್ ಪಿಚ್‌ಗಳನ್ನು(Drop-in pitches) ಮೈದಾನಕ್ಕೆ ಅಳವಡಿಸಲಾಗುತ್ತಿದೆ. ಭಾರತ ಸರಣಿ ಬಳಿಕ ಇಂಗ್ಲೆಂಡ್ ವಿರುದ್ಧ ಆಶಸ್ ಸರಣಿ ಆರಂಭವಾಗಲಿದೆ.
ಭಾರತ ಸರಣಿಯ ಹಲವು ಪಂದ್ಯಗಳ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ ಎಂದು ಆಯೋಜಕರು ಈಗಾಗಲೇ ಘೋಷಿಸಿದ್ದಾರೆ. ಗುರುವಾರ, ಅಕ್ಟೋಬರ್ 9 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನವು, ಡ್ರಾಪ್-ಇನ್ ಪಿಚ್‌ಗಳನ್ನು ಹೇಗೆ ಅಳವಡಿಸಲಾಗುತ್ತದೆ ಎಂಬುದರ ತೆರೆಮರೆಯ ಟೈಮ್‌ಲ್ಯಾಪ್ಸ್ ವಿಡಿಯೊವನ್ನು ಹಂಚಿಕೊಂಡಿದೆ.
ಡ್ರಾಪ್ ಇನ್ ಪಿಚ್ ಎಂದರೇನು?
ಡ್ರಾಪ್-ಇನ್ ಪಿಚ್‌ಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಲಾಗುತ್ತದೆ. ಅಚ್ಚರಿ ಅಂದರೆ ಅವುಗಳನ್ನು ಸ್ಥಳದಲ್ಲೇ ಸಿದ್ಧಪಡಿಸುವುದಿಲ್ಲ. ಮೈದಾನದ ಹೊರಗೆ ಕ್ಯುರೇಟ್ ಮಾಡಿದ ನಂತರ ಕ್ರೀಡಾಂಗಣಕ್ಕೆ ರವಾನಿಸಲಾಗುತ್ತದೆ. ಕ್ರಿಕೆಟ್ ಪಂದ್ಯ ಇದ್ದಾಗ, ರಚಿಸಿದ ಪಿಚ್ ಅನ್ನು ಕ್ರೇನ್ ಮೂಲಕ ಪಿಚ್ ಮೇಲೆ ಡ್ರಾಪ್ ಮಾಡಲಾಗುತ್ತದೆ. ಸಿಮೆಂಟ್ ಸ್ಲಾಬ್ಗಳ ಮೇಲೆ ಪಿಚ್ ಕೂರಿಸಿದ ಬಳಿಕ, ಸ್ಟೀಲ್ ಕೇಸ್ ಹೊರ ತೆಗೆಯಲಾಗುತ್ತದೆ. ಈ ಪಿಚ್ನಲ್ಲಿ ಬಿರುಕು ಕಾಣಿಸುವುದಿಲ್ಲ.
ಡ್ರಾಪ್ ಇನ್ ಪಿಚ್ ಅಳವಡಿಕೆಯ ವಿಡಿಯೊ ಇಲ್ಲಿದೆ
Oh, you wanted another timelapse?
— Melbourne Cricket Ground (@MCG) October 9, 2025
You got it. pic.twitter.com/vGjTXr3qbt
ಡ್ರಾಪ್-ಇನ್ ಪಿಚ್‌ಗಳನ್ನು ಅಳವಡಿಸುವ ಮೈದಾನದಲ್ಲಿ ಕ್ರಿಕೆಟ್ ಇಲ್ಲದ ವೇಳೆ ಫುಟ್ಬಾಲ್, ಇನ್ನಿತ್ತರ ಕ್ರೀಡೆಗಳನ್ನು ಆಯೊಜಿಸಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಈ ಪಿಚ್ ಕಂಡುಬರುತ್ತವೆ. ಕ್ರಿಕೆಟ್ ಪಂದ್ಯ ಮುಗಿದ ನಂತರ ಈ ಪಿಚ್ ಹೊರ ತೆಗೆದು ಫುಟ್ಬಾಲ್, ರಗ್ನಿಗಳಿಗೆ ಮೈದಾನ ಸಿದ್ಧಪಡಿಸಲಾಗುತ್ತದೆ. ಅಡಿಲೇಡ್ನಲ್ಲಿ ಈ ಪಿಚ್‌ಗಳನ್ನು ತಯಾರು ಮಾಡಲಾಗುತ್ತದೆ. ಕಳೆದ ವರ್ಷ ನ್ಯೂಯಾರ್ಕ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯಗಳಿಗೆ ಆಸ್ಟ್ರೇಲಿಯಾದಿಂದ ಡ್ರಾಪ್-ಇನ್ ಪಿಚ್‌ಗಳನ್ನು ತರಲಾಗಿತ್ತು.
ಡ್ರಾಪ್ ಇನ್ ಪಿಚ್ ಹೇಗಿರುತ್ತೆದೆ?
ಈ ಡ್ರಾಪ್ ಇನ್ ಪಿಚ್ ಹೇಗಿರುತ್ತೆದೆ ಅಂದರೆ ಮೈದಾನದ ಮಧ್ಯೆ 20 ಮೀಟರ್ ಉದ್ದ, ಮೂರು ಮೀಟರ್ ಅಗಲ, 20 ಸೆಂಟಿ ಮೀಟರ್ ಆಳದಲ್ಲಿ, ಕ್ರಿಕೆಟ್ ಪಿಚ್ಗೆ ಗುಂಡಿ ತೆಗೆದಿರಲಾಗಿರುತ್ತದೆ. ಗುಂಡಿ ಸುತ್ತಲೂ ಸಿಮೆಂಟ್ ಸ್ಲಾಬ್ ನಿರ್ಮಿಸಲಾಗುತ್ತದೆ. ಮೈದಾನದ ಹೊರಗೆ ಪಿಚ್ ಅಳತೆಗೆ ತಕ್ಕಂತೆ, ಸ್ಟೀಲ್ ಕೇಸ್ ಸಿದ್ಧಪಡಿಸಲಾಗುತ್ತದೆ. ಆ ಕೇಸ್ನ ಕೆಳ ಭಾಗದಲ್ಲಿ ಕಪ್ಪುಮಣ್ಣು ಅಥವಾ ಜೇಡಿಮಣ್ಣು ಹಾಕಿದರೆ, ಮೇಲಿನ ಭಾಗದಲ್ಲಿ ಹುಲ್ಲಿನ ಸಂಯೋಜನೆ ಮಾಡಲಾಗುತ್ತದೆ. ಅಥವಾ ಹುಲ್ಲಿನ ಮ್ಯಾಟನ್ನೂ ಹಾಕಲಾಗುತ್ತದೆ. ಈ ಫ್ಲಾಟ್ ಪಿಚ್ಗಳು ಬೌಲರ್ ಸ್ನೇಹಿಯಾಗಿದ್ದು, ಬೌಲರ್ಗಳು ಪೇಸ್ & ಬೌನ್ಸ್ ಹಾಕಲು ನೆರವಾಗುತ್ತದೆ. ಆಟಗಾರರಿಗೆ ಯಾವುದೇ ತೊಂದರೆ ಉಂಟಾಗದಂತೆ ತಯಾರಕರು ಎಚ್ಚರ ವಹಿಸುತ್ತಾರೆ. ಆದರೆ ಈ ಪಿಚ್ಗಳು ಹೆಚ್ಚು ಬೌನ್ಸ್ ಆಗುತ್ತವೆ.