ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fitness Test Results: ಫಿಟ್‌ನೆಸ್‌ ಪರೀಕ್ಷೆಯಲ್ಲಿ ಗಿಲ್‌, ರೋಹಿತ್‌, ಬುಮ್ರಾ ಪಾಸ್‌

ವಿರಾಟ್ ಕೊಹ್ಲಿ ಪ್ರಸ್ತುತ ಯುನೈಟೆಡ್ ಕಿಂಗ್‌ಡಂನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವ ಕಾರಣ ಅವರು ಯಾವಾಗ ಫಿಟ್ನೆಸ್‌ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಜೂನ್ 3 ರಂದು ಐಪಿಎಲ್ ಕೊನೆಗೊಂಡ ನಂತರ ಮತ್ತು ಮರುದಿನ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ಆಚರಿಸಿದಾಗಿನಿಂದ, ಕೊಹ್ಲಿ ಯುಕೆಗೆ ಹಾರಿದ್ದರು.

ಫಿಟ್‌ನೆಸ್‌ ಪರೀಕ್ಷೆಯಲ್ಲಿ ಪಾಸ್‌ ಆದ ಗಿಲ್‌, ರೋಹಿತ್‌, ಬುಮ್ರಾ

-

Abhilash BC Abhilash BC Sep 1, 2025 7:57 PM

ಬೆಂಗಳೂರು: ಇಲ್ಲಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ (ಸಿಒಇ) ಫಿಟ್‌ನೆಸ್‌ ಪರೀಕ್ಷೆಗೆ(Fitness Test Results) ಒಳಗಾದ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ(Rohit Sharma), ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ಶುಭಮನ್‌ ಗಿಲ್‌(Shubman Gill), ಜಸ್‌ಪ್ರೀತ್‌ ಬುಮ್ರಾ(Jasprit Bumrah) ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಮುಂಬರುವ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾರತ ತಂಡದ ಉಪನಾಯಕರಾಗಿರುವ ಗಿಲ್‌ ಮತ್ತು ಬುಮ್ರಾ ಸೆ.4ರ ಮೊದಲು ದುಬೈಗೆ ತೆರಳಬೇಕು. ಹೀಗಾಗಿ ಅವರು ಫಿಟ್‌ನೆಸ್‌ ಪರೀಕ್ಷೆಗೆ ಒಳಗಾಗಿದ್ದರು.

ವಾಷಿಂಗ್ಟನ್ ಸುಂದರ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರೂ ಇಲ್ಲಿ ಫಿಟ್‌ನೆಸ್ ಪರೀಕ್ಷೆ ನೀಡಿದ್ದಾರೆ ಎಂದೂ ಪಿಟಿಐ ಹೇಳಿದೆ. ಸೂರ್ಯಕುಮಾರ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಕಳೆದ ವಾರವೇ ಫಿಟ್‌ನೆಸ್‌ ಪರೀಕ್ಷೆಗೆ ಒಳಗಾಗಿ ತಮ್ಮ ಫಿಟ್‌ನೆಸ್‌ ಸಾಬೀತು ಮಾಡಿದ್ದರು. ಏಷ್ಯಾಕಪ್‌ನಲ್ಲಿ ಭಾರತ ಸೆ. 9ರಂದು ತನ್ನ ಮೊದಲ ಪಂದ್ಯದಲ್ಲಿ ಯುಎಇಯನ್ನು ಎದುರಿಸಲಿದೆ.

ಕೊಹ್ಲಿ, ರೋಹಿತ್‌ ಆಸೀಸ್‌ ಸರಣಿಗೂ ಮುನ್ನ ನಡೆಯಲಿರುವ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಸರಣಿಯಲ್ಲಿ ಭಾರತ ‘ಎ’ ಪರ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಸೀಸ್‌ನಲ್ಲಿ ಭಾರತ ತಂಡ ಅಕ್ಟೋಬರ್‌ 19ರಿಂದ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ .

ವಿರಾಟ್ ಕೊಹ್ಲಿ ಪ್ರಸ್ತುತ ಯುನೈಟೆಡ್ ಕಿಂಗ್‌ಡಂನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವ ಕಾರಣ ಅವರು ಯಾವಾಗ ಫಿಟ್ನೆಸ್‌ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಜೂನ್ 3 ರಂದು ಐಪಿಎಲ್ ಕೊನೆಗೊಂಡ ನಂತರ ಮತ್ತು ಮರುದಿನ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ಆಚರಿಸಿದಾಗಿನಿಂದ, ಕೊಹ್ಲಿ ಯುಕೆಗೆ ಹಾರಿದರು. ಮತ್ತು ಅಂದಿನಿಂದ ಅಲ್ಲಿ ವಾಸಿಸುತ್ತಿದ್ದಾರೆ.