ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ 16 ಸ್ಥಾನಗಳ ಜಿಗಿತ ಕಂಡ ಆರ್ಚರ್
ICC Odi Rankings: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದ ಇಂಗ್ಲೆಂಡ್ ಮತೋರ್ವ ಬೌಲರ್ ಆದಿಲ್ ರಶೀದ್, ಟಾಪ್ 10 ಶ್ರೇಯಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ಏಳು ಸ್ಥಾನಗಳನ್ನು ಏರಿಕೆ ಕಂಡು 628 ರೇಟಿಂಗ್ ಅಂಕದೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಭಾರತೀಯರ ಪೈಕಿ, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಮಾತ್ರ ಕ್ರಮವಾಗಿ ನಾಲ್ಕನೇ ಮತ್ತು 10 ನೇ ಸ್ಥಾನದಲ್ಲಿ ಕಾಣಿಸಿಕೊಂಡು ಅಗ್ರ 10 ರಲ್ಲಿದ್ದಾರೆ.

-

ದುಬೈ: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್(Jofra Archer) ಅವರು ನೂತನ ಐಸಿಸಿ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ(ICC Odi Rankings) 16 ಸ್ಥಾನಗಳ ಭಾರಿ ಜಿಗಿತ ಕಾಣುವ ಮೂಲಕ 3ನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಸಾಧನೆಗೈದಿದ್ದರು. ಈ ಪ್ರದರ್ಶನ ಅವರನ್ನು ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸುವಂತೆ ಮಾಡಿದೆ.
ಅಂತಿಮ ಏಕದಿನ ಪಂದ್ಯದಲ್ಲಿ ಆರ್ಚರ್ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ 680 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಶ್ರೀಲಂಕಾದ ಮಹೇಶ್ ತೀಕ್ಷಣ 659 ರೇಟಿಂಗ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆರ್ಚರ್ 654 ರೇಟಿಂಗ್ ಅಂಕಗಳನ್ನು ಹೊಂದಿದ್ದು, ಎರಡನೇ ಸ್ಥಾನಕ್ಕೆ ಜಿಗಿಯುವ ಹತ್ತಿರದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದ ಇಂಗ್ಲೆಂಡ್ ಮತೋರ್ವ ಬೌಲರ್ ಆದಿಲ್ ರಶೀದ್, ಟಾಪ್ 10 ಶ್ರೇಯಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ಏಳು ಸ್ಥಾನಗಳನ್ನು ಏರಿಕೆ ಕಂಡು 628 ರೇಟಿಂಗ್ ಅಂಕದೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ಭಾರತೀಯರ ಪೈಕಿ, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಮಾತ್ರ ಕ್ರಮವಾಗಿ ನಾಲ್ಕನೇ ಮತ್ತು 10 ನೇ ಸ್ಥಾನದಲ್ಲಿ ಕಾಣಿಸಿಕೊಂಡು ಅಗ್ರ 10 ರಲ್ಲಿದ್ದಾರೆ.
ಇದನ್ನೂ ಓದಿ ICC Rankings: ಏಕದಿನ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಸಿಕಂದರ್ ರಾಜಾ
ಬ್ಯಾಟಿಂಗ್ ಶ್ರೇಯಾಂಕದ ಟಾಪ್-10 ಸ್ಥಾನದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಶುಭ್‌ಮನ್ ಗಿಲ್ ಅಗ್ರಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ, ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ನಂತರದ ಮೂರು ಸ್ಥಾನಗಳಲ್ಲಿದ್ದಾರೆ.