ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dilip Vengsarkar: ವಾಂಖೆಡೆ ಕ್ರೀಡಾಂಗಣದಲ್ಲಿ ನಿರ್ಮಾಣವಾಗಲಿದೆ ವೆಂಗ್‌ಸರ್ಕರ್ ಪ್ರತಿಮೆ

Dilip Vengsarkar life-size statue: ಮೂರನೇ ಕ್ರಮಾಂಕದ ಬ್ಯಾಟರ್ ಆಗಿ ವೆಂಗ್‌ಸರ್ಕರ್ 42.13 ಸರಾಸರಿಯಲ್ಲಿ 6,868 ರನ್ ಗಳಿಸಿದ್ದಾರೆ. 17 ಶತಕಗಳು ಮತ್ತು 35 ಅರ್ಧ ಶತಕಗಳು ಇದರಲ್ಲಿ ಒಳಗೊಂಡಿವೆ. ಏಕದಿನ ಪಂದ್ಯಗಳಲ್ಲಿ ಅವರು 23 ಶತಕಗಳನ್ನು ಒಳಗೊಂಡ 3,508 ರನ್ (34.73 ಸರಿ) ಗಳಿಸಿದ್ದಾರೆ. ಭಾರತ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ವೆಂಗ್‌ಸರ್ಕರ್ ಆಳೆತ್ತರದ ಪ್ರತಿಮೆ ನಿರ್ಮಾಣ

-

Abhilash BC Abhilash BC Oct 9, 2025 1:03 PM

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕರ್(Dilip Vengsarkar) ಅವರ ಆಳೆತ್ತರದ ಪ್ರತಿಮೆಯನ್ನು ವಾಂಖೆಡೆ ಕ್ರೀಡಾಂಗಣದಲ್ಲಿ(Wankhede Stadium) ಅನಾವರಣಗೊಳಿಸಲಾಗುವುದು ಎಂದು ಮುಂಬೈ ಕ್ರಿಕೆಟ್ ಸಂಸ್ಥೆ (MCA ) ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಭಾರತದ ಕ್ರಿಕೆಟ್‌ ಮತ್ತು ಮುಂಬೈ ಕ್ರಿಕೆಟ್‌ಗೆ ಅವರು ಸಲ್ಲಿಸಿರುವ ಸೇವೆ ಗುರುತಿಸಿ ಗೌರವ ಸಲ್ಲಿಸಲು ಎಂಸಿಎ ಮುಂದಾಗಿದೆ. ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಯಿತು.

ವೆಂಗ್‌ಸರ್ಕರ್ ಈ ಹಿಂದೆ ಎಂಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವೆಂಗಸರ್ಕರ್ ಅವರು 1976 ರಿಂದ 1992ರ ಅವಧಿಯಲ್ಲಿ 116 ಟೆಸ್ಟ್‌ ಹಾಗೂ 129 ಏಕದಿನ ಪಂದ್ಯಗಳನ್ನು ಆಡಿದ್ದರು. ಅವರು 10 ಟೆಸ್ಟ್‌ ಮತ್ತು 18 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

ಮೂರನೇ ಕ್ರಮಾಂಕದ ಬ್ಯಾಟರ್ ಆಗಿ ಅವರು 42.13 ಸರಾಸರಿಯಲ್ಲಿ 6,868 ರನ್ ಗಳಿಸಿದ್ದಾರೆ. 17 ಶತಕಗಳು ಮತ್ತು 35 ಅರ್ಧ ಶತಕಗಳು ಇದರಲ್ಲಿ ಒಳಗೊಂಡಿವೆ. ಏಕದಿನ ಪಂದ್ಯಗಳಲ್ಲಿ ಅವರು 23 ಶತಕಗಳನ್ನು ಒಳಗೊಂಡ 3,508 ರನ್ (34.73 ಸರಿ) ಗಳಿಸಿದ್ದಾರೆ. ಭಾರತ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ Mohammed Shami: ಆಸ್ಟ್ರೇಲಿಯಾ ಸರಣಿಯಲ್ಲಿ ಸಿಗದ ಅವಕಾಶ; ರಣಜಿ ಟ್ರೋಫಿಗೆ ಮರಳಿದ ಮೊಹಮ್ಮದ್ ಶಮಿ

"ಭಾರತ ಮತ್ತು ಮುಂಬೈ ಕ್ರಿಕೆಟ್‌ಗೆ ದಿಲೀಪ್ ವೆಂಗ್‌ಸರ್ಕಾರ್ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ವಾಂಖೆಡೆ ಕ್ರೀಡಾಂಗಣದಲ್ಲಿ ಅವರ ಆಯತಾಕಾರದ ಪ್ರತಿಮೆಯನ್ನು ಸ್ಥಾಪಿಸಲು ಮಂಡಳಿ ಸರ್ವಾನುಮತದಿಂದ ನಿರ್ಧರಿಸಿದೆ" ಎಂದು ಎಂಸಿಎ ಹೇಳಿಕೆಯಲ್ಲಿ ತಿಳಿಸಿದೆ.