ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿಮ್‌ ಎಡವಟ್ಟು; ಛತ್ತೀಸ್‌ಗಢದ 21ರ ವ್ಯಕ್ತಿಗೆ ಕೊಹ್ಲಿ, ವಿಲಿಯರ್ಸ್‌ ಕರೆ!

Rajat Patidar SIM Mishap: ಸ್ವತಃ ರಜತ್‌ ಕರೆ ಮಾಡಿದ್ದು, ದಯವಿಟ್ಟು ನನ್ನ ಸಿಮ್‌ ಹಿಂದಿರುಗಿಸಿ ಎಂದಿದ್ದಾರೆ. ಇದನ್ನೂ ತಮಾಷೆಯ ಕರೆ ಎಂದು ಭಾವಿಸಿದ್ದಾರೆ. ಬಳಿಕ ರಜತ್‌ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಮನೀಶ್‌ ಮನೆಗೆ ಆಗಮಿಸಿದ ಬಳಿಕ ಅವರು ಸಿಮ್‌ ಹಿಂದಿರುಗಿಸಿದ್ದಾರೆ.

ಸಿಮ್‌ ಎಡವಟ್ಟು; ಛತ್ತೀಸ್‌ಗಢದ 21ರ ವ್ಯಕ್ತಿಗೆ ಕೊಹ್ಲಿ, ವಿಲಿಯರ್ಸ್‌ ಕರೆ!

Abhilash BC Abhilash BC Aug 11, 2025 2:44 PM

ಗರಿಯಾಬಂದ್‌(ಛತ್ತೀಸ್‌ಗಢ): ಆರ್‌ಸಿಬಿ ತಂಡದ ನಾಯಕ ರಜತ್‌ ಪಾಟೀದಾರ್‌(RCB captain Patidar) ಎಂದು ಛತ್ತೀಸ್‌ಗಢದ 21 ವರ್ಷದ ಯುವಕನಿಗೆ ವಿರಾಟ್‌ ಕೊಹ್ಲಿ, ಎಬಿಡಿ ವಿಲಿಯರ್ಸ್‌ ಕರೆ ಮಾಡಿದ ಘಟನೆ ಭಾರೀ ಸದ್ದು ಮಾಡಿತ್ತು. ಇದಕ್ಕೆ ಕಾರಣ ಸಿಮ್‌ ಕಾರ್ಡ್‌ ಎಡವಟ್ಟು. ಹೌದು ರಜತ್‌ ಬಳಸುತ್ತಿದ್ದ ಸಿಮ್‌ ಕಾರ್ಡ್‌ ಕೆಲವು ತಿಂಗಳುಗಳಿಂದ ನಿಷ್ಕ್ರಿಯವಾಗಿತ್ತು(Rajat Patidar SIM Mishap). ಟೆಲಿಕಾಂ ನಿಯಮ ಪ್ರಕಾರ 90 ದಿನಗಳ ಕಾಲ ಬಳಸದಿರುವ ಸಿಮ್‌ ಬೇರೆಯವರಿಗೆ ನೀಡಲಾಗುತ್ತದೆ. ಹೀಗಾಗಿ ರಜತ್‌ ಬಳಸುತ್ತಿದ್ದ ಅದೇ ನಂಬರ್‌ನ ಸಿಮ್‌ ಮನೀಶ್‌ಗೆ ಸಿಕ್ಕಿದೆ.

ಈ ವಿಚಾರ ಕೊಹ್ಲಿ ಮತ್ತು ವಿಲಿಯರ್ಸ್‌ಗೆ ತಿಳಿದಿರಲ್ಲಿ. ಅವರು ಎಂದಿನಂತೆ ರಜತ್‌ ನಂಬರ್‌ಗೆ ಕರೆ ಮಾಡಿದ್ದಾರೆ. ಅಲ್ಲದೆ ವಾಟ್ಸಾಪ್‌ ಸಕ್ರಿಯಗೊಳಿಸಿದ ಮನೀಶ್‌ಗೆ ರಜತ್‌ ಫೋಟೋ ಕಾಣಿಸಿದೆ. ಅಲ್ಲದೆ, ಹೀಗಾಗಿ ಕೊಹ್ಲಿ, ವಿಲಿಯರ್ಸ್‌, ಯಶ್‌ ದಯಾಳ್‌ ಕರೆ ಮಾಡಿದ್ದಾರೆ. ಯಾರೋ ತಮಾಷೆಗಾಗಿ ಮಾಡುತ್ತಿದ್ದಾರೆ ಎಂದು ಭಾವಿಸಿ ಮನೀಶ್‌ ಸುಮ್ಮನಾಗಿದ್ದಾರೆ. ಬಳಿಕ ಸ್ವತಃ ರಜತ್‌ ಕರೆ ಮಾಡಿದ್ದು, ದಯವಿಟ್ಟು ನನ್ನ ಸಿಮ್‌ ಹಿಂದಿರುಗಿಸಿ ಎಂದಿದ್ದಾರೆ. ಇದನ್ನೂ ತಮಾಷೆಯ ಕರೆ ಎಂದು ಭಾವಿಸಿದ್ದಾರೆ. ಬಳಿಕ ರಜತ್‌ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಮನೀಶ್‌ ಮನೆಗೆ ಆಗಮಿಸಿದ ಬಳಿಕ ಅವರು ಸಿಮ್‌ ಹಿಂದಿರುಗಿಸಿದ್ದಾರೆ.

ಇದನ್ನೂ ಓದಿ Sanju Samson: ರಾಜಸ್ಥಾನ್‌ ತಂಡ ತೊರೆಯುವ ಊಹಾಪೋಹಕ್ಕೆ ತೆರೆ ಎಳೆದ ಸಂಜು

ಯಾರ ಕಡೆಯಿಂದ ಯಾವುದೇ ಕಾನೂನು ಸಮಸ್ಯೆ ಅಥವಾ ದೋಷವಿಲ್ಲ. ಇದು ಕೇವಲ ಪ್ರಮಾಣಿತ ಟೆಲಿಕಾಂ ಕಾರ್ಯವಿಧಾನಗಳ ಪರಿಣಾಮವಾಗಿದೆ ಎಂದು ಸೈಬರ್ ಸೆಲ್ ಹೇಳಿದೆ. ಮನೀಶ್ ಮತ್ತು ಅವರ ಕುಟುಂಬದೊಂದಿಗೆ ಮಾತನಾಡಿ ಮತ್ತು ಅವರ ಒಪ್ಪಿಗೆಯೊಂದಿಗೆ, ಸಿಮ್ ಅನ್ನು ಇತ್ತೀಚೆಗೆ ಪಾಟಿದಾರ್‌ಗೆ ಹಿಂತಿರುಗಿಸಲಾಗಿದೆ ಎಂದು ಉಪ ಎಸ್‌ಪಿ ಮಾಹಿತಿ ನೀಡಿದರು.