ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2030ರ ಕಾಮನ್‌ವೆಲ್ತ್‌ ಗೇಮ್ಸ್‌; ಭಾರತದ ಬಿಡ್‌ಗೆ ಒಲಿಂಪಿಕ್ ಅಸೋಸಿಯೇಷನ್ ಅನುಮೋದನೆ

ಕಾಮನ್‌ವೆಲ್ತ್ ಆತಿಥ್ಯ ಭಾರತಕ್ಕೆ ಸಿಕ್ಕುವುದು ಕಷ್ಟವೇನಲ್ಲ ಎಂದು ಊಹಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರೀ ವೆಚ್ಚದ ಕಾಮನ್‌ವೆಲ್ತ್ ಗೇಮ್ಸ್‌ ಸಂಘಟನೆ ಯಾರಿಗೂ ಬೇಡವಾಗಿದೆ. ಮುಂದಿನ ವರ್ಷದ ಗೇಮ್ಸ್‌ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಬೇಕಿದ್ದರೂ, ಅದು ಇದ್ದಕ್ಕಿದಂತೆ ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿದೆ. ಆದ್ದರಿಂದ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಕ್ರೀಡಾಕೂಡ ನಡೆಯಲಿದೆ.

ಭಾರತದ ಕಾಮನ್‌ವೆಲ್ತ್‌ ಬಿಡ್‌ಗೆ ಒಲಿಂಪಿಕ್ ಅಸೋಸಿಯೇಷನ್ ಅನುಮೋದನೆ

Abhilash BC Abhilash BC Aug 13, 2025 1:10 PM

ನವದೆಹಲಿ: 2036ರ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯದ ಗುರಿಯನ್ನು ಹೊಂದಿರುವ ಭಾರತವು ಅದಕ್ಕೂ ಪೂರ್ವಭಾವಿಯಾಗಿ 2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು(Commonwealth Games 2030) ನಡೆಸಲು ಮುಂದಾಗಿದೆ. ಬುಧವಾರ ನಡೆದ ವಿಶೇಷ ಮಹಾಸಭೆಯಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್, ಕಾಮನ್‌ವೆಲ್ತ್ ಕ್ರೀಡಾಕೂಟದ ಬಿಡ್(Commonwealth Games bid) ಅನ್ನು ಔಪಚಾರಿಕ ಅನುಮೋದನೆ ನೀಡಿದೆ. ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31 ಆಗಿದೆ. 2010ರಲ್ಲಿ ಕೊನೆಯ ಬಾರಿ ಭಾರತವು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ (ದೆಹಲಿಯಲ್ಲಿ) ವಹಿಸಿತ್ತು.

ಕಾಮನ್‌ವೆಲ್ತ್ ಕ್ರೀಡಾಕೂಟದ ಬಿಡ್‌ ಮಾಡಿರುವುದು ಒಲಿಂಪಿಕ್ಸ್‌ ಪೂರ್ವಸಿದ್ಧತೆ ಮಾಡಲು ಎಂದು ಅಂದಾಜಿಸಲಾಗಿದೆ. ಅಲ್ಲದೆ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಲೋಕಸಭೆಯಲ್ಲಿ ಮಾತ್ರವಲ್ಲದೆ ರಾಜ್ಯಸಭೆಯಲ್ಲೂ ಪಾಸಾಗಿದೆ. ರಾಷ್ಟ್ರೀಯ ಉದ್ದೀಪನ ನಿಗ್ರಹ (ತಿದ್ದುಪಡಿ) ಮಸೂದೆ ಸಹ ಪಾಸಾಗಿದ್ದು, ಎರಡೂ ಮಸೂದೆಗಳು ರಾಷ್ಟ್ರಪತಿಗಳಿಂದ ಅಂಗೀಕಾರಗೊಳ್ಳುವುದು ಬಾಕಿ ಇದೆ. ಈ ಎಲ್ಲ ಬೆಳವಣಿಗೆ ನೋಡುವಾಗ ಕಾಮನ್‌ವೆಲ್ತ್ ಮತ್ತು ಒಲಿಂಪಿಕ್ ಭಾರತದಲ್ಲಿ ನಡೆಯುವುದು ಖಚಿತವಾದಂತಿದೆ.

ಕಾಮನ್‌ವೆಲ್ತ್ ಆತಿಥ್ಯ ಭಾರತಕ್ಕೆ ಸಿಕ್ಕುವುದು ಕಷ್ಟವೇನಲ್ಲ ಎಂದು ಊಹಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರೀ ವೆಚ್ಚದ ಕಾಮನ್‌ವೆಲ್ತ್ ಗೇಮ್ಸ್‌ ಸಂಘಟನೆ ಯಾರಿಗೂ ಬೇಡವಾಗಿದೆ. ಮುಂದಿನ ವರ್ಷದ ಗೇಮ್ಸ್‌ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಬೇಕಿದ್ದರೂ, ಅದು ಇದ್ದಕ್ಕಿದಂತೆ ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿದೆ. ಆದ್ದರಿಂದ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಕ್ರೀಡಾಕೂಡ ನಡೆಯಲಿದೆ.

ಇದನ್ನೂ ಓದಿ ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತ ಬಾಕ್ಸರ್‌ ಮನೋಜ್‌ ನಿವೃತ್ತಿ