ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishabh Pant: ಪಂತ್‌ ಗಾಯದ ಬಗ್ಗೆ ಹೊರಬಿತ್ತು ಅಪ್ಡೇಟ್

ಪಂತ್‌ ಗಾಯದ ಬಗ್ಗೆ ಮಾಹಿತಿ ನೀಡಿರುವ ಸಾಯಿ ಸುದರ್ಶನ್‌ ಮತ್ತು ನಾಯಕ ಗಿಲ್‌, ಪಂತ್‌ ಅವರನ್ನು ನೋಡುವಾಗ ಅವರು ಆಡುವುದು ಅನುಮಾನ. ಹೀಗಾಗಿ ನಾವು ಕೀಪಿಂಗ್‌ಗೆ ಜುರೇಲ್‌ ಅವರನ್ನು ಆಯ್ಕೆ ಮಾಡಬೇಕಿದೆ ಎಂದರು. ಮಾಜಿ ಕೋಚ್‌ ರವಿಶಾಸ್ತ್ರಿ ಕೂಡ ಪಂತ್‌ ಆಡುವುದು ಕಷ್ಟ ಸಾಧ್ಯ ಎಂದಿದ್ದಾರೆ.

ಪಂತ್‌ ಗಾಯದ ಬಗ್ಗೆ ಹೊರಬಿತ್ತು ಅಪ್ಡೇಟ್

Profile Abhilash BC Jul 24, 2025 11:59 AM

ಮ್ಯಾಂಚೆಸ್ಟರ್‌: ಇಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ(IND vs ENG 4th Test) ಮೊದಲ ದಿನಾಟದಲ್ಲಿ 37 ರನ್ ಗಳಿಸಿದ್ದಾಗ ಕ್ರಿಸ್ ವೋಕ್ಸ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಮಾಡಲು ಯತ್ನಿಸುವಾಗ ಕಾಲಿಗೆ ಗಾಯಮಾಡಿಕೊಂಡಿದ್ದ ರಿಷಭ್ ಪಂತ್(Rishabh Pant) ಅವರ ಗಾಯದ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು ಅವರು ಪಂದ್ಯದಲ್ಲಿ ಮುಂದುವರಿಯುವುದು ಅನುಮಾನ ಎಂದು ತಿಳಿಸಿದೆ.

ಪಂತ್ ಕಾಲಿನ ಬೆರಳಿಗೆ ಬಲವಾದ ಪೆಟ್ಟಾಗಿದ್ದು, ಊದಿಕೊಂಡು ರಕ್ತ ಸೋರಿತ್ತು. ನಡೆಯಲು ಕಷ್ಟಪಟ್ಟ ಪಂತ್‌ರನ್ನು ಕಾರ್ಟ್‌ನಲ್ಲಿ ಕರೆದೊಯ್ಯಲಾಗಿತ್ತು. ಇದಾದ ಬಳಿಕ ಸ್ಕ್ಯಾನಿಂಗ್‌ಗೆ ಒಳಗಾಗಿದ್ದರು. ಈ ವೇಳೆ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದಾಗಿ ಬಿಸಿಸಿಐ ಮೂಲವೊಂದು ಮಾಹಿತಿ ನೀಡಿದೆ. ಪಂತ್‌ ಬ್ಯಾಟಿಂಗ್‌ ನಡೆಸದೇ ಹೋದರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗುವುದರಲ್ಲಿ ಅನುಮಾನವೇ ಬೇಡ.

ಪಂತ್‌ ಗಾಯದ ಬಗ್ಗೆ ಮಾಹಿತಿ ನೀಡಿರುವ ಸಾಯಿ ಸುದರ್ಶನ್‌ ಮತ್ತು ನಾಯಕ ಗಿಲ್‌, ಪಂತ್‌ ಅವರನ್ನು ನೋಡುವಾಗ ಅವರು ಆಡುವುದು ಅನುಮಾನ. ಹೀಗಾಗಿ ನಾವು ಕೀಪಿಂಗ್‌ಗೆ ಜುರೇಲ್‌ ಅವರನ್ನು ಆಯ್ಕೆ ಮಾಡಬೇಕಿದೆ ಎಂದರು. ಮಾಜಿ ಕೋಚ್‌ ರವಿಶಾಸ್ತ್ರಿ ಕೂಡ ಪಂತ್‌ ಆಡುವುದು ಕಷ್ಟ ಸಾಧ್ಯ ಎಂದಿದ್ದಾರೆ.

ಮೊದಲ ದಿನದಂತ್ಯಕ್ಕೆ ಭಾರತ 4 ವಿಕೆಟ್‌ ನಷ್ಟಕ್ಕೆ 260 ರನ್‌ ಕಲೆಹಾಕಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದೆ. ತಲಾ 19 ರನ್‌ ಗಳಿಸಿರುವ ರವೀಂದ್ರ ಜಡೇಜಾ ಮತ್ತು ಶಾರ್ದೂಲ್‌ ಠಾಕೂರ್‌ ಕ್ರೀಸ್‌ ಕಾಯ್ದುಕೊಂಡಿದಾರೆ.

ಇದನ್ನೂ ಓದಿ IND vs ENG: ಜೈಸ್ವಾಲ್‌, ಸುದರ್ಶನ್‌ ಅರ್ಧಶತಕ, ಭಾರತ ತಂಡಕ್ಕೆ ಉತ್ತಮ ಆರಂಭ!