ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಿಷಭ್ ಪಂತ್ ಕಾಲಿನ ಬೆರಳು ಮುರಿತ; 2 ತಿಂಗಳ ವಿಶ್ರಾಂತಿ ಸಾಧ್ಯತೆ

ಮೂಳೆ ಮುರಿತಗೊಂಡ ಪಂತ್‌ ಎರಡು ತಿಂಗಳ ವಿಶ್ರಾಂತಿ ಪಡೆದರೆ ಅವರು ಭಾರತದ ವೈಟ್‌ ಬಾಲ್‌ ಸರಣಿ ಮತ್ತು ಏಷ್ಯಾ ಕಪ್ (ನಡೆದರೆ) ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಅವರು ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತವರು ಟೆಸ್ಟ್ ಸರಣಿ ವೇಳೆಗೆ ಭಾರತ ತಂಡ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ರಿಷಭ್ ಪಂತ್ ಕಾಲಿನ ಬೆರಳು ಮುರಿತ; 2 ತಿಂಗಳ ವಿಶ್ರಾಂತಿ ಸಾಧ್ಯತೆ

Profile Abhilash BC Jul 24, 2025 2:52 PM

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ಎದುರಿನ ನಾಲ್ಕನೇ ಟೆಸ್ಟ್‌ನ(IND vs ENG 4th Test) ಮೊದಲ ದಿನದಂದು ಗಾಯಗೊಂಡ ರಿಷಭ್ ಪಂತ್(Rishabh Pant) ಅವರ ಬಲಗಾಲಿನ ಬೆರಳಿನಲ್ಲಿ ಮುರಿತ ಉಂಟಾಗಿದ್ದು, ಇದರಿಂದ ಚೇತರಿಸಿಕೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದು ಎಂದು ತಿಳಿದು ಬಂದಿದೆ.

ಮೊದಲ ದಿನದ ಅಂತಿಮ ದಿನದ ಅವಧಿಯಲ್ಲಿ ಭಾರತದ ಉಪನಾಯಕ ಪಂತ್‌ ಅವರು ಕ್ರಿಸ್ ವೋಕ್ಸ್ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸುವಾಗ ಅವರ ಬಲಗಾಲಿಗೆ ಹೊಡೆತ ಬಿದ್ದಿತು. ಆ ಸಮಯದಲ್ಲಿ ಅವರು 37 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಗಾಯದ ಬಳಿಕ ಪಂತ್‌ಗೆ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ.

‌ಪಂತ್‌ ಅವರು ಸ್ಕ್ಯಾನಿಂಗ್‌ಗೆ ಒಳಪಟ್ಟ ವೇಳೆ ಅವರ ಮೂಳೆ ಮುರಿತಗೊಂಡಿರುವುದು ದೃಢಪಡಿದೆ. ಆದರೂ ಪಂತ್ ತಂಡದ ಶಿಬಿರವನ್ನು ತೊರೆದಿಲ್ಲ. ಗಾಯಗೊಂಡ ಪಾದದ ಮೇಲೆ ಅವರು ಇನ್ನೂ ಯಾವುದೇ ಒತ್ತಡ ಹೇರಲು ಸಾಧ್ಯವಾಗುತ್ತಿಲ್ಲ.

"ಈ ಸಮಯದಲ್ಲಿ, ಪಂತ್‌ಗೆ ಪಾದದ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ನೋಡಿದಂತೆ, ಅವರನ್ನು ನಿನ್ನೆ ನಡೆಯಲೂ ಕೂಡ ಸಾಧ್ಯವಾಗಿರಲಿಲ್ಲ. ಹೀಗಿರುವ ಅವರು ಆಡಲು ಹೇಗೆ ಸಾಧ್ಯ" ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.