ICC ODI Rankings: ನಿವೃತ್ತಿ ವದಂತಿಗಳ ನಡುವೆಯೇ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಜಿಗಿದ ರೋಹಿತ್
ರೋಹಿತ್ ಮುಂಬೈನಲ್ಲಿ ಭಾರತದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ಅಭ್ಯಾಸ ನಡೆಸುತ್ತಿದರೆ, ಕೊಹ್ಲಿ ಲಂಡನ್‌ನಲ್ಲಿ ಒಳಾಂಗಣ ನೆಟ್ಸ್ ಸೆಷನ್ ನಡೆಸುತ್ತಿದ್ದಾರೆ. ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಅಭಿಯಾನದ ಸಮಯದಲ್ಲಿ ರೋಹಿತ್ ಮತ್ತು ಕೊಹ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡರು.


ದುಬೈ: ನಿವೃತ್ತಿ ವದಂತಿಗಳ ನಡುವೆಯೇ ಐಸಿಸಿ ಏಕದಿನ ಶ್ರೇಯಾಂಕದಲ್ಲಿ(ICC ODI Rankings) ರೋಹಿತ್ ಶರ್ಮಾ 2 ನೇ ಸ್ಥಾನಕ್ಕೆ ಏರಿದ್ದಾರೆ. 38 ವರ್ಷದ ರೋಹಿತ್ ಶರ್ಮಾ(Rohit Sharma) ಬುಧವಾರ(ಆ.13) ಐಸಿಸಿ ಬಿಡುಗಡೆ ಮಾಡಿದ ನೂತನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಮೇಲಕ್ಕೇರಿ 2 ನೇ ಸ್ಥಾನಕ್ಕೆ ತಲುಪಿದ್ದಾರೆ. ಸದ್ಯ ರೋಹಿತ್ 756 ರೇಟಿಂಗ್ ಅಂಕ ಹೊಂದಿದ್ದಾರೆ. ಶುಭಮನ್ ಗಿಲ್(784) ಮೊದಲ ಸ್ಥಾನದಲ್ಲಿ ಮುಂದುವರಿದರೆ, ವಿರಾಟ್ ಕೊಹ್ಲಿ(736) ನಾಲ್ಕನೇ ಸ್ಥಾನ ಉಳಿಸಿಕೊಂಡಿದ್ದಾರೆ.
ರೋಹಿತ್ ಮತ್ತು ವಿರಾಟ್ ಕೊಹ್ಲಿ 2025 ರ ಐಪಿಎಲ್ ಋತುವಿನ ನಂತರ ಸ್ಪರ್ಧಾತ್ಮಕ ಕ್ರಿಕೆಟ್ ಆಡದಿದ್ದರೂ ಸಹ. ಏಕದಿನ ಶ್ರೇಯಾಂಕದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಪಾಕಿಸ್ತಾನದ ಏಕದಿನ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರರ್ಶನ ತೋರಿದ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಂ 3 ನೇ ಸ್ಥಾನಕ್ಕೆ ಕುಸಿದ ಕಾರಣ ಇದರ ಲಾಭ ರೋಹಿತ್‌ಗೆ ದೊರಕಿತು. ಕೊಹ್ಲಿ ಮತ್ತು ರೋಹಿತ್ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನಲಾಡಲು ಸಜ್ಜಾಗುತ್ತಿದ್ದಾರೆ.
ರೋಹಿತ್ ಮುಂಬೈನಲ್ಲಿ ಭಾರತದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ಅಭ್ಯಾಸ ನಡೆಸುತ್ತಿದರೆ, ಕೊಹ್ಲಿ ಲಂಡನ್‌ನಲ್ಲಿ ಒಳಾಂಗಣ ನೆಟ್ಸ್ ಸೆಷನ್ ನಡೆಸುತ್ತಿದ್ದಾರೆ. ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಅಭಿಯಾನದ ಸಮಯದಲ್ಲಿ ರೋಹಿತ್ ಮತ್ತು ಕೊಹ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡರು. ಐಪಿಎಲ್ 2025 ರ ಋತುವಿನ ಮಧ್ಯದಲ್ಲಿ ಈ ಜೋಡಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದರು.
ಇದನ್ನೂ ಓದಿ ICC T20 Rankings: ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ಏರಿಕೆ ಕಂಡ ದೀಪ್ತಿ ಶರ್ಮಾ!
ಪುರುಷರ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತದ ಐದು ಆಟಗಾರರು ಅಗ್ರ 15 ರಲ್ಲಿದ್ದಾರೆ. ಶ್ರೇಯಸ್ ಅಯ್ಯರ್ ಎಂಟನೇ ಸ್ಥಾನದಲ್ಲಿದ್ದರೆ, ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ 15 ನೇ ಸ್ಥಾನದಲ್ಲಿದ್ದಾರೆ.
ಟಾಪ್-10 ಬ್ಯಾಟರ್‌ಗಳು
ಶುಭಮನ್ ಗಿಲ್: 784
ರೋಹಿತ್ ಶರ್ಮಾ: 756
ಬಾಬರ್ ಅಜಮ್: 751
ವಿರಾಟ್ ಕೊಹ್ಲಿ: 736
ಡ್ಯಾರಿಲ್ ಮಿಚೆಲ್: 720
ಚರಿತ್ ಅಸಲಂಕಾ: 719
ಹ್ಯಾರಿ ಟೆಕ್ಟರ್: 708
ಶ್ರೇಯಸ್ ಅಯ್ಯರ್: 704
ಇಬ್ರಾಹಿಂ ಜದ್ರಾನ್: 676
ಕುಸಲ್ ಮೆಂಡಿಸ್: 669